ಮಹನೀಯರ ಸಾಧನೆ ತಿಳಿಯಲು ಜಯಂತಿ ಅಗತ್ಯ:ರಾಮಣ್ಣ

(ಸಂಜೆವಾಣಿ ವಾರ್ತೆ)
ಔರಾದ :ಜ.17: ಶಿವಶರಣ ಶ್ರೇಷ್ಠರಲ್ಲಿ ಒಬ್ಬರಾಗಿದ್ದ ಸಿದ್ದರಾಮೇಶ್ವರರು ಕರ್ಮಯೋಗದಿಂದ ಪ್ರಸಿದ್ಧಿ ಪಡೆದ ಮಹಾಪುರುಷರಾಗಿದ್ದಾರೆ’ ಕರ್ಮಯೋಗಿ ಶಿವಯೋಗಿ ಸಿದ್ಧರಾಮೇಶ್ವರರು ಸಮಾಜಕ್ಕೆ ಆದರ್ಶರು ಹಾಗೂ ಸಮಾಜ ಉದ್ಧಾರಕ್ಕೆ ಶ್ರಮಿಸಿದವರು, ಮಹನೀಯರ ಸಾಧನೆ ತಿಳಿಯಲು ಜಯಂತಿ ಅಗತ್ಯ ಎಂದು ಹಿರಿಯ ಮುಖಂಡ ರಾಮಣ್ಣ ವಡೆಯರ್ ತಿಳಿಸಿದರು.
ಪಟ್ಟಣದ ರಾಮನಗರವ ಬಡಾವಣೆಯಲ್ಲಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಣೆ ಅಂಗವಾಗಿ ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಿಹಿ ಹಂಚಲಾಯಿತು. ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಶಿವಯೋಗಿ ಸಿದ್ಧರಾಮೇಶ್ವರವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿರುವ ಸಾಮಾಜಿಕ ಪಿಡುಗು ಹಾಗೂ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಆದರ್ಶರಾಗಿದ್ದಾರೆ. ಇವರ ತತ್ವಸಿದ್ಧಾಂತಗಳನ್ನು ಪ್ರತಿಯೊಬ್ಬರು ಸಹ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಅವರ ವಿಚಾರ ಧಾರೆಗಳು ಸಾರ್ವಕಾಲಿಕ ಎಂದು ಹೇಳಿದರು.
ಪಟ್ಟಣ ಪಂಚಾಯತ್ ಸದಸ್ಯರಾದ ಸಂಜೀವ ಕುಮಾರ್ ಒಡೆಯರ ಕಾರ್ಯಕ್ರಮದಲ್ಲಿ ಮಾತನಾಡಿ,12ನೇ ಶತಮಾನದಲ್ಲಿನ ಸಾಮಾಜಿಕ ಕ್ರಾಂತಿಗೆ ಶಿವಯೋಗಿ ಸಿದ್ದರಾಮೇಶ್ವರರ ಕೊಡುಗೆ ಗಮನಾರ್ಹವಾದುದು. ಅವರು ಅಸಮಾನತೆ, ವರ್ಣ, ಜಾತಿ, ಲಿಂಗಭೇದವನ್ನು ತೊಡೆದು ಹಾಕುವ ಕೆಲಸವನ್ನು ವಚನಗಳ ಮೂಲಕ ಮಾಡಿದವರು. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಮೂರನೇ ಅಧ್ಯಕ್ಷರಾಗಿ ಅವರು ಸಮಾಜದಲ್ಲಿ ಕೆಲಸ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಯಾದು ಮೆತ್ರೆ,ಸಂತೋಷ ವಡಿಯಾರ,
ಚಂದ್ರಕಾಂತ ವಡಿಯರ, ಶಂಕರ ವಡಿಯರ, ನಾಗನಾಥ ಸಾಳಂಗೆ,ಮಾರೋತಿ ವಡಿಯರ, ಬಾಬು ಪವಾರ,ದೀಲಿಪ ವಡಿಯರ, ಸುಭಾಷ ಕಾಸಲೆ, ಸೇರಿದಂತೆ ಸಮುದಾಯದ ಮುಖಂಡರು ಸಾರ್ವಜನಿಕರು ಉಪಸ್ಥಿತರಿದ್ದರು.