
ಕಲಬುರಗಿ:ಆ.14: ಚಿಂಚೋಳಿ ತಾಲ್ಲೂಕಿನ ಮುಸ್ಲಿಂ ಕಮಿಟಿ ತಾಲೂಕು ಅಧ್ಯಕ್ಷ, ಕಲಬುರಗಿ ಜಿಲ್ಲೆಯ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಸೇಡಂ ಮತಕ್ಷೇತ್ರದ ಗಡಿಕೇಶ್ವರ ಗ್ರಾಮದ ಮಸ್ತಾನ್ ಅಲಿ ಪಟ್ಟೆದಾರ್ ಅವರಿಗೆ
ರಾಜ್ಯ ಮಟ್ಟದ ನಿಗಮ ಮಂಡಳಿಗೆ ನಾಮ ನಿರ್ದೇಶನ ಮಾಡುವಂತೆ ಸುಲೇಪೇಟ ಗ್ರಾ.ಪಂ ಮಾಜಿ ಅಧ್ಯಕ್ಷ ಜಹಿರೋದ್ದಿನ್ ಪಟೇಲ್ ಮನವಿ ಮಾಡಿದ್ದಾರೆ.
ಕಲಬುರಗಿಯ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಸ್ತಾನ್ ಅಲಿ ಪಟ್ಟೆದಾರ್ ಅವರು 1992ರಲ್ಲಿ ಕಾಂಗ್ರೆಸ್ ಪಕ್ಷದಿಂದ ಗಡಿಕೇಶ್ವರ ಗ್ರಾ.ಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಸತತವಾಗಿ 6 ಬಾರಿ ಗ್ರಾ.ಪಂ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ಕಾಂಗ್ರೆಸ್ ಸರ್ಕಾರದಲ್ಲಿ ವಕ್ಫ್ ಬೋರ್ಡ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದು, ಸೇಡಂ ಹಾಗೂ ಚಿಂಚೋಳಿ ಮತಕ್ಷೇತ್ರದ ಸಕ್ರಿಯ ಕಾರ್ಯಕರ್ತರಾಗಿ ಪಕ್ಷ ಸಂಘಟನೆಯ ಜೊತೆಗೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ, ಕೋವಿಡ್ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಮೂಲಕ ಅನೇಕ ಬಡ ಕುಟುಂಬಗಳಿಗೆ ಫುಡ್ ವಿತರಣೆ ಮಾಡಿದ್ದಾರೆ. ಚಿಂಚೋಳಿಯಲ್ಲಿ ಮುಸ್ಲಿಂ ಕಮಿಟಿ ಸ್ಥಾಪನೆ ಮಾಡಿ ಅನೇಕ ಬಡ ಕುಟುಂಬಗಳ ಹೆಣ್ಣು ಮಕ್ಕಳ ಮದುವೆ ಕಾರ್ಯಗಳಿಗೆ ಆರ್ಥಿಕ ಸಹಾಯ ಮಾಡಿದ್ದಾರೆ, ಇದರ ಜೊತೆಗೆ ಅನೇಕ ಸಮಾಜಮುಖಿ ಕಾರ್ಯಗಳು ಮಾಡಿಕೊಂಡು ಬರುತ್ತಿದ್ದು ಆದಕಾರಣ ಮಸ್ತಾನ್ ಅಲಿ ಪಟ್ಟೆದಾರ್ ಅವರಿಗೆ ಕಾಂಗ್ರೆಸ್ ಪಕ್ಷದ ನಾಯಕರು ರಾಜ್ಯ ಮಟ್ಟದ ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ನಾಮನಿರ್ದೆಶನ ಮಾಡಬೇಕೆಂದು ಕಾಂಗ್ರೆಸ್ ಪಕ್ಷದ ನಾಯಕರಿಗೆ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಢಿಯಲ್ಲಿ ಮಾಜಿ ಕೆ.ಎಂ.ಡಿ.ಸಿ ನಿರ್ದೇಶಕ ಸದ್ದಾಂ ವಜೀರಗಾಂವ್, ಮಾಜಿ ಜಿ.ಪಂ ಸದಸ್ಯ ಶಬ್ಬೀರ್ ಮಿಯ್ಯಾ ಸೌದಾಗರ್, ಮೋಯಿನ್ ಮೋಮಿನ್. ನಿಹಾಮೊದ್ದಿನ್ ಮಂಗಲಗಿ, ಅಹ್ಮದ್ ಹುಸೇನ್, ಅಲಿ ಕೋಡ್ಲಿ ಸೇರಿದಂತೆ ಇತರರಿದ್ದರು.