ಮಹಮ್ಮದ್ ಆಸಿಫೊದ್ದೀನ್‍ಗೆ ಶಿಕ್ಷಣ ತಜ್ಞ ಪ್ರಶಸ್ತಿ

ಬೀದರ:ನ.5: ಇಲ್ಲಿಯ ವಿಜಡಂ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್ಸ್ ಕಾರ್ಯದರ್ಶಿ ಮಹಮ್ಮದ್ ಆಸಿಫೊದ್ದೀನ್ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ಖಾಸಗಿ ಸುದ್ದಿ ವಾಹಿನಿ ಇ 7 ನ್ಯೂಸ್ ಅತ್ಯುತ್ತಮ ಶಿಕ್ಷಣ ತಜ್ಞ ಪ್ರಶಸ್ತಿ ನೀಡಿದೆ.

ವಾಹಿನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ್ ಇಲ್ಯಾಸ್ ಅಹಮ್ಮದ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಮಹಮ್ಮದ್ ಆಸಿಫೊದ್ದೀನ್ ಅವರು ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯಲ್ಲೂ ವಿಜಡಂ ಕಾಲೇಜು ಉತ್ತಮ ಸಾಧನೆ ತೋರಿ ಅನೇಕ ವಿದ್ಯಾರ್ಥಿಗಳ ವೈದ್ಯಕೀಯ ಕೋರ್ಸ್ ಪ್ರವೇಶದ ಕನಸು ನನಸಾಗಿದೆ ಎಂದು ಅವರು ಹೇಳಿದರು.

ಪ್ರಸಕ್ತ ವರ್ಷ ವಿಜಡಂ ಕಾಲೇಜಿನ 30 ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ಉಚಿತ ವೈದ್ಯಕೀಯ ಸೀಟು ಗಳಿಸುವ ನಿರೀಕ್ಷೆ ಇದೆ. ಕೊರೊನಾ ಕಾರಣ ಸಂಕಷ್ಟದಲ್ಲಿರುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗಲು ಪಿಯುಸಿ ಪ್ರಥಮ ವರ್ಷದ ಪ್ರವೇಶಕ್ಕೆ ಶುಲ್ಕದಲ್ಲಿ ರಿಯಾಯಿತಿ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.

ಮುಫ್ತಿ ಅಫ್ಸರ್ ಅಲಿ, ನಯೀಮಿ ನದ್ವಿ, ಮಹಮ್ಮದ್ ನಿಜಾಮುದ್ದೀನ್, ಮಹಮ್ಮದ್ ದಾನೀಶ್, ಪ್ರಶಾಂತಕುಮಾರ, ಸೈಯದ್ ಮುಜೀಬ್ ಇದ್ದರು.