
ಹುಮನಾಬಾದ್: ಮಾ.28:ಮಹರ್ಷಿ ವಾಲ್ಮೀಕಿ ಆದರ್ಶಗಳು ಸಮಾಜಕ್ಕೆ ದಾರಿ ದೀಪವಾಗಿದ್ದು ಸಮಾಜದ ಯುವ ಸಮುದಾಯ ಮಹರ್ಷಿ ವಾಲ್ಮಿಕ ಅವರು ತತ್ವ ಆದರ್ಶಗಳನ್ನು ಜೀವನದಲ್ಲಿ ಪಾಲಿಸಿಕೊಂಡು ಬರಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ್ ಪಾಟೀಲ ನುಡಿದರು.
ತಾಲ್ಲೂಕಿನ ಹಳ್ಳಿಖೇಡ(ಬಿ)ನಲ್ಲಿ ಟೋಕರಿ ಕೋಳಿ ಸಮಾಜ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ದೇವಸ್ಥಾನ ಟ್ರಸ್ಟ್ನಿಂದ ಶನಿವಾರ ನಡೆದ ಆದಿಕವಿ ಮಹರ್ಷಿ ವಾಲ್ಮೀಕಿ ಮೂರ್ತಿ ಹಾಗೂ ವೃತದ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಮಾಯಣ ಗ್ರಂಥ ಪ್ರತಿಯೊಬ್ಬರು ಕಡ್ಡಾಯವಾಗಿ ಅಧ್ಯಯನ ಮಾಡಬೇಕು. ಸಮಾಜದ ಯುವಕರು ಮಹರ್ಷಿ ವಾಲ್ಮೀಕಿ ಅವರ ಆದರ್ಶ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉನ್ನತ ಶಿಕ್ಷಣ ಕಲಿಯಬೇಕು, ಎಂದರು.
ಸಮಾಜದ ಜನ ಶೈಕ್ಷಣಿಕವಾಗಿ ಪ್ರಗತಿ ಹೊಂದಿದ್ದಾಗ ಮಾತ್ರ ಸಮಗ್ರವಾಗಿ ಅಭಿವ್ರದ್ದಿಯಾಗಲು ಸಾಧ್ಯ, ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಭಾರತದ ಸಂಸ್ಕøತಿಯ ಪ್ರತೀಕವಾಗಿದೆ. ರಾಮಾಯಣ ಮಾನವೀಯ ಮೌಲ್ಯಗಳಿಂದ ತುಂಬಿವೇ ಎಂದ ಅವರು ರಾಮಾಯಣದಂತಹ ಮಹಾ ಕಾವ್ಯ ರಚಿಸಿದ ವಾಲ್ಮೀಕಿ ಜೀವನ ಆದರ್ಶಗಳ ನಮ್ಮ ನಿಮ್ಮೇಲರಿಗೆ ಸ್ಪೂರ್ತಿಯಾಗಬೇಕು ಎಂದರು.
ಬಿಎಸ್‍ಎಸ್‍ಕೆ ಅಧ್ಯಕ್ಷ ಸುಭಾಷ ಕಲ್ಲೂರು ಅವರು ಮಾತನಾಡಿ, ಆದಿ ಕವಿ ಮಹರ್ಷಿ ವಾಲ್ಮೀಕಿ ಅವರು ಸಮಾಜಕ್ಕೆ ಶ್ರೀ ರಾಮಾಯಣ ಶ್ರೇಷ್ಠ ಗ್ರಂಥ ನೀಡಿದ್ದಾರೆ. ಎಂದು ಸ್ಮರಿಸಿದರು.
ಬಿಜೆಪಿ ಮುಖಂಡ ಡಾ. ಸಿದ್ದಲಿಂಗಪ್ಪಾ ಪಾಟೀಲ ಮಾತನಾಡಿ ವಾಲ್ಮೀಕಿ ಸಮಾಜಕ್ಕೆ ಸರ್ಕಾರ ಹಲವಾರು ಸೌಲಭ್ಯ ನೀಡುತಿದ್ದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಸ್ವಂತ ಮುಲ್ಲಾ ಮರಿ ಮಠದ ಶಂಕರ್ ಲಿಂಗ ಮಹಾರಾಜರು, ವಿಠಲಪುರ ಮಾಣಿಕೇಶ್ವರಿ ಆಶ್ರಮದ ಶಾಂತಿ ಬಾಬಾ ದಿವ್ಯ ಸಾನಿಧ್ಯದಲ್ಲಿ ಮೂರ್ತಿ ಅನಾವರಣ ಕಾರ್ಯಕ್ರಮ ಜರುಗಿತು.
ಪುರಸಭೆ ಅಧ್ಯಕ್ಷ ನಾಗರಾಜ ಹಿಬಾರೆ, ಪ್ರಮುಖರಾದ ಸೋಮನಾಥ್ ಪಾಟೀಲ್. ಬ್ಯಾಂಕ್ ರೆಡ್ಡಿ. ಸಂತೋಷ್ ಪಾಟೀಲ, ಟೋಕರಿ ಕೋಳಿ ಸಮಾಜದ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದರ, ನೆಹರು ಬಾವಗಿ. ರಘು ಜಮಾದರ. ನಾಗಭೂಷಣ್ ಸಂಗಮ್. ಮಾಣಿಕರಾವ ಕನಕಟ್ಟಾ ಪ್ರಾಸ್ಥಾವಿಕ ಮಾತನಾಡಿದರು. ಮಹರ್ಷಿ ವಾಲ್ಮೀಕಿ ಮೂರ್ತಿ ಅನಾವರಣ ಸಮಿತಿ ಅಧ್ಯಕ್ಷ ಅರುಣ್ ಪಿ ಭಾವಗಿ, ನೆಹರು ಬಾವಗಿ, ರಘು ಜಮಾದಾರ್, ನಾಗಶೆಟ್ಟಿ ಬಂಬುಳಗಿ, ರಾಜಶೇಖರ್ ಜಮಾದಾರ, ಸಿದ್ರಾಮೇಶ್ವರ ಔರಾದಕರ್, ರಾಜಶೇಖರ್ ಖಾಶೆಂಪುರ, ರಾಜಪ್ಪ ನಿಂಬುರೆ, ಜಯರಾಜ ಸೆಡಂಕರ್, ಸಂತೋಷ ಬಾಗಗಿ ಇದ್ದರು.