ಮಹದೇವಪುರ ಕ್ಷೇತ್ರವನ್ನು ಹಸಿರುಮಯ ಮಾಡುವೆ: ಎಚ್. ನಾಗೇಶ್

ಬೆಂಗಳೂರು,ಮೇ.೩- ಮಹದೇವಪುರ ಕ್ಷೇತ್ರವನ್ನು ಹಸಿರು ಮಯವನ್ನಾಗಿ ಮಾಡಲು ೨೫ಲಕ್ಷ ಸಸಿಗಳನ್ನು ನೆಡುವ ಕಾರ್ಯ ಮಾಡುತ್ತೇನೆಂದು ಮಹದೇವಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೆಳತ್ತೂರು ಎಚ್.ನಾಗೇಶ್ ಅವರು ತಿಳಿಸಿದರು.
ಮಹದೇವಪುರ ಕ್ಷೇತ್ರದ ಮಾರತ್ತಹಳ್ಳಿ ಬ್ಲಾಕ್‌ನ ಅಶ್ವಥ್ ನಗರ, ತುಬರಹಳ್ಳಿ,ಬಿಇಎಂಎಲ್ ಬಡಾವಣೆ,ಲಕ್ಷ್ಮಿ ನಾರಾಯಣಪುರ, ಕುಂದಲಹಳ್ಳಿ, ಕುಂದಲಹಳ್ಳಿ ದಿಣ್ಣೆ,ಫ್ರೆಂಡ್ಸ್ ಲೇಔಟ್, ಹೇಮಂತ್ ನಗರ, ಚಿನ್ನಪ್ಪನಹಳ್ಳಿ, ಸೇರಿದಂತೆ ವಿವಿಧೆಡೆ ಪ್ರಚಾರ ನಡೆಸಿ ಮಾತನಾಡಿದರು.
ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ೨೫ಲಕ್ಷ ಸಸಿಗಳನ್ನು ನೆಡುವ ಮೂಲಕ ಕ್ಷೇತ್ರವನ್ನು ಹಸಿರುಮಯ ಮಾಡುತ್ತೆನೆ ಹಾಗೂ ಸಸಿಗಳ ಬೆಳೆವಣಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತೇನೆಂದು ನುಡಿದರು.
ವೈಟ್ ಫೀಲ್ಡ್ ,ಮಾರತ್ತಹಳ್ಳಿ, ಹೂಡಿ ಸೇರಿದಂತೆ ಕ್ಷೇತ್ರದ ವಿವಿಧೆಡೆ ಹೆಚ್ಚಿನ ಸಂಚಾರ ದಟ್ಟಣೆಯ ಸಮಸ್ಯೆಯಿದ್ದು ಸಂಚಾರ ದಟ್ಟಣೆ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಿ,ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದೆಂದು ನುಡಿದರು.
ಕ್ಷೇತ್ರದ ಸರ್ವಾಂಗೀಣ ಬೆಳವಣಿಗೆಗೆ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನನಗೆ ಆಶೀರ್ವದಿಸುವಂತೆ ಮನವಿ ಮಾಡಿಕೊಂಡರು.
ಮಾಜಿ ಪಾಲಿಕೆ ಸದಸ್ಯ ಉದಯ್ ಕುಮಾರ್ ಅವರು ಮಾತನಾಡಿ ಈ ಬಾರಿ ಕ್ಷೇತ್ರದ ಜನತೆ ಬದಲಾಣೆ ಬಯಸಿದ್ದು,ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಉದಯ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಲ್ಲೂರಹಳ್ಳಿ ಟಿ. ನಾಗೇಶ್, ಕೆಪಿಸಿಸಿ ಸದಸ್ಯ ಜಯರಾಮರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಾಬುಗೌಡ,ವಿಟಿಬಿ ಬಾಬು, ಮುಖಂಡರಾದ ಕೆಪಿಆರ್ ಗುರು,ಸತೀಶ್ ಮತ್ತಿತರರು ಇದ್ದರು.

ಮಹದೇವಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೆಳತ್ತೂರು ಎಚ್.ನಾಗೇಶ್ ಅವರು ಮಾರತ್ತಹಳ್ಳಿ ಬ್ಲಾಕ್‌ನ ವಿವಿಧೆಡೆ ಪ್ರಚಾರ ಮಾಡಿದರು.