ಮಹಮದ್ ನುಮಾನ್‌ಗೆ ಡಾಕ್ಟರೆಟ್

ಬೆಂಗಳೂರು, ಸೆ.೨೨- ಕೋವಿಡ್ ಹಾಗೂ ಲಾಕ್‌ಡೌನ್ ಸಂದರ್ಭದಲ್ಲಿ ಅನನ್ಯ ಸೇವೆ ಗುರುತಿಸಿ ಬೆಂಗಳೂರಿನ ಮಹಮ್ಮದ್ ನುಮಾನ್ ಅವರಿಗೆ ಗೌರವ್ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.

ಫರಿದಾಬಾದ್ ನ ಕ್ಯಾಸಲ್ ಆಫ್ ಆರ್ಟ್ ಥಿಯೇಟರ್‌ನಲ್ಲಿ ಮ್ಯಾಜಿಕ್ ಬುಕ್ ಆಫ್ ರೆಕಾರ್ಡ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಮಹಮ್ಮದ್ ನುಮಾನ್ ಅವರಿಗೆ ಗೌರವ್ ಡಾಕ್ಟರೇಟ್ ಪ್ರದಾನ ನೀಡಿ, ಗೌರವಿಸಲಾಯಿತು.

ಸುಮಾರು ೨೦ ರಾಜ್ಯಗಳಿಂದ ಸುಮಾರು ೮೦ ಸಮಾಜ ಸೇವಕರು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಡಾ.ತಮನ್ನಾ ಬಹ್ಲೋಲ್, ಅಫ್ಘಾನಿಸ್ತಾನದ ಸಾಮಾಜಿಕ ಕಾರ್ಯಕರ್ತ ಡಾ.ಬಿ.ಲಕ್ಷ್ಮಿಕಾಂತಂ, ನಿವೃತ್ತ ಐಎಎಸ್,ಡಾ. ಗಂಗಲ್ಲ, ವಿಜಯ್ ಕುಮಾರ್, ಬರಹಗಾರ, ಡಾ.ಸುನೀಲ್ ಕುಮಾರ್ ಮಿಶ್ರಾ ಸೇರಿದಂತೆ ಪ್ರಮುಖರಿದ್ದರು.