ಮಸ್ಕಿ ಚುನಾವಣೆ: ಜೆಡಿಎಸ್ ಸ್ಪರ್ಧೆ

ರಾಯಚೂರು. ಮಾ.೧೮.ಮಸ್ಕಿ ಉಪಚುನಾವಣೆಯಲ್ಲಿ ಜನತಾದಳ ಪಕ್ಷದ ವತಿಯಿಂದ ಅಭ್ಯರ್ಥಿಯನ್ನು ಕಣಕಿಳಿಸಲು ಹೈಕಮಾಂಡ್ ನಿರ್ಧರಿಸಿದೆ.
ಇಂದು ಬೆಂಗಳೂರಿನ ಎಚ್.ಡಿ.ಕುಮಾರ ಸ್ವಾಮಿ ಅವರ ನಿವಾಸದಲ್ಲಿ ಜನತಾದಳ ಪಕ್ಷದ ಜಿಲ್ಲಾ ಮುಖಂಡರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು ಮಸ್ಕಿ ಉಪ ಚುನಾವಣೆಯಲ್ಲಿ ರಾಘವೇಂದ್ರ ಅಥವಾ ಜಿ.ಪಂ
ಸದಸ್ಯ ಖಸಿಂ ನಾಯಕ್ ಅವರನ್ನು ಕಣಕ್ಕಿಳಿಸಲು ನಿರ್ದರಿಸಲಾಯಿತು.
ರಾಘವೇಂದ್ರ ಅವರು ಪ್ರತಾಪ ಗೌಡ ಪಾಟೀಲ್ ಅವರ ಆಪ್ತವಲಯದವರಾಗಿದ್ದು ಅವರು ಜೆಡಿಎಸ್ ಅಭ್ಯರ್ಥಿಯಾಗಲು ಮುಂದಾಗಿದ್ದಾರೆ ಅವರಿಗೆ ಪರಿಯಯಾವಾಗಿ ಜಿ.ಪಂ. ಸದಸ್ಯರಾದ ಖಾಸಿಂ ನಾಯಕ ಬಗ್ಗೆಯೂ ಪಕ್ಷವು ಪರಿಸಿಲಿಸಲಾಗುತ್ತಿದೆ.
ಈ ಸಭೆಯಲ್ಲಿ ಶಾಸಕರಾದ ವೆಂಕಟರಾವ ನಾಡಗೌಡ,ರಾಜ ವೆಂಕಟಪ್ಪ ನಾಯಕ್,ಎಂ.ವೀರೂಪಕ್ಷಿ,ಶಿವಶಂಕರ ವಕೀಲ,ಕೆ.ಕರೇಮ್ಮ,ಸಿದ್ದುಬಂಡಿ,ಜಿ.ತಿಮ್ಮರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.