ಮಹದೇಶ್ವರ ಬೆಟ್ಟಕ್ಕೆ ಬಂದಿದ್ದ ಭಕ್ತರ ಬೈಕ್ ಕಳ್ಳತನ

ಸಂಜೆವಾಣಿ ವಾರ್ತೆ
ಹನೂರು ಜೂ 8:- ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದಿದ್ದ ಭಕ್ತರೊಬ್ಬರು ತಮ್ಮ ಸ್ಪ್ಲೆಂಡರ್ ಬೈಕನ್ನು ಮಲೈ ಮಹದೇಶ್ವರ ಬೆಟ್ಟದ ಬೈಕ್ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದು ಬೈಕ್ ಕಳ್ಳತನ ಮಾಡಲಾಗಿರುವ ಘಟನೆ ಜರುಗಿದೆ.
ಮದ್ದೂರು ತಾಲೂಕಿನ ಚಾಪುರ ದೊಡ್ಡಿ ಗ್ರಾಮದಿಂದ ದೇವಾಲಯಕ್ಕೆ ಅವಿನಾಶ್ ಹಾಗೂ ಆತನ ಸ್ನೇಹಿತ ಜೊತೆಗೆ (ಕೆ.ಎ11 ಇಯು 6237) ನಂಬರಿನ ಸ್ಪ್ಲೆಂಡರ್ ಬೈಕ್ ನಲ್ಲಿ ಬಂದಿದ್ದರು.ಗುರುವಾರ ರಾತ್ರಿ 10;45 ಸಮಯದಲ್ಲಿ ಮಹದೇಶ್ವರ ಬೆಟ್ಟಕ್ಕೆ ಬಂದ ಇವರು ಆರೋಗ್ಯ ಕೇಂದ್ರದ ಮುಂಭಾಗವಿರುವ ಪಾರ್ಕಿಂಗ್ ಒಳಗೆ ಬೈಕನ್ನು ನಿಲ್ಲಿಸಿ ದೇವಾಲಯಕ್ಕೆ ತೆರಳಿ ಮುಡಿ ಸೇವೆ ಮಾಡುವ ಪಕ್ಕದಲ್ಲಿರುವ ಸಂತೆ ಮಾಳದಲ್ಲಿ ರಾತ್ರಿ ತಂಗಿದ್ದು, ಬೆಳಿಗ್ಗೆ ಬಂದು ನೋಡಿದಾಗ ಬೈಕ್ ಕಾಣೆಯಾಗಿದೆ.ಈ ಬಗ್ಗೆ ಮಲೆ ಮಹದೇಶ್ವರ ಬೆಟ್ಟ ಪೆÇೀಲೀಸ್ ಠಾಣೆಗೆ ದೂರು ನೀಡಿದ್ದು ಬೈಕ್ ಗಾಗಿ ಪೆÇೀಲೀಸರು ಉಡುಕಾಟ ನಡೆಸುತಿದ್ದಾರೆ.