ಮಹಜೇನಹಳ್ಳಿ ತಾಂಡಾದಲ್ಲಿ ಕಾರ್ತಿಕ ಮಹೋತ್ಸವ

ಹರಿಹರ.ಡಿ.೨೯; ಮಾಸಗಳಲ್ಲೆ ಕಾರ್ತಿಕ ಮಾಸ ಶ್ರೇಷ್ಟವಾದದ್ದು, ಹಿಂದೂ ಧರ್ಮದಲ್ಲಿ ದೇವರ ಆರಾಧನೆಗೆ ವಿಶಿಷ್ಟ ಪರಂಪರೆಯಿದೆ. ಸಂತೋಷವನ್ನು ನಾಲ್ಕೂ ಜನರಿಗೆ ಹಂಚುವುದೇ ದೇವರ ಪೂಜೆಯಾಗಿದೆ. ಎಲ್ಲರೂ ಒಟ್ಟಾಗಿ ಸೇರುವುದೆ ಏಕತೆಯ ಸಂಕೇತವಾಗಿದೆ ಎಂದು ಸೇವಾಲಾಲ್ ದೇವಸ್ಥಾನದ ಪೂಜಾರಿ ಮೂರ್ತಿನಾಯ್ಕ ಹೇಳಿದರು.ನಗರದ ಮಹಜೇನಹಳ್ಳಿ ತಾಂಡ ವಿದ್ಯಾನಗರದಲ್ಲಿ  ನಡೆದ ಶ್ರೀ ಸೇವಾಲಾಲ್ ಮಹಾರಾಜ್ ಮತ್ತು ಮರಿಯಮ್ಮ ದೇವಿಯ ಕಾರ್ತಿಕ ಮಾಸದ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವರಿಗೆ ಧಾರ್ಮಿಕ ಪೂಜಾ ವಿಧಿ-ವಿಧಾನಗಳು ಶ್ರದ್ಧಾ ಭಕ್ತಿಯ ನಡುವೆ ನಡೆಯಿತು ಎಂದರು.  ಈ ಸಂದರ್ಭದಲ್ಲಿ ಹಟ್ಟಿನಾಯಕ ಬಾಬು ರಾಥೋಡ್, ಡಾವ್ ಸೋಮ್ಲನಾಯ್ಕ, ಕಾರಬಾರಿ ಆರ್. ರಾಜನಾಯ್ಕ, ಸೇವಾಲಾಲ್ ಟ್ರಸ್ಟ್ ಅಧ್ಯಕ್ಷ ರಾಜನಾಯ್ಕ. ಪಿ., ಮುಖಂಡರಾದ ಶಂಕರ್ ನಾಯ್ಕ, ಪೀಕ್ಲಾನಾಯ್ಕ, ಮಂಜನಾಯ್ಕ ಹೆಚ್., ಸೋಮ್ಲನಾಯ್ಕ, ಕೋಟ್ಯನಾಯ್ಕ, ಹನುಮಂತನಾಯ್ಕ, ರಮೇಶ್ ನಾಯ್ಕ ಇದ್ದರು