ಮಹನೀಯರ ಆದರ್ಶ ಅಳವಡಿಸಿಕೊಳ್ಳಲು ಕರೆ


ಧಾರವಾಡ, ನ 23: ಮಹಾನ್ ಮಾನವತಾವಾದಿ, ಸಾಮಾಜಿಕ ನ್ಯಾಯದ ಹರಿಕಾರರು, ದಾಸ ಶ್ರೇಷ್ಠ ಶ್ರೀ ಕನಕದಾಸರ ಜಯಂತಿಯನ್ನು ಹುಬ್ಬಳ್ಳಿ ತಾಲ್ಲೂಕಿನ ಅಮರಗೊಳ ಗ್ರಾಮದಲ್ಲಿ ಮೆರವಣಿಗೆ ಮೂಲಕ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರು ಹಾಗೂ ಧಾರವಾಡ ಜಿಲ್ಲೆಯ ಉಸ್ತುವಾರಿ ಬಸವರಾಜ ಮಲಕಾರಿ ಅವರನ್ನು ಹಾಗೂ ನೂತನವಾಗಿ ಹು-ಧಾ ಮಹಾನಗರ ಪಾಲಿಕೆಯ ಸದಸ್ಯರಾಗಿ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಕುರುಬ ಸಮಾಜದ ಮಂಜುನಾಥ ಬುರ್ಲಿ ಅವರನ್ನು ಹಾಗೂ ರಮೇಶ ನಲವಡಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವಿಕರಿಸಿ ಮಾತನಾಡಿದ ಬಸವರಾಜ ಮಲಕಾರಿ 15 ನೇ ಶತಮಾನದಲ್ಲಿ ದಾಸ ಸಾಹಿತ್ಯದ ಪರಂಪರೆಯ ಮೂಲಕ ಸಮಾಜದಲ್ಲಿ ಹಾಸುಹೊಕ್ಕಾಗಿದ್ದ ಅಷ್ಪೃಶ್ಯತೆಯ ವಿರುದ್ಧ ತಮ್ಮ ಕವನ ಹಾಗೂ ಕೀರ್ತನೆಗಳ ಮೂಲಕ ಮೇಲು ಕೀಳು ಎಂಬ ಭೇದ ಭಾವವನ್ನು ತೊಲಗಿಸಲು ಶ್ರಮಿಸಿದ ಮಹನೀಯರು ಕನಕದಾಸರು, ಇವತ್ತಿನ ದಿನಮಾನಗಳಲ್ಲಿ ಕುಲಗೆಟ್ಟು ಹೋಗಿರುವ ಜಾತಿಯ ವಿಷವರ್ತುಲವನ್ನು ಕಿತ್ತೊಗೆಯಲು ಕನಕದಾಸರ, ಬುದ್ಧ, ಬಸವ, ಅಂಬೇಡ್ಕರ್ ರವರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದರು.
ಮುಖಂಡರಾದ ನಿಂಗಪ್ಪ ಸಂಕಣ್ಣವರ, ರವಿರಾಜ ದಾಸನೂರ, ಷಣ್ಮುಖ ಬೆಟಗೇರಿ,ಅಶೋಕ ಕಲ್ಲಣ್ಣವರ,ಜುಂಜಪ್ಪ ಕಂಬಳಿ,ರವಿ ಐರಾಣಿ, ಕಲ್ಲಪ್ಪ ಕರಿಗಾರ,ಕಲ್ಮೇಶ್ ಕರಿಗಾರ,ಸೇರಿದಂತೆ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.