ಮಸ್ಕಿ ಉಪ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಪರ

ಏ.12 : ಲೇಖಕರು, ಸಾಹಿತಿಗಳು ಪ್ರಚಾರ
ರಾಯಚೂರು.ಏ.07- ಮಸ್ಕಿ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಬಸವನಗೌಡ ತುರ್ವಿಹಾಳ ಅವರ ಪರ ಚುನಾವಣಾ ಪ್ರಚಾರಕ್ಕಾಗಿ ಏ.12 ರಂದು ರೈತ ಹೋರಾಟಗಾರರು ಹಾಗೂ ಕನ್ನಡ ಪ್ರಾಧಿಕಾರದ ಮಾಜಿ ಅಧ್ಯಕ್ಷರುಗಳಾದ ಎಸ್.ಜಿ.ಸಿದ್ದರಾಮಯ್ಯನವರು, ಮುಖ್ಯಮಂತ್ರಿ ಚಂದ್ರು, ಬರಗೂರು ರಾಮಚಂದ್ರಪ್ಪ, ಬಿ.ಟಿ.ಲಲಿತಾ ನಾಯಕ, ವಸುಂಧರ ಭೂಪತಿ ಅವರು ಆಗಮಿಸಲಿದ್ದಾರೆಂದು ಪ್ರಜಾಪ್ರಭುತ್ವ ಉಳಿವಿಗಾಗಿ ಸಂವಿಧಾನ ಬಚಾವ್, ಪ್ರಧಾನ ಕಾರ್ಯದರ್ಶಿಗಳಾದ ಜಗನ್ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮಸ್ಕಿ ಕ್ಷೇತ್ರದಲ್ಲಿ ಪ್ರತಾಪಗೌಡ ಪಾಟೀಲ್ ಅವರು ಎರಡು ಬಾರೀ ಚುನಾಯಿತಗೊಂಡರೂ, ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಇವರು ಪಕ್ಷವನ್ನು ಬದಾಲಿಯಿಸಿ, ಮೋಜು, ಮಸ್ತಿಯಲ್ಲಿ ಮುಳುಗಿದ್ದಾರೆ. ಬಿಜೆಪಿ ಸರ್ಕಾರವೂ ಹಲವಾರು ಬೆಲೆ ಏರಿಕೆ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ರಚಿಸಲು ಕೋಟಿಗಟ್ಟಲೇ ಸುಮಾರು ಹಣವನ್ನು ಶಾಸಕರಿಗೆ ನೀಡಿ, ಖರೀದಿ ಮಾಡಿದ್ದಾರೆ. ಈ ಸರ್ಕಾರವೂ ಯಾವುದೇ ಜನಪರ ದಲಿತ, ರೈತ ಕಾರ್ಮಿಕ ಮಹಿಳೆಯರ ಪರವಾಗಿ ಅಭಿವೃದ್ಧಿ ಕೆಲಸ ಮಾಡಿರುವುದಿಲ್ಲ.
ಬಸವನಗೌಡ ತುರ್ವಿಹಾಳ ಅವರು ಕಳೆದ ಭಾರೀ ಚುನಾವಣೆಯಲ್ಲಿ 213 ಮತಗಳಿಂದ ಪರಾಭವಗೊಂಡಿದ್ದಾರೆ. ಆದ್ದರಿಂದ ಈ ಬಾರೀ ಅನುಕಂಪದ ಆಧಾರದ ಮೇಲೆ ಬಸವನಗೌಡ ತುರ್ವಿಹಾಳ ಅವರನ್ನು ಮಸ್ಕಿ ಉಪ ಚುನಾವಣೆಯಲ್ಲಿ ಗೆಲ್ಲಿಸಲು ಲೇಖಕರು, ಸಾಹಿತಿಗಳು, ಚಿಂತಕರು ಹಾಗೂ ರೈತ ಹೋರಾಟಗಾರರು ಮತ್ತು ಕನ್ನಡ ಪ್ರಾಧಿಕಾರದ ಮಾಜಿ ಅಧ್ಯಕ್ಷರುಗಳಾದ ಎಸ್.ಜಿ.ಸಿದ್ದರಾಮಯ್ಯನವರು, ಮುಖ್ಯಮಂತ್ರಿ ಚಂದ್ರು, ಬರಗೂರು ರಾಮಚಂದ್ರಪ್ಪ, ಮರಳು ಸಿದ್ದಪ್ಪ, ಬಿ.ಟಿ.ಲಲಿತಾ ನಾಯಕ, ವಸುಂಧರ ಭೂಪತಿ ಸೇರಿದಂತೆ ಅಲ್ಪಸಂಖ್ಯಾತ ಮುಖಂಡರು, ಗಣ್ಯರು, ಮಸ್ಕಿ ಕ್ಷೇತ್ರದ ಮತದಾರರಲ್ಲಿ ಜಾಗೃತಿ ಮೂಡಿಸಲು ಜಾಥಾ ಮತ್ತು ಪತ್ರಿಕಾಗೋಷ್ಠಿಯನ್ನು ನಡೆಸಲಾಗುತ್ತದೆಂದು ಹೇಳಿದರು.