ಮಸ್ಕಿ ತಾಲೂಕಿಗೆ ೬ ಸಾವಿರ ಮನೆ ಮಂಜೂರು- ಸಚಿವ ವಿ.ಸೋಮಣ್ಣ

ಮಸ್ಕಿ,ನ.೧೯- ಮಸ್ಕಿ ತಾಲೂಕು ಗುಡಿಸಲು ಮುಕ್ತ ತಾಲೂಕು ಮಾಡಲು ಗ್ರಾಪಂ. ವ್ಯಾಪ್ತಿಯಲ್ಲಿ ೫ ಸಾವಿರ , ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾವಿರ ಮನೆ ಸೇರಿದಂತೆ ತಾಲೂಕಿಗೆ ಒಟ್ಟು ೬ ಸಾವಿರ ಮನೆ ಮಂಜೂರು ಮಾಡಲು ವಸತಿ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡುವೆ ಎಂದು ವಸತಿ ಖಾತೆ ಸಚಿವ ವಿ. ಸೋಮಣ್ಣ ಹೇಳಿದರು. ಇಲ್ಲಿಯ ಭ್ರಮರಾಂಭ ಕಲ್ಯಾಣ ಮಂಟಪ ಬಳಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು ವಸತಿ ಹೀನ ಕಡು ಬಡವರನ್ನು ಗುರುತಿಸಿ ಮನೆ ಮಂಜೂರು ಮಾಡಬೇಕು ಎಂದರು. ಪ್ರಧಾನಿ ನರೇಂದ್ರ ಮೋದಿ, ಸಿಎಂ. ಯಡಿಯೂರಪ್ಪ ನೇತ್ರತ್ವದ ಸರಕಾರಗಳು ಜನ ಮೆಚ್ಚುಗೆ ಪಡೆದಿವೆ ಇತ್ತೀಚಿಗೆ ನಡೆದ ಎರಡು ಉಪ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿ ಗಳು ಭರ್ಜರಿ ಜಯ ಸಾಧಿಸಿದ ರೀತಿಯಲ್ಲಿ ಮಸ್ಕಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಪ್ರತಾಪಗೌಡ ಪಾಟೀಲ್ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಒಡೆದ ಮನೆಯಾಗಿದೆ ಇನ್ನು ಕೆಲ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ನೆಲೆ ಕಳೆದು ಕೊಳ್ಳಲಿದೆ ಬಸನಗೌಡ ತುರ್ವಿಹಾಳ ಅವರಿಗೆ ಅಧಿಕಾರ ನೀಡಿದ್ದರೂ ಬಿಜೆಪಿ ಏಕೆ ತೊರೆದಿದ್ದಾರೆ ಎಂದು ಗೊತ್ತಾಗುತ್ತಿಲ್ಲ ಎಂದು ಸಚಿವ ಸೋಮಣ್ಣ ಹೇಳಿದರು. ಈ ಭಾಗದ ರೈತರ ಬಹು ದಿನದ ಬೇಡಿಕೆ ೫ಎ. ಕಾಲುವೆ ನೀರಾವರಿ ಯೋಜನೆ ಕಾರ್ಯಗತ ಗೊಳಿಸಲು ಮತ್ತು ಭತ್ತಕ್ಕೆ ಬೆಂಬಲ ಬೆಲೆ ನಿಗದಿ ಪಡಿಸಲು ಸಿಎಂ. ಯಡಿಯೂರಪ್ಪ ಜತೆ ಚರ್ಚೆ ಮಾಡುವೆ ಎಂದು ಭರವಸೆ ನೀಡಿದರು.
ಅಭಿವೃದ್ದಿ ಗೋಸ್ಕರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪ್ರತಾಪಗೌಡ ಪಾಟೀಲ್ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿದರೆ ಪ್ರತಾಪಗೌಡ ಪಾಟೀಲ್ ಸಚಿವ ರಾಗುವ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯಲ್ಲಿ ಇನ್ನು ಹೆಚ್ಚು ಅಭಿವೃದ್ದಿಕೆಲಸ ಮಾಡುತ್ತಾರೆ ಕ್ಷೇತ್ರದ ಮತದಾರರು ಪ್ರತಾಪಗೌಡರನ್ನು ಗೆಲ್ಲಿಸ ಬೇಕು ಎಂದು ಕೈಮುಗಿದು ಬೇಡಿ ಕೊಳ್ಳುತ್ತೆನೆ ಎಂದು ಸಚಿವ ಸೋಮಣ್ಣ ಮನವಿ ಮಾಡಿದರು. ಸುರಪೂರು ಶಾಸಕ ರಾಜೂ ಗೌಡ ಮಾತನಾಡಿ ಪ್ರತಾಪಗೌಡ ಪಾಟೀಲ್, ಆನಂದ ಸಿಂಗ್ ಇಬ್ಬರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮೊದಲು ಮುಂದಾದ ಕಾರಣ ಇನ್ನುಳಿದ ಶಾಸಕರು ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಯಡಿಯೂರಪ್ಪ ನೇತ್ರತ್ವದ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು ಚುನಾವಣೆಯಲ್ಲಿ ಮತದಾರರು ತ್ಯಾಗ ಜೀವಿ ಪ್ರತಾಪಗೌಡರ ಕೈ ಬಿಡಬಾರದು ಎಂದು ಮನವಿ ಮಾಡಿದರು. ಪ್ರತಾಪಗೌಡ ಪಾಟೀಲ್ ಯಾವಾಗಲೂ ಗಂಟು ಮುಖ ಹಾಕಿ ಕೊಳ್ಳದೆ ಲವ ಲವಿಕೆ ಯಿಂದ ನಗು ನಗುತಾ ಚುನಾವಣೆ ಎದುರಿಸಬೇಕು .
ಈ ಸಮಾವೇಶದಲ್ಲಿ ಸೇರಿದ ಜನ ಸಮೂಹ ನಿಮ್ಮನ್ನು ಗೆಲುವಿನ ದಡ ಸೇರಿಸಲಿದ್ದಾರೆ ಎಂದು ರಾಜೂ ಗೌಡ ಪ್ರತಾಪ ಗೌಡ ರಿಗೆ ಧೈರ್ಯ ತುಂಬಿದರು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ ತಾಲೂಕಿನಲ್ಲಿ ನನೆ ಗುದಿಗೆ ಬಿದ್ದಿರುವ ಮನೆಗಳ ನಿರ್ಮಾಣಕ್ಕೆ ೯ ಕೋಟಿ ರೂ ಅನುದಾನ ಬಿಡುಗಡೆ ಮಾಡಬೇಕು ಕನಕ ನಾಲಾ, ೫ಎ. ಕಾಲುವೆ ನೀರಾವರಿ ಯೋಜನೆ ಅನುಷ್ಟಾನಕ್ಕೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಕೊಪ್ಪಳ ಸಂಸದ ಸಂಗಣ್ಣ ಕರಡಿ,ಶಾಸಕರಾದ ಬಸವರಾಜ ಧಡೇಸುಗೂರು, ಹಾಲಪ್ಪ ಆಚಾರ್, ಮಾಜಿ ಶಾಸಕರಾದ ಗಂಗಾಧರ ನಾಯಕ,ಬಸನಗೌಡ ಬ್ಯಾಗವಾಟ್, ಎನ್. ಶಂಕ್ರಪ್ಪ, ಮಾನಪ್ಪ ವಜ್ಜಲ್, ಮಾತನಾಡಿದರು. ರಾಯಚೂರು ಶಾಸಕ ಶಿವರಾಜ ಪಾಟೀಲ್, ಮಾಜಿ ಶಾಸಕ ಪಾಪ ರೆಡ್ಡಿ, ಶರಣಪ್ಪ ಗೌಡ ಜಾಡಲದಿನ್ನಿ, ವಿಶ್ವನಾಥ ರೆಡ್ಡಿ ಸೇರಿದಂತೆ ಅನೇಕ ಮುಖಂಡರಿದ್ದರು ಸಾವಿರಾರು ಜನರು ಸೇರಿದ್ದ ಸಮಾವೇಶ ಮತ್ತು ವೇದಿಕೆಯಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಂಡಿದ್ದು ಕಂಡು ಬರಲಿಲ್ಲ.

(೧೮, ನ. ಎಂಎಸ್ಕೆ ಪೋಟೋ೦೧)