ಮಸ್ಕಿ ಪುರಸಭೆ ಚುನಾವಣೆ ಬಿಜೆಪಿ ಮಡಿಲಿಗೆ

ಅಧ್ಯಕ್ಷರಾಗಿ ವಿಜಯ ಲಕ್ಷ್ಮಿ ಬಿ. ಪಾಟೀಲ, ಉಪಾಧ್ಯಕ್ಷರಾಗಿ ಕವಿತಾ ಮಾಟೂರು ಅವಿರೋಧ ಆಯ್ಕೆ
ಮಸ್ಕಿ.ನ.೪- ಪುರಸಭೆಯ ಉಳಿದ ಅವದಿಗೆ ಅಧ್ಯಕ್ಷರಾಗಿ ಬಿಜೆಪಿಯ ವಿಜಯಲಕ್ಷ್ಮೀ ಬಿ. ಪಾಟೀಲ್ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿಯ ಕವಿತಾ ಎ. ಮಾಟೂರು ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಇಬ್ಬರ ಆಯ್ಕೆ ಅವಿರೋಧವಾಗಿದೆ ಎಂದು ಚುನಾವಣಾಧಿಕಾರಿ ಬಲರಾಮ ಕಟ್ಟೀಮನಿ ಘೋಷಿಸಿದರು.
ಅಧ್ಯಕ್ಷ ಹಾಗೂ ಉಪಾದ್ಯಕ್ಷ ಆಯ್ಕೆ ಅವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭಮಾಚರಣೆ ಮಾಡಿದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಬಿಜೆಪಿ ಜಿಲ್ಲಾ ಘಟಕದ ಅದ್ಯಕ್ಷ ರಾಮಾನಂದ ಯಾದವ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅಪ್ಪಾಜಿಗೌಡ ಪಾಟೀಲ್, ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ ಸೇರಿದಂತೆ ಮುಖಂಡರು ಇದ್ದರು.
ಚುನಾವಣಾಧಿಕಾರಿ ವರ್ತನೆಗೆ ಪತ್ರಕರ್ತರ ಸಂಘ ಖಂಡನೆ: ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ನಾಮಪತ್ರ ಸಲ್ಲಿಕೆ ವೇಳೆ ಪೋಟೊ ತೆಗೆಯಲು ಅವಕಾಶ ನೀಡದ ಚುನಾವಣಾಧಿಕಾರಿ ಬಲರಾಮ ಕಟ್ಟಿಮನಿ ವರ್ತನೆಯನ್ನು ತಾಲ್ಕೂಕು ಪತ್ರಕರ್ತ ಸಂಘ ಖಂಡಿಸಿದೆ.
ನಾಮಪತ್ರ ಸಲ್ಲಿಕೆ ವೇಳೆ ಪಕ್ಷದ ಕಾರ್ಯಕರ್ತರು ಪೋಟೋ ತೆಗೆಯುತ್ತಿದ್ದಾರೆ. ಪತ್ರಕರ್ತರಿಗೆ ಯಾಕೆ ಅವಕಾಶ ಕೊಡುತ್ತಿಲ್ಲ ಎಂದು ಪತ್ರಕರ್ತ ಸಂಘದ ಜಿಲ್ಲಾ ಪ್ರತಿನಿಧಿ ಅಬ್ದುಲ್ ಅಜೀಜ್, ಸಂಘದ ತಾಲ್ಲೂಕು ಅಧ್ಯಕ್ಷ ಪ್ರಕಾಶ ಮಸ್ಕಿ, ವೀರೇಶ ಸೌದ್ರಿ, ಇಂದ್ರಪಾಷಾ, ನಬೀ ಶೆಡಮಿ ಇತರರು ತಹಶಿಲ್ದಾರ ಅವರನ್ನು ತರಾಟೆದುಕೊಂಡ ಘಟನೆ ನಡೆಯಿತು.
ಚುನಾವಣಾಧಿಕಾರಿ ವರ್ತನೆ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಲು ತಾಲ್ಲೂಕು ಪತ್ರಕರ್ತರ ಸಂಘ ನಿರ್ಧಾರ ತೆಗೆದುಕೊಂಡಿದೆ