ಮಹದಾಯಿ ಯೋಜನೆ ಲೋಕಾರ್ಪಣೆಗೆ ಮನವಿ

(ಸಂಜೆವಾಣಿ ವಾರ್ತೆ)
ಚನ್ನಮ್ಮನ ಕಿತ್ತೂರು,ಆ.13: ಧಾರವಾಡ ಜಿಲ್ಲೆ ನವಲಗುಂದ ಮತಕ್ಷೇತ್ರದ ಶಾಸಕ ಎನ್.ಎಚ್, ಕೋನರಡ್ಡಿ ಅವರಿಗೆ ಸ್ವಾಭಿಮಾನಿ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೀರಪ್ಪ ದೇಶನೂರ ಹಾಗೂ ಅವರ ನಿಯೋಗ ಭೇಟಿಯಾಗಿ ಕಳಸಾಬಂಡೂರಿ ಹಾಗೂ ಮಹದಾಯಿ ನದಿಗಳ ಯೋಜನೆಯನ್ನು ಶೀಘ್ರದಲ್ಲಿ ಲೋಕಾರ್ಪಣೆ ಮಾಡಬೇಕೆಂದು ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು ಈ ಹಿಂದೆ ಎಷ್ಟೋ ಸರಕಾರಗಳು ಕಳಸಾ ಬಂಡೂರಿ ಮತ್ತು ಮಹದಾಯಿ ಜೋಡಣೆ ಮಾಡುತ್ತೇವೆಂದು ಸುಳ್ಳು ಭರವಸೆ ನೀಡುತ್ತಾ ಬಂದಿವೆ. ಆದರೆ ನಮ್ಮ ಸರ್ಕಾರ ಕೊಟ್ಟ ಮಾತಿನÀಂತೆ ನಡೆದುಕೊಳ್ಳುತ್ತದೆ.
ನಿಮ್ಮ ಮನವಿಯನ್ನು ಆದಷ್ಟು ಶೀಘ್ರದಲ್ಲಿ ಸರಕಾರದ ಗಮನಕ್ಕೆ ತಂದು ಈ ಯೋಜನೆಯನ್ನು ಕಾರ್ಯಗತಗೊಳಿಸಲು ಪ್ರಮಾಣಿಕವಾಗಿ ಪ್ರಯತ್ರ ಮಾಡುತ್ತೇನೆಂದರು.
ಈ ಸಂದರ್ಭದಲ್ಲಿ ಶಾಸಕರನ್ನು ಸತ್ಕರಿಸಲಾಯಿತು.
ಈ ವೇಳೆ ಸ್ವಾಭಿಮಾನಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಶಿವಸಿಂಗ ಮೊಕಾಶಿ, ಉಪಾಧ್ಯಕ್ಚ ಬೀರಪ್ಪ ದೇಶನೂರ, ಪ್ರಧಾನ ಕಾರ್ಯದಶಿ ಮಾರುತಿ ಕಮತಗಿ, ಮಲ್ಲಿಕಾರ್ಜುನ ಜುಟ್ನವರ, ರಾಜು ತೋಟಗಿ, ಎಲ್ಲಪ್ಪ ಕರಬನ್ನವರ, ಉದಯ ಚವಲಗಿ ಸೇರಿದಂತೆ ಇನ್ನಿತರಿದ್ದರು