ಮಸ್ಕಿ: ಭತ್ತ ಲಾರಿ ಪಲ್ಟಿ

ರಾಯಚೂರು,ನ.10- ಮಸ್ಕಿ ತಾಲೂಕಿನ ಮುದ್ದಾಪುರ- ನಂಜಲದಿನ್ನಿ ರಸ್ತೆಯಲ್ಲಿ ಗುಂಡಿ ಬಿದ್ದಿದ್ದರಿಂದ ಭತ್ತ ತುಂಬಿದ ಲಾರಿಯೊಂದು ಉರುಳಿ ಬಿದ್ದ ಘಟನೆ ಜರುಗಿದೆ.
ಧರ್ಮಸಿಂಗ್ ಎಂಬ ರೈತನ ಭತ್ತವನ್ನು ಸಿಂಧನೂರಿಗೆ ಸಾಗಿಸುತ್ತಿರುವ ಸಂದರ್ಭದಲ್ಲಿ
ಮಸ್ಕಿ ತಾಲೂಕಿನ ಮುದ್ದಾಪುರ – ನಂಜಲದಿನ್ನಿ ಹದಗೆಟ್ಟ ರಸ್ತೆಯಿಂದಾಗಿ ಭತ್ತ ತುಂಬಿದ ಲಾರಿ ಪಲ್ಟಿ ಹೊಡೆದಿದೆ.
ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರ ರಾಜೀನಾಮೆಯಿಂದ ಮಸ್ಕಿ ಕ್ಷೇತ್ರ ಅನಾಥವಾಗಿದೆ. ಯಾರು ಕೇಳುವವರಿಲ್ಲದಂತಾಗಿದೆ. ಹದಗೆಟ್ಟ ರಸ್ತೆಗಳಿಂದ ಅಪಘಾತ ಸಂಭವಿಸಿದೆ. ಈ ರಸ್ತೆ ಯು ಸಿಂಧನೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ೧೮ ಕಿಮಿ ವರೆಗೆ ರಸ್ತೆ ಗುಂಡಿಗಳಿಂದ ಕೂಡಿದೆ‌. ಕಳೆದ ವರ್ಷ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆ ನಿರ್ಮಿಸಿದ್ದು, ಕಾಮಗಾರಿ ಸರಿಯಾಗಿ ನಡೆದಿಲ್ಲ. ಈ
ಕುರಿತು ಅಧಿಕಾರಿಗಳು ಕ್ರಮ ಕೈಗೊಂಡು ಕೂಡಲೇ ರಸ್ತೆ ನಿರ್ಮಿಸಬೇಕು ಎಂದು ರೈತ ಮುಖಂಡ ಪಂಪಾಪತಿ ತಳವಾರ್ ಒತ್ತಾಯಿಸಿದ್ದಾರೆ.