ಮಸ್ಕಿ ಹಣ ,ಜಾತಿ ರಾಜಕಾರಣ – ರಾಯರಡ್ಡಿ

ಸಿಂಧನೂರು ಏ.೮ ಕ್ಷೇತ್ರದಲ್ಲಿ ಗೆದ್ದ ಅಭ್ಯರ್ಥಿ ಅಕಾಲಿಕ ಮರಣ ಹೊಂದಿದ್ದರೆ ಅಥವಾ ಶಾಸಕರಾಗಿ ಆಯ್ಕೆಯಾದ ಮೇಲೆ ಸಂಸದರಾಗಿ ಗೆದ್ದರೆ ಆ ಕ್ಷೇತ್ರದಲ್ಲಿ ವಿಧಾನಸಭೆ ಉಪಚುನಾವಣೆ ನಡೆಯುವದು ಸಹಜ ಇದು ಪ್ರಜಾಪ್ರಭುತ್ವ ಇದನ್ನು ಎಲ್ಲರು ಒಪ್ಪಿಕೊಳ್ಳಬೇಕೆಂದು ಮಾಜಿ ಮಂತ್ರಿ ಬಸವರಾಜ ರಾಯರಡ್ಡಿ ಹೇಳಿದರು.
ನಗರದಲ್ಲಿ ಪ್ರತೇಕವಾಗಿ ಸುದ್ದಿ ಗೋಷ್ಟಿ ನಡೆಸಿ ಮಾತನಾಡಿದ ಅವರು ಬಸವಕಲ್ಯಾಣ ಹಾಗೂ ಬೆಳಗಾವಿಯಲ್ಲಿ ಕೊರೊನಾ ದಿಂದ ಶಾಸಕರು ,ಸಂಸದರು ಮೃತ ಪಟ್ಟ ಕಾರಣ ಅಲ್ಲಿ ಉಪಚುನಾವಣೆ ನಡೆಯುತ್ತಿದೆ ಮಸ್ಕಿಯಲ್ಲಿ ಯಾರೂ ಮರಣ ಹೊಂದಿಲ್ಲ ಪ್ರಜಾಪ್ರಭುತ್ವ ವನ್ನು ಪ್ರತಾಪ್ ಪಾಟೀಲ ಕೊಲೆ ಮಾಡಿ ಹಣ ಹಾಗೂ ಅಧಿಕಾರಕ್ಕಾಗಿ ಮತದಾರರನ್ನು ಮರೆತು ರಾಜಿನಾಮೆ ನೀಡಿ ಬಿಜೆಪಿ ಗೆ ಹೋದ ಕಾರಣ ಉಪಚುನಾವಣೆ ನಡೆಯುತ್ತಿದೆ ಇದು ನಾಚಿಕೆಗೇಡಿನ ಸಂಗತಿ ಎಂದರು.
ಬಿಜೆಪಿ ಪಕ್ಷ ಬಾಯಲ್ಲಿ ರಾಮ ನಾಮ ಜಪಿಸುತ್ತಾ ಬಗಲಲ್ಲಿ ಚೂರಿ ಹಾಕುವ ಸಂಸ್ಕೃತಿ ಹೊಂದಿದ್ದು ಹಣ ಹಾಗೂ ಅಧಿಕಾರಕ್ಕಾಗಿ ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಾಶ ಮಾಡುತ್ತಾ ಹೊರಟಿದೆ .ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜೆಡಿಎಸ್ ,ಕಾಂಗ್ರೆಸ್ ಎಂ.ಎಲ್.ಎ ಗಳಿಗೆ ಹಣ ಹಾಗೂ ಅಧಿಕಾರದ ಆಸೆ ತೋರಿಸಿ ವಾಮ ಮಾರ್ಗದಿಂದ ಅಧಿಮಾರಕ್ಕೆ ಬಂದು ಮುಖ್ಯಮಂತ್ರಿ ಯಾದ ಯಡಿಯೂರಪ್ಪ ಇಲ್ಲಿತನಕ ಯಾವುದೇ ಜನಪರ ಯೋಜನೆಗಳನ್ನು ಜಾರಿಗೆ ತರದೆ ಕೇವಲ ಜಾತಿ ರಾಜಕಾರಣ ಮಾಡುತ್ತಾ ಹಣ ಗಳಿಸ ತೊಡಗಿದ್ದಾರೆಂದರು.
ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ನಿರ್ನಾಮ ಮಾಡುತ್ತೆವೆ ಎನ್ನುವ ಬಿಜೆಪಿ ಮುಖಂಡರು ಕಾಂಗ್ರೆಸ್ ಹಾಗೂ ಬಿಜೆಪಿ ಎಷ್ಟು ಸ್ಥಾನಗಳನ್ನು ಗೆದ್ದಿದೆ ಎನ್ನುವುದನ್ನು ಮೊದಲು ತಿಳಿದು ಕೊಳ್ಳಬೇಕು.
ಎರಡು ವರ್ಷದಲ್ಲಿ ಎರಡು ಬಜೆಟ್ ಮಂಡನೆ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ೧ ಲಕ್ಷ ೨೬ ಸಾವಿರ ಕೋಟಿ ಸಾಲ ಮಾಡಿದ್ದಾರೆ ಕೊರೊನಾ ಹೆಸರಿನಲ್ಲಿ ಲೂಟಿ ಮಾಡಿ ಎಲ್ಲಾ ಇಲೆಖೆಗಳಲ್ಲಿ ಹಣ ಲೂಟಿ ಮಾಡ ತೊಡಗಿದ್ದಾರೆ. ಕೆಇಬಿ ಟೆಂಡರ್ ದಲ್ಲಿಯೂ ಸಹ ಲಂಚ ಕೇಳುತ್ತಿದ್ದು ನೀರಾವರಿ ಯಲ್ಲಿಯೂ ಎನ್.ಒ.ಸಿ ನಲ್ಲಿ ೧೦% ಗಾಗಿ ಕಮಿಷನ್ ಪಡೆಯುತ್ತಿದ್ದಾರೆ ಮುಖ್ಯಮಂತ್ರಿ ಹಾಗೂ ಅವರ ಮಗ ವಿದೇಶಿ ಬ್ಯಾಂಕನಲ್ಲಿ ಹಣ ಇಟ್ಟಿದ್ದು ಇದರ ಬಗ್ಗೆ ತನಿಖೆ ಮಾಡಬೇಕೆಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ ಆರೋಪ ಮಾಡಿದ್ದು ಮುಖ್ಯಮಂತ್ರಿ ಗಳ ವಿರುದ್ದ ಸಚಿವ ಈಶ್ವರಪ್ಪ ದೂರು ನೀಡಿದ್ದು ರಾಜ್ಯಪಾಲರು ರಾಜ್ಯ ಸರ್ಕಾರವನ್ನು ವಜಾ ಮಾಡುವಂತೆ ರಾಷ್ಟ್ರಪತಿಗಳಿಗೆ ಶಿಪಾರಸ್ಸು ಮಾಡುವಂತೆ ಒತ್ತಾಯಿಸಿದರು.
ಹಣ ಹಾಗೂ ಜಾತಿ ರಾಜಕಾರಣ ಹೆಚ್ಚಾಗುತ್ತಿದ್ದು ಇದು ಪ್ರಜಾಪ್ರಭುತ್ವದ ವಿರೋದಿಯಾಗಿದೆ ಇದು ಕೊನೆಗಾಣಬೇಕು ಹಣ ಇಲ್ಲದ ಸಜ್ಜನಿಕೆ ಹಾಗೂ ಸರಳ ವ್ಯಕ್ತಿ ಚುನಾವಣೆಯಲ್ಲಿ ಗೆಲ್ಲುವದೆ ನಿಜವಾದ ಪ್ರಜಾಪ್ರಭುತ್ವ. ಸರಳ ಜನಪರ ಕಾಳಜಿಯ ಬಸನಗೌಡ ತುರವಿಹಾಳ ರನ್ನು ಗೆಲ್ಲಿಸಿ ಪಕ್ಷಾಂತರಿ ಪ್ರತಾಪ್ ಪಾಟೀರನ್ನು ಸೋಲಿಸಬೇಕು ಎಂದು ಮಸ್ಕಿ ಮತದಾರರಲ್ಲಿ ಬಸವರಾಜ ರಾಯರಡ್ಡಿ ಮನವಿ ಮಾಡಿಕೊಂಡರು.
ಕಾಂಗ್ರೆಸ್ ಗ್ರಾಮೀಣ ಅದ್ಯಕ್ಷರಾದ ಪಂಪನಗೌಡ ಬಾದರ್ಲಿ, ನಗರ ಘಟಕದ ಅದ್ಯಕ್ಷರಾದ ಖಾಜಿ ಮಲ್ಲಿಖ್ ,ಅಮರೇಶ ಪಾಟೀಲ ,ಜಾಫರ್ ಜಾಹಗೀರದಾರ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.