
ಹನೂರು, ಮಾ.17:- ರಾಜ್ಯದ ಪ್ರಮುಖ ದೇಗುಲಗಳಲ್ಲಿ ಒಂದಾದ ಹನೂರುತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ನಿರ್ಮಿಸಿರುವ 108 ಅಡಿ ಎತ್ತರದ ಮಲೆಮಹದೇಶ್ವರನ ಪ್ರತಿಮೆ ಇದೇ ನಾಳೆ ಲೋಕಾರ್ಪಣೆಗೊಳ್ಳುತ್ತಿದೆ.
ಅಸಂಖ್ಯಾತ ಭಕ್ತರ ಪಾಲಿನ ದೈವ ‘ಮಾಯ್ಕರ ಮಾದಪ್ಪ’ನ ನೆಲದಲ್ಲಿ ಮುಗಿಲೆತ್ತರದಲ್ಲಿರುವ 108 ಅಡಿ ಪ್ರತಿಮೆ ಮೊದಲನೇ ಹಂತದಕಾಮಗಾರಿ ಮುಗಿದಿದ್ದು ಮುಖ್ಯಮಂತ್ರಿ, ಶ್ರೀಮಲೆ ಮಹದೇಶ್ವರ ಸ್ವಾಮಿಕ್ಷೇತ್ರಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಬಸವರಾಜ ಬೊಮ್ಮಾಯಿ ಮಾ.18ರಂದು ಲೋಕಾರ್ಪಣೆ ಮಾಡಲಿದ್ದಾರೆ. ಜೊತೆಗೆ ಪ್ರಾಧಿಕಾರದ ವತಿಯಿಂದ ನಿರ್ಮಾಣಗೊಂಡಿರುವ ಬೆಳ್ಳಿರಥವೂ ಲೋಕಾರ್ಪಣೆಆಗಲಿದ್ದು ಮತ್ತು ವಿವಿಧ ಕಾಮಗಾರಿಗಳು ಸಹ ಚಾಲನೆ ದೊರೆಯಲಿದೆ.
20 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಸದ್ಯ, ಪ್ರತಿಮೆ ನಿರ್ಮಾಣ ಮಾತ್ರ ಪೂರ್ಣಗೊಂಡಿದೆ. ಮಹದೇಶ್ವರಸ್ವಾಮಿ ಜೀವನ ಚರಿತ್ರೆ ಸಾರುವ ಮ್ಯೂಸಿಯಂ, ಪ್ರತಿಮೆಯ ಸ್ಥಳದಲ್ಲಿ ಬಯಲುರಂಗ ಮಂದಿರ, ಗಿಡಮೂಲಿಕಾ ವನಗಳ ಅಭಿವೃದ್ಧಿ ಸೇರಿದಂತೆ ಇತರೆ ಕಾಮಗಾರಿಗಳು ಇನ್ನμÉ್ಟೀ ನಡೆಯಬೇಕಿವೆ.
ಗದಗದ ಸಿಎಸ್‍ಎಪಿ ಆರ್ಕಿಟೆಕ್ಟ್ ಸಂಸ್ಥೆಯು ಪ್ರತಿಮೆ ನಿರ್ಮಿಸಿದೆ. ಶ್ರೀಧರ್ ಎಂಬುವವರು ಪ್ರತಿಮೆಯ ಶಿಲ್ಪಿಯಾಗಿದ್ದು, ಮುರ್ಡೇಶ್ವರದ ಶಿವನ ಮೂರ್ತಿ, ಬಸವ ಕಲ್ಯಾಣದಲ್ಲಿ ಬೃಹತ್ ಬಸವಣ್ಣನ ಪ್ರತಿಮೆಗಳ ರೂವಾರಿಇವರು.
ಹನೂರು ಭಾಗದಿಂದ ಬೆಟ್ಟಕ್ಕೆ ಬರುವವರು ಆನೆದಿಂಬ ತಲುಪುತ್ತಿದ್ದಂತೆಯೇ ಹುಲಿ ಮೇಲೆ ಕುಳಿತ ಮಾದಪ್ಪನ ಪ್ರತಿಮೆಯ ಸೊಬಗು ಕಾಣಬಹುದು. ತಮಿಳುನಾಡಿನಿಂದ ಬಂದರೆ ಗರಿಕೆ ಕಂಡಿ ಸಿಗುತ್ತಿದ್ದಂತೆ ಮಾದಪ್ಪನನ್ನು ಕಣ್ತುಂಬಿಕೊಳ್ಳಬಹುದು.
108 ಅಡಿ ಎತ್ತರ ಪ್ರತಿಮೆಯು ಎರಡು ಸ್ತರದಲ್ಲಿ ನಿರ್ಮಾಣವಾಗಿದೆ. ಕಲ್ಲು ಬಂಡೆಯರಚನೆಯ ಮೇಲೆ ವ್ಯಾಘ್ರನ ಮೇಲೆ ಕುಳಿತ ತ್ರಿಶೂಲ ಹಿಡಿದ ಮಹದೇಶ್ವರ ಸ್ವಾಮಿಯ ಪ್ರತಿಮೆರೂಪಿಸಲಾಗಿದೆ.
ಕಲ್ಲುಬಂಡೆಯಾಕೃತಿಯ ರಚನೆಯಲ್ಲಿ ಗುಹೆಯ ಮಾದರಿಯಲ್ಲಿಎರಡು ಮಹಡಿಗಳಿವೆ. ತಳಭಾಗದಲ್ಲಿ ಮಹದೇಶ್ವರ ಬೆಟ್ಟದಚಾರಿತ್ರಿಕ ಹಿನ್ನಲೆ ಸಾರುವ ಕಲಾಕೃತಿ ಚಿತ್ರಗಳ ರಚನೆ, ಭಕ್ತರ ವಿಶ್ರಾಂತಿ ಸ್ಥಳಾವಕಾಶ ಸೇರಿದಂತೆ ಭಕ್ತರು, ಪ್ರವಾಸಿಗರಿಗೆ ಮಹದೇಶ್ವರಚರಿತ್ರೆ, ಪರಂಪರೆ ಸಾರುವ ಮ್ಯೂಸಿಯಂ ನಿರ್ಮಾಣವಾಗಲಿದೆ.
ತರಾತುರಿ ಕಾರ್ಯಕ್ರಮ ಆರೋಪ: ಚುನಾವಣಾ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತರಾತುರಿ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಕ್ತರು ಆಕ್ರೋಶ ಹೊರಹಾಕುತ್ತಿದ್ದಾರೆ.
ಒಂದು ಹಂತದ ಕಾಮಗಾರಿಯμÉ್ಟೀ ಮುಗಿದಿದೆ. ಆಷ್ಟರಲ್ಲೇ, ಉದ್ಘಾಟನಾ ಭಾಗ್ಯಕಾಣುತ್ತಿದೆ. ಪ್ರಸ್ತುತ ಹುಲಿಯ ಮೇಲೆ ಕುಳಿತ 108 ಅಡಿ ಎತ್ತರದ ಸ್ವಾಮಿಯ ಮೂರ್ತಿ ಮಾತ್ರ ಪೂರ್ಣಗೊಂಡಿದೆ. ಪ್ರತಿಮೆ ಕೆಳಗೆ ಪೀಠ ನಿರ್ಮಾಣ ಮಾಡಲಾಗಿದ್ದು, ಗುಹೆಯಂತಿರುವ ಈ ಸ್ಥಳದಲ್ಲಿ ನಿರ್ಮಿತಗೊಳ್ಳುತ್ತಿರುವ ಮಹದೇಶ್ವರರ ಜೀವನ ಚರಿತ್ರೆ ಸಾರುವ ಮ್ಯೂಸಿಯಂ ಕಾಮಗಾರಿ ಮುಗಿದಿಲ್ಲ, ಇಲ್ಲಿಗೆ ಭಕ್ತರು ಬರಲು ಸಮರ್ಪಕವಾದರಸ್ತೆ ನಿರ್ಮಾಣವಾಗಿಲ್ಲ, ಕುಡಿಯುವ ನೀರು, ಶೌಚಗೃಹ, ವಾಹನ ಪಾಕಿರ್ಂಗ್ ಮತ್ತು ಮೂಲಸೌಕರ್ಯಗಳಿಲ್ಲ ಈ ರೀತಿ ಇಲ್ಲಗಳ ನಡುವೆ ಕಣ್ಣಿಗೆ ದೊಡ್ಡದಾಗಿ ಕಾಣುವಂತೆ ಸಿದ್ಧಗೊಂಡಿರುವ 108 ಅಡಿ ಪ್ರತಿಮೆಯನ್ನು ಮಾತ್ರ ಉದ್ಘಾಟಿಸುತ್ತಿರುವುದು ಏತಕ್ಕೆ ಎಂದು ಭಕ್ತರು ಕಿಡಿಕಾರಿದ್ದಾರೆ.
ಚುನಾವಣಾ ಕಾಲದಲ್ಲಿ ಧಾರ್ಮಿಕ ಕ್ಷೇತ್ರವೂ ಬಳಕೆಯಾಗುತ್ತಿರುವುದು ವಿಪರ್ಯಾಸವಾಗಿದೆ ಎಂದು ಸಾರ್ವಜನಿಕವಾಗಿ ಬೇಸರ ವ್ಯಕ್ತವಾಗುತ್ತಿದೆ.
ಒಟ್ಟಿನಲ್ಲಿಹಲವರ ವಿರೋಧದ ನಡುವೆಯು ತರಾತುರಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಆದರೂ 108 ಅಡಿ ಪ್ರತಿಮೆಯಿಂದ ಮುಂಬರುವ ದಿನಗಳಲ್ಲಿ ಮಹದೇಶ್ವರಬೆಟ್ಟಕ್ಕೆ ಭಕ್ತರದಂಡೇ ಹರಿದುಬರಲಿದ್ದು, ಪ್ರವಾಸೋದ್ಯಮದಿಂದ ದೇವಸ್ಥಾನದ ಆದಾಯವು ಸಹ ಹೆಚ್ಚಳವಾಗುವ ನಿರೀಕ್ಷೆ ಇದೆ.
ಮೈಸೂರಿನ ಸುತ್ತೂರು ಕ್ಷೇತ್ರ ಶ್ರೀಮತ್ಸುತ್ತೂರು ವೀರ ಸಿಂಹಾಸನ ಮಹಾ ಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಸಮಾರಂಭದ ದಿವ್ಯ ಸಾನಿಧ್ಯ ವಹಿಸುವರು. ಮಹದೇಶ್ವರ ಬೆಟ್ಟದ ಶ್ರೀ ಸಾಲೂರು ಬೃಹನ್ಮಠದ ಹಿರಿಯ ಶ್ರೀಗಳಾದ ಶ್ರೀ ಗುರುಸ್ವಾಮಿಗಳು, ಸಾಲೂರು ಬೃಹನ್ಮಠದ ಪೀಠಾಧಿಪತಿಗಳಾದ ಶಾಂತಮಲ್ಲಿಕಾರ್ಜುನಸ್ವಾಮಿಗಳು ದಿವ್ಯ ಸಮ್ಮುಖ ವಹಿಸುವರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಉಪಾಧ್ಯಕ್ಷರಾದ ವಿ. ಸೋಮಣ್ಣ, ಕಂದಾಯ ಸಚಿವ ಅರ್. ಅಶೋಕ್, ಲೋಕೋಪಯೋಗಿ ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಸಚಿವ ಸಿ.ಸಿ. ಪಾಟೀಲ್, ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವ ಹಾಗೂ ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಉಪಾಧ್ಯಕ್ಷೆ ಶಶಿಕಲಾ ಅ ಜೊಲ್ಲೆ, ಲೋಕಸಭಾ ಸದಸ್ಯ ವಿ. ಶ್ರೀನಿವಾಸ ಪ್ರಸಾದ್, ಶಾಸಕರಾದಆರ್. ನರೇಂದ್ರ, ಸಿ. ಪುಟ್ಟರಂಗಶೆಟ್ಟಿ, ಎನ್. ಮಹೇಶ್, ಸಿ.ಎಸ್. ನಿರಂಜನಕುಮಾರ್, ವಿಧಾನ ಪರಿಷತ್ ಸದಸ್ಯರುಗಳಾದ ಮರಿತಿಬ್ಬೇಗೌಡ, ಡಾ. ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಮಧು ಜಿ. ಮಾದೇಗೌಡ, ಕಾಡಾಅಧ್ಯಕ್ಷ ಜಿ. ನಿಜಗುಣರಾಜು, ಮಹದೇಶ್ವರ ಬೆಟ್ಟ ಗ್ರಾ.ಪಂ.ಅಧ್ಯಕ್ಷಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.