ಮಹನೀಯರ ಆದರ್ಶ ತತ್ವಗಳು ಯುವ ಪೀಳಿಗೆಗೆ ಸ್ಪೂರ್ತಿ

ಸವದತ್ತಿ, ನ1- ಸರಕಾರಗಳು ಇಂತಹ ಮಹಾನ್ ಪುರುಷರ ಜಯಂತಿಗಳನ್ನು ಪ್ರತಿ ಗ್ರಾಮ ಪಂಚಾಯತ ನಿಂದ ಪ್ರಧಾನಿ ವರೆಗೂ ಇವರ ಜಯಂತಿಯನ್ನು ಆಚರಿಸುತ್ತಿದ್ದಾರೆ ಎಂದರೆ ಆ ಮಹಾನ್ ಪುರುಷರು ದೇಶಕ್ಕಾಗಿ ದೇಶದ ಜನತೆಗೆ ತಮ್ಮದೇ ಆದ ಬಹು ಚೊಡ್ಡಕೊಡುಗೆಯನ್ನು ನೀಡಿದ್ದಾರೆ. ಈ ಮಹನೀಯರ ಜೀವನ ತತ್ವಾದರ್ಶಗಳು ನಮ್ಮೆಲ್ಲರಿಗೂ ಮಾರ್ಗದರ್ಶನ ಮಾಡುತ್ತಿವೆ. ಅದೇ ರೀತಿಯಾಗಿ ಡಾಕ್ಟರ ಬಿ. ಆರ್. ಅಂಬೇಡ್ಕರರವರು ಬರೆದ ಸಂವಿಧಾನ ಜಗತ್ತಿಗೆ ಮಾರ್ಗದರ್ಶನ ಮಾಡುತ್ತಿದೆ. ಈ 21ನೇಯ ಶತಮಾನದಲ್ಲಿ ಯಾವುದೇ ರೀತಿಯ ಜಾತಿಭೇದಬಾವ ಮಾಡದೆ ನಾವು ನೀವೆಲ್ಲರೂ ಒಂದು ಎಂಬ ತತ್ವದಲ್ಲಿ ಸಾಗೋಣ. ಹತ್ತು ಸಾವಿರ ವರ್ಷಗಳ ಹಿಂದೆ ಆಗಿಹೋದ ರಾಮಾಯಣವನ್ನು ಬರೆದ ಮಹರ್ಶಿ ವಾಲ್ಮೀಕಿಯವರು ಬರೇದ ಈ ಮಹಾನ್ ಗ್ರಂಥ ನಮ್ಮೆಲ್ಲರಿಗೂ ಒಳ್ಳೆಯ ಮಾರ್ಗದಲ್ಲಿ ಜೀವನ ಸಾಗಿಸಲು ಮಾರ್ಗದರ್ಶನ ಇಂದಿಗೂ ಮಾಡುತ್ತಿದೆ ಎಂದು ಉಪ ಸಭಾಧ್ಯಕ್ಷ ಆನಂದ ಮಾಮನಿಯವರು ಮಾತನಾಡಿದರು.
ಅವರು ಪಟ್ಟಣದ ರಾಮಾಪುರ ಸೈಟ್ಟನ ವಾಲ್ಮೀಕಿ ಸಭಾಭವನದಲ್ಲಿ ತಾಲೂಕಾ ಆಡಳಿತ ಹಾಗೂ ಸಮಾಜಕಲ್ಯಾಣ ಇಲಾಖೆಯವರು ಆಚರಿಸಿದ ಮಹರ್ಶಿ ವಾಲ್ಮೀಕಿ ಜಯಂತಿ ಉತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇವತ್ತು ನಾವು ನಮ್ಮ ಪ್ರಾಣವನ್ನು ನಾವೇ ರಕ್ಷಿಸಿಕೊಳ್ಳಬೇಕು ಜೀವ ಉಳಿದರೆ ಜೀವನ. ಆದ್ದರಿಂದ ಇಂದು ನಾವು ನೀವೆಲ್ಲರೂ ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಸೈನಿಟೈಜರ ಬಳಕೆ ಮಾಡುತ್ತಾ ಈ ದೇಶದಿಂದ ಕೊರೊನಾ ರೋಗವನ್ನು ಹೊಡೆದೋಡಿಸಬೇಕಾಗಿದೆ. ಆದ್ದರಿಂದ ಎಲ್ಲರೂ ಮಾಸ್ಕ ಧರಿಸಬೆಕು ಎಂದರು.
ನಂತರ ಉಪನ್ಯಾಸಕರಾಗಿ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರ್ಜುನ ಕಂಬೋಗಿ ಮಾತನಾಡಿ ಮಹರ್ಷೀ ವಾಲ್ಲಿಕಿಯವರು ಮಹರ್ಶಿ ವಾಲ್ಮಿಕಿಯವರು ಕೆಳವರ್ಗದ ಜನತೆಯಲ್ಲಿ ಜನಿಸಿದರೂ ಕೂಡಾ ಅವರ ಜೀವನವು ಎಲ್ಲ ಸಮಾಜದ ಜನರಿಗೂ ಮಾzರಿಯಾಗಿದ್ದಾg.É ಅವರು ಬರೆದ ರಾಮಾಯಣ ಇಂದಿಗೂ ರಾಮಾಯಣವನ್ನು ಜೀವಂತವಾಗಿಟ್ಟಿದೆ ಎಂದು ಮಾತನಾಡಿದರು.
ಸಮಾರಂಭದ ದಿವ್ಯಸಾನಿದ್ಯ ವಹಿಸಿದ ಬಿದರಿ ಕಲ್ಮಠದ ಶಿವಲಿಂಗ ಮಹಾಸ್ವಾಮಿಗಳು ಮಾತನಾಡಿ ಹಿಂದಿನ ನಮ್ಮ ಎಲ್ಲ ಪೂರ್ವಜರು ತಮಗಾಗಿ ಏನನ್ನೂ ಬಯಸದೆ ದೇಶಕ್ಕಾಗಿ ಪರರ ಹಿತಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹೋರಾಡಿದವರು ಎಂದರು.
ಕಾರ್ಯಕ್ರಮವು ಆಶಾ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ನಂತರ ಯರಗಟ್ಟಿಯ ನೂತನ ತಹಶೀಲ್ದಾರ ಎಮ್. ಎನ್. ಮಠದರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜಕಲ್ಯಾಣ ಇಲಾಖೆಯ ಅಧಿಕಾರಿ ಆರ್. ಆರ್. ಕುಲಕರ್ಣಿ ಸ್ವಾಗತಿಸಿದರ.ು ಎಮ್. ಬಿ. ದಾದಾನಾಯ್ಕರ ಸ್ವಾಗತಿಸಿದರು.
ವೇದಿಕೆ ಮೇಲೆ ಸಮಾಜದ ಸಮಾಜಸೇವಕರನ್ನು ಮತ್ತು ಎಸ್. ಎಸ್. ಎಲ್. ಸಿ., ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ತಾಲೂಕಾ ಆಡಳಿತ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆ ಮೇಲೆ ತಹಶೀಲ್ದಾರ ಪ್ರಶಾಂತ ಬಿ ಪಾಟೀಲ, ತಾ ಪಂ ಕಾರ್ಯನಿರ್ವಾಹಕ ಅಧಿಕಾರಿ ಯಶ್ವಂತಕುಮಾg,À ಜಿ. ಪಂ. ಸದಸ್ಯರಾದ ಎಮ್. ಎಸ್. ಹಿರೇಕುಂಬಿ, ಎಪ್ ಡಿ ಹದ್ದಣ್ಣವರ, ಜಗದೀಶ ಶಿಂತ್ರಿ, ಪ್ರಕಾಶ ನರಿ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಚಿನ್ನಪ್ಪನವರ, ಪುರಸಭೆ ಸದಸ್ಯರಾದ ದೀಪಕ ಜಾನ್ವೇಕರ, ದ್ಯಾಮಣ್ಣ ಸುತಗಟ್ಟಿ ವಾಲ್ಮೀಕಿ ಸಮಾಜದ ಅದ್ಯಕ್ಷ ರಾಘವೇಂದ್ರ ಪೂಜಾರ, ಸಮಾಜದ ಮುಖಂಡರು ಉಪಸ್ಥಿತರಿದ್ದರು.