
ರಾಜ್ಯದಲ್ಲಿ 20 ಪರ್ಸೇಂಟ್ ಬಿಜೆಪಿ ಭ್ರಷ್ಟ ಸರ್ಕಾರದ ಆಡಳಿತ
ರಾಯಚೂರು.ಏ.06- ಮುಖ್ಯಮಂತ್ರಿಗಳ ವಿರುದ್ಧ ಅವರದ್ದೇ ಸಂಪುಟ ಸಚಿವರಿಂದ ರಾಜ್ಯಪಾಲರಿಗೆ ದೂರು ಸೇರಿದಂತೆ ಅನೇಕ ವಿವಾದಗಳ ಸುಳಿಯಲ್ಲಿ ಸಿಕ್ಕಿರುವ ರಾಜ್ಯ ಸರ್ಕಾರವನ್ನು ವಿಸರ್ಜಿಸಿ, ಚುನಾವಣೆಗೆ ಓಗೋಣಾವೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಸವಾಲ್ ಹಾಕಿದರು.
ಅವರಿಂದು ಮಸ್ಕಿ ವಿಧಾನಸಭಾ ಚುನಾವಣೆಯಲ್ಲಿ ಎರಡನೇ ದಿನದ ರೋಡ್ ಶೋ ಸಂದರ್ಭಧಲ್ಲಿ ಮಾತನಾಡುತ್ತಾ, ಸರ್ಕಾರ ವಿಸರ್ಜನೆಗೆ ಸಂಬಂಧಿಸಿ ನನ್ನ ಹೇಳಿಕೆಗೆ ಯಡಿಯೂರಪ್ಪ ಅವರಿಂದ ಯಾವುದೇ ಪ್ರತಿಕ್ರಿಯೆ ಇಲ್ಲವಾಗಿದೆ. ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪಕ್ಕೆ ಸಂಬಂಧಿಸಿ ಆಕ್ಷೇಪಿಸುವುದು ಮಾತ್ರವಲ್ಲ. ರಾಜ್ಯಪಾಲರಿಗೆ ಈ ಬಗ್ಗೆ ದೂರು ಸಹ ನೀಡಿದ್ದಾರೆ. ಯಾವುದೇ ಹಸ್ತಕ್ಷೇಪವಿಲ್ಲದಿದ್ದರೇ, ರಾಜ್ಯಪಾಲರಿಗೆ ದೂರು ನೀಡಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ಇದು ಸರ್ಕಾರ ಮತ್ತು ಪಕ್ಷದಲ್ಲಿ ಎಲ್ಲವೂ ಸರಿ ಇದೆ ಎಂದು ಹೀಗೆ ಅನಿಸಲು ಸಾಧ್ಯ?.
5ಎ ಕಾಲುವೆ ಯೋಜನೆಗೆ ಸಂಬಂಧಿಸಿ 2013 ರಲ್ಲಿ ಮತ್ತೇ ಶಾಸಕರಾದ ಪ್ರತಾಪಗೌಡ ಪಾಟೀಲ್ ಅವರು ತಮ್ಮ ಗಮನಕ್ಕೆ ತಂದಿದ್ದರೇ, ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿತ್ತು. ಆದರೆ, ಪ್ರತಾಪಗೌಡ ಪಾಟೀಲ್ ಅವರು ಯೋಜನೆಗೆ ಸಂಬಂಧಿಸಿ ಒಮ್ಮೆಯೂ ಮಾತನಾಡಿಲ್ಲ. ಈ ಕುರಿತು ನಾನು ವಿರೋಧ ಪಕ್ಷದ ನಾಯಕನಾಗಿ ವಿಧಾನಸಭೆಯಲ್ಲಿ ಮಾತನಾಡುತ್ತೇನೆ. 130 ದಿನಗಳ ಹೋರಾಟ ನಡೆದರೂ, ಸರ್ಕಾರ ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಧರಣಿ ಸತ್ಯಾಗ್ರಹ ಕೈಬಿಡಿ. ಈ ಸರ್ಕಾರ ಯೋಜನೆ ಮಾಡದಿದ್ದರೇ, 2023 ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಈ ಯೋಜನೆಗೆ 3 ಸಾವಿರ ಕೋಟಿ ಹಣ ನೀಡಿ, ಪೂರ್ಣಗೊಳಿಸುವ ಜವಾಬ್ದಾರಿ ನನ್ನದೆಂದರು.
ಬಸವನಗೌಡ ಯತ್ನಾಳ ಅವರು ಪ್ರತಿನಿತ್ಯ ಪಕ್ಷದ ವಿರುದ್ಧ ಮಾತನಾಡುತ್ತಾರೆ. ಮೇ ತಿಂಗಳಲ್ಲಿ ಸರ್ಕಾರ ಬೀಳುವ ಮುನ್ಸೂಚನೆಯನ್ನು ನೀಡಿದ್ದಾರೆ. ಯತ್ನಾಳ ವಿರುದ್ಧ ಏಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಶಿಸ್ತು ಕ್ರಮ ಕೈಗೊಳ್ಳಲು ಎಷ್ಟು ಸಮಯ ಬೇಕು. ಕೆ.ಎಸ್.ಈಶ್ವರಪ್ಪ ಮತ್ತು ಯತ್ನಾಳ ಅವರಿಗೆ ಆರ್ಆರ್ಎಸ್ ಮುಖ್ಯಸ್ಥರು, ಪಕ್ಷದ ರಾಷ್ಟ್ರೀಯ ಮುಖಂಡರಾದ ಸಂತೋಷ ಅವರ ಸಂಪೂರ್ಣ ಬೆಂಬಲವಿದೆ. ಬಿ.ಎಸ್.ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸುವುದು ಈ ಎಲ್ಲಾ ಹೇಳಿಕೆ ಮತ್ತು ದೂರುಗಳ ಉದ್ದೇಶವಾಗಿದೆ.
ಅನ್ಯಭಾಗ್ಯ ಯೋಜನೆ ಬಿಜೆಪಿಯ ಯೋಜನೆಯೆಂದು ಹೇಳುವ ರೇಣುಕಾಚಾರ್ಯ ಯಾರು?. ಮೊದಲೇ ಉದ್ದೇಶಿತ ಯೋಜನೆ ಬಗ್ಗೆ ಕಡತ ಸಿದ್ಧಗೊಂಡಿದ್ದರೇ, ಅಕ್ಕಿ ವಿತರಣೆಯನ್ನು 5 ಕೆಜಿಗೆ ಇಳಿಸಿದ್ದಾದರೂ ಏಕೆ?. ನನ್ನ 40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಇಷ್ಟೊಂದು ಭ್ರಷ್ಟ ಸರ್ಕಾರವನ್ನು ಕಂಡಿರಲಿಲ್ಲ. ರಾಜ್ಯದಲ್ಲಿ 20 ಪರ್ಸೇಂಟ್ ಸರ್ಕಾರ ಅಧಿಕಾರದಲ್ಲಿದೆ. ವಿಜಯೇಂದ್ರ ಅವರಿಗೆ ದುಡ್ಡು ಕೊಟ್ಟರೇ, ಟ್ರಾನ್ಸ್ಫರ್ ಆಗುತ್ತದೆ. ಯಡಿಯೂರಪ್ಪ ಅವರು ಕೇವಲ ಸಹೀ ಮಾಡುವ ಮುಖ್ಯಮಂತ್ರಿ. ವಿಜಯೇಂದ್ರ ಅಧಿಕಾರ ನಿರ್ವಹಿಸುವ ಬೆನ್ನ ಹಿಂದಿನ ಮುಖ್ಯಮಂತ್ರಿಯಾಗಿದ್ದಾರೆಂದು ಆರೋಪಿಸಿದರು.
ಮಸ್ಕಿ ಚುನಾವಣೆಯಲ್ಲಿ ಬಸವನಗೌಡ ತುರ್ವಿಹಾಳ ಅವರಿಗೆ ಭಾರೀ ಬೆಂಬಲ ವ್ಯಕ್ತಗೊಂಡಿದೆ. ಈ ಬೆಂಬಲ ಅವರು ಈ ಸಲ ಬಸವನಗೌಡ ಅವರನ್ನು ಗೆಲ್ಲಿಸುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಅಲ್ಲದೇ ಹಣಕ್ಕಾಗಿ ಮಾರಿಕೊಂಡ ಪ್ರತಾಪಗೌಡ ಪಾಟೀಲ್ ಅವರು ಮನೆ ಸೇರುವುದು ನಿಶ್ಚಿತವೆಂದರು.