ಮಸ್ಕಿ ಚುನಾವಣೆ : ಮತದಾನ ಹೆಚ್ಚಳಕ್ಕೆ ವಿಶೇಷ ಜಾಗೃತಿ

ರಾಯಚೂರು.ಮಾ.೨೫- ಮಸ್ಕಿ ಉಪ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಅನೇಕ ಕ್ರಮ ಕೈಗೊಳ್ಳಲಾಗುತ್ತದೆ. ಹಾಗೂ ವೃದ್ಧರು ಮತ್ತು ವಿಕಲಚೇತನರಿಗೆ ನೇರ ಮತದಾನ ಅಥವಾ ಪೋಸ್ಟಲ್ ಮತದಾನದ ಅವಕಾಶ ಕಲ್ಪಿಸಲಾಗುತ್ತದೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಮಸ್ಕಿ ಉಪ ಚುನಾವಣೆ ಮತದಾರರ ಜಾಗೃತಿ ಸಮಿತಿ ಮುಖ್ಯಸ್ಥ ಶೇಖ್ ತನ್ವಿರ್ ಆಸೀಫ್ ಅವರು ಹೇಳಿದರು.
ಅವರಿಂದು ನಗರದ ಜಲ ನಿರ್ಮಲ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಉಪ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಕೆಲ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಎರಡು ಸಖಿ ಬೂತ್‌ಗಳನ್ನು ನಿರ್ವಹಿಸಲಾಗುತ್ತಿದೆ. ಕಳೆದ ಚುನಾವಣೆಯಲ್ಲಿ ಶೇ.೧೦ ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮತದಾನ ಚಲಾವಣೆಗೊಂಡ ಹಿನ್ನೆಲೆಯಲ್ಲಿ ಗಮನ ಹರಿಸಲಾಗುತ್ತದೆ. ಒಟ್ಟಾರೆಯಾಗಿ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವಂತೆ ಮಾಡಲು ಮತಾದರರಲ್ಲಿ ಜಾಗೃತಿ ಕಾರ್ಯಕ್ರಮ ನಿರ್ವಹಿಸಲಾಗುತ್ತದೆ.
ವಿಕಲಚೇತನರು ಮತ್ತು ೮೦ ವಯೋಮಿತಿ ಮೇಲ್ಪಟ್ಟ ವೃದ್ಧರಿಗೆ ಅಂಚೆ ಮತದಾನದ ವ್ಯವಸ್ಥೆ ಮಾಡಲಾಗಿದೆ. ಇವರು ಬೇಕಾದರೇ ನೇರವಾಗಿ ಮತಗಟ್ಟೆಗೆ ಬಂದು ಮಾತದಾನ ಮಾಡುವ ಅವಕಾಶವೂ ಹೊಂದಿರುತ್ತಾರೆ. ಮತದಾನ ಕಡ್ಡಾಯವಾಗಿ ಮಾಡುವಂತೆ ಜಾಗೃತಿ ಮೂಡಿಸುವುದರೊಂದಿಗೆ ಕೊರೊನಾ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗುತ್ತದೆಂದು ಹೇಳಿದರು.
ಪೊಲಿಂಗ್ ಬೂತ್‌ಗಳ ಒಂದು ಕೋಣೆಯಲ್ಲಿ ಮೂವರಿಗಿಂತ ಹೆಚ್ಚು ಜನರಿಗೆ ಅವಕಾಶವಿರುವುದಿಲ್ಲ. ಈ ಬಾರಿ ವಿಕಲಚೇತನರಿಗೆ ವಿಲ್ಹ್ ಚೇರ್, ೮೫ ವರ್ಷ ಮೇಲ್ಪಟ್ಟ ವೃದ್ಧರಿಗೆ, ಕೋವಿಡ್ ಪಾಸಿಟಿವ್ ಬಂದವರಿಗೆ ಅಂಚೆಚೀಟಿಯ ಮುಖಾಂತರ ಮತದಾನದ ಅವಕಾಶವನ್ನು ನೀಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರಚಾರಕ್ಕೆ ಮಕ್ಕಳ ಬಳಕೆ ಇಲ್ಲ ಇರುವುದಿಲ್ಲ. ಬದಲಿಗೆ ಶಾಲಾ, ಕಾಲೇಜುಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಮತದಾನ ಸಂದರ್ಭದಲ್ಲಿ ವ್ಯಾಕ್ಸಿನೇಶನ್ ಬಗ್ಗೆ ಜಾಗೃತಿ ಮುಡಿಸಲಾಗುವುದು. ಸಂಬಂಧಪಟ್ಟ ಇಲಾಖೆಗಳಿಗೆ. ಕೆಎಸ್‌ಆರ್‌ಟಿಸಿ ಟಿಕೆಟ್ ಮತ್ತು ಬ್ಯಾಂಕ್ ಪಾಸ್ ಬುಕ್‌ಗಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ.
ಸೂಕ್ಷ್ಮ ಮತಗಟ್ಟೆಗಳಲ್ಲಿ ವಿಡಿಯೋ ಮಾಡಿಸಲಾಗುತ್ತದೆಂದರು.