ಮಸ್ಕಿ : ಕಟ್ಟಾರಿಂದ ಬಿಜೆಪಿ ಪರ ಪ್ರಚಾರ

ರಾಯಚೂರು.ಏ.05- ಮಸ್ಕಿ ಉಪಚುನಾವಣೆ ಪ್ರಚಾರ ತೀವ್ರಗೊಂಡಿದೆ. ಈ ಚುನಾವಣೆ ಉಸ್ತುವಾರಿಯಲ್ಲೊಬ್ಬರಾದ ಕಟ್ಟಾ ಸುಬ್ಮಮಣ್ಯ ನಾಯ್ಡು ನಿನ್ನೆ ಪ್ರಚಾರ ಕೈಗೊಂಡರು.
ತಾಲೂಕಿನ ಹಾಲಾಪೂರು ಪಂಚಾಯತಿ ವ್ಯಾಪ್ತಿಗೆ ಬರುವ ಜೋಳದರಾಶಿ ಕ್ಯಾಂಪ್, ನಾರಾಯಣ ನಗರ ಕ್ಯಾಂಪ್, ತುಗ್ಗಲದಿನ್ನಿ ಕ್ಯಾಂಪ್ ಗಳಲ್ಲಿ ಪ್ರಚಾರ ನಡೆಸಿದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಪರ ಪ್ರಚಾರ ನಡೆಸಿದರು. ಈ ವೇಳೆ ಮಾಜಿ ವಿಧಾನ ಪರಿಷತ್ ಸದಸ್ಯರಾದ ಎನ್.ಶಂಕರಪ್ಪ, ಮಾಜಿ ಶಾಸಕರಾದ ಪಾಪಾರೆಡ್ಡಿ, ರಾಜ್ಯ ಬಿಜೆಪಿ ಹಿರಿಯ ಮುಖಂಡರು ಕೊಲ್ಲಶೇಷಾಗಿರಿ ರಾವ್, ರಾಜ್ ಕುಮಾರ್‌, ಅಮರೇಶ್ ಹೊಸಮನಿ ಅವರು ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.