ಮಸ್ಕಿ : ಕಾರಜೋಳ ಪ್ರಚಾರ ಕಾರ್ಯಕ್ರಮ

ರಾಯಚೂರು.ಏ.07- ರಾಜ್ಯದ ಉಪ ಮುಖ್ಯಮಂತ್ರಿ ಗೋವಿಂದ್ ಎಂ.ಕಾರಜೋಳ ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಅವರ ಪರ ಮಸ್ಕಿ ವಿಧಾನಸಭಾ ಕ್ಷೇತ್ರದ ಕುರುಕುಂದ, ಹಂಚಿನಾಳ, ಕಾನಿಹಾಳ, ಗುಡಗಲದಿನ್ನಿ, ಉಪ್ಪಲದೊಡ್ಡಿಯಲ್ಲಿ ಪ್ರಚಾರ ನಡೆಸಲಾಯಿತು.
ಈ ಪ್ರಚಾರ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರಭುದ್ಧ ಕೋಷ್ಠಕದ ಸದಸ್ಯರಾದ ಡಾ.ಬಸವನಗೌಡ ಪಾಟೀಲ್ ಹಾಗೂ ಲಿಂಗಸೂಗೂರು ಪುರಸಭೆ ಸದಸ್ಯರು ಹಾಗೂ ಮಾಜಿ ತಾಲೂಕು ಬಿಜೆಪಿ ಅಧ್ಯಕ್ಷರಾದ ದೊಡ್ಡನಗೌಡ ಜಿ. ಹೊಸಮನಿ ಪಾಲ್ಗೊಂಡಿದ್ದರು.