
ಕವಿತಾಳ,ಮೇ.೦೫- ಪಾಮನಕಲ್ಲೂರು-ಪಟ್ಟಣದಲ್ಲಿ ಮಾಜಿ ಶಾಸಕ ಎನ್.ಎಸ್. ಬೋಸ್‌ರಾಜ್ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಸಭೆಯಲ್ಲಿ ಮಾತನಾಡಿ ಬಸನಗೌಡ ತುರ್ವಿಹಾಳ ಅಲ್ಪಾವಧಿಗೆ ಶಾಸಕನಾಗಿ ಆಯ್ಕೆಯಾಗಿದ್ದಾರೆ. ಅಲ್ಪ ಅವಧಿಯಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಮತ್ತೊಮ್ಮೆ ಅವರಿಗೆ ಆಶೀರ್ವಾದ ಮಾಡಿ ಮಸ್ಕಿ ಕ್ಷೇತ್ರದ ಅಭಿವೃದ್ಧಿಗಾಗಿ ಪಣತೊಟ್ಟಿದ್ದಾರೆ. ಮುಂದಿನ ಭಾಗದಲ್ಲಿ ಬರುವ ಅನೇಕ ಹಳ್ಳಿಗಳ ರೈತರು ಮಹಿಳೆಯರು ಮಸ್ಕಿ ಯುವಕರು ಕಾಂಗ್ರೆಸ್ ಪಕ್ಷಕ್ಕೆ ಮತ್ತು ಅಭ್ಯರ್ಥಿ ಆರ್.ಬಸನಗೌಡ ತುರರ್ವಿಹಾಳ ಅವರಿಗೆ ಉಪಚುನಾವಣೆಯಲ್ಲಿ ಹೆಚ್ಚು ಬಹುಮತದಿಂದ ಶಕ್ತಿ ತುಂಬಿ ವಿಧಾನಸೌಧಕ್ಕೆ ಕಳಿಸಿದ ಕೀರ್ತಿ ಈ ಭಾಗಕ್ಕೆ ಸಲ್ಲುತ್ತದೆ ಹಾಗೂ ಮತ ನೀಡಿ ಆಶೀರ್ವದಿಸಬೇಕು ಎಂದು ಹೇಳಿದರು.