ಮಹಡಿಯಿಂದ ಕೆಳಗೆ ತಳ್ಳಿ ಪತ್ನಿ ಕೊಲೆ

ಬೆಂಗಳೂರು, ಜ.೬-ಮೂರನೇ ಮಹಡಿಯಿಂದ ಕೆಳಗೆ ತಳ್ಳಿ ಪತ್ನಿಯನ್ನು ಕೊಂದಿರುವ ಆರೋಪದ ಹಿನ್ನೆಲೆಯಲ್ಲಿ ಪತಿಯನ್ನು ಮಾದನಾಯಕನಹಳ್ಳಿ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಮಾದನಾಯಕನಹಳ್ಳಿಯ ಸಿದ್ದನಹೊಸಹಳ್ಳಿಯ ಚೈತ್ರ (೨೦) ಮೃತಪಟ್ಟವರು,ಮೃತಳ ಪೋಷಕರು ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಆರೋಪ ಮಾಡಿದ್ದು ಪತಿ ಕಾಂತರಾಜು (೨೪)ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಾಂತರಾಜು ಮೃತ ಚೈತ್ರ ಕಳೆದ ೨ ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದು ಇತ್ತಿಚೆಗೆ ದಂಪತಿ ನಡುವೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವಿರಸ ಮೂಡಿತ್ತು.
ಪತ್ನಿಯ ಮೇಲೆ ದ್ವೇಷದಿಂದ ತಾವು ಬಾಡಿಗೆ ಮನೆಯಲ್ಲಿ ವಾಸವಿದ್ದ ಕಟ್ಟಡದ ಮೇಲಿಂದ ತಳ್ಳಿ ಪತಿ ಕೊಲೆ ಮಾಡಿದ್ದಾನೆ ಆರೋಪಿಸಲಾಗಿದೆ.
ಆರೋಪಿ ಕಾಂತರಾಜುನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಪೂರ್ಣ ತನಿಖೆಯ ಬಳಿಕ ಸತ್ಯಾಸತ್ಯತೆ ಬಯಲಾಗಲಿದೆ