ಮಸ್ಕಿ ಉಪಚುನಾವಣೆ; ಸಿದ್ಧು ಬಂಡಿ-ನೀತಿ ಸಂಹಿತೆ ಉಲ್ಲಂಘನೆ

ಲಿಂಗಸುಗೂರು.ಮಾ.೩೦-ರಾಯಚೂರು ಜಿಲ್ಲೆಯಲ್ಲಿ ಮಸ್ಕಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಆಯೋಗ ನಿತಿ ಸಂಹಿತೆ ಜಾರಿ ಮಾಡಿದೆ ಆದರೆ ಲಿಂಗಸುಗೂರು ತಾಲ್ಲೂಕಿನ ಪುರಸಭೆ ವ್ಯಾಪ್ತಿಯಲ್ಲಿ ಬರುವ ನಗರದ ರಸ್ತೆಗಳಲ್ಲಿ ಲಿಂಗಸುಗೂರು ಜೆಡಿಎಸ್ ಮುಖಂಡ ಸಿದ್ಧು ಬಂಡಿ ಅವರ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದಲ್ಲಿ ಬ್ಯಾನರ್ ಹಾಕಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಎಂದು ಸಾರ್ವಜನಿಕರ ಆರೊಪವಾಗಿದೆ ಎಪ್ರಿಲ್ ೦೧ರಂದು
ತಮ್ಮ ಹುಟ್ಟು ಹಬ್ಬದ ಅಂಗವಾಗಿ ಪಟ್ಟಣದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ನಾಗಭೂಷಣ ತಮ್ಮ ಮುಖಂಡ ಸಿದ್ಧು ಬಂಡಿ ಅವರ ಭಾವ ಚಿತ್ರವಿರುವ ಬ್ಯಾನರ್ ಅಳವಡಿಕೆ ಮಾಡಿಕೊಂಡಿದ್ದಾರೆ. ಎಂಬುದನ್ನು ಸ್ಪಷ್ಟವಾಗಿ ಗೋಚರಿಸುತ್ತದೆ ಆದರೆ ಅಧಿಕಾರಿಗಳು ಕಣ್ಣಿಗೆ ಕಂಡರು ಕಾಣದಂತೆ ಇರುವ ಪುರಸಭೆ ಅಧಿಕಾರಿಗಳಿಗೆ ಹಿಡಿದ ಕೈಗನ್ನಡಿಯಾಗಿದೆ ಬ್ಯಾನರ್ ಅಳವಡಿಕೆಗೆ ಪುರಸಭೆ ಅಧಿಕಾರಿಗಳಿಂದ
ಯಾವುದೇ ಅಧಿಕೃತವಾಗಿ ಪರವಾನಿಗೆ ಪಡೆಯದೇ ಇಲ್ಲಿ ಕೂಡ ನಿಯಮ ಉಲ್ಲಂಘನೆ ಮಾಡಿದ್ದಾರೆ.
ಈಗಾಗಲೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ನಿತಿ ಸಂಹಿತೆ ಜಾರಿ ಇದ್ದರು ಲಿಂಗಸುಗೂರು ಜೆಡಿಎಸ್ ಮುಖಂಡ ಸಿದ್ಧು ಬಂಡಿ ಹಾಗೂ ಜೆಡಿಎಸ್ ತಾಲೂಕು ಅಧ್ಯಕ್ಷ ನಾಗಭೂಷಣ ಇವರಿಗೆ ನಿತಿ ಸಂಹಿತೆ ಅನ್ನವಹಿಸುವದಿಲ್ಲವೆ ಪುರಸಭೆ ಅಧಿಕಾರಿಗಳು ಬಡವರಿಗೆ ಒಂದು ನ್ಯಾಯ ಮತ್ತು ರಾಜಕೀಯ ಪಕ್ಷಗಳ ಮುಖಂಡರಿಗೆ ಒಂದು ನ್ಯಾಯ
ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಕೂಡಲೇ ಜಿಲ್ಲೆಯ ಜಿಲ್ಲಾಧಿಕಾರಿಗಳು ಲಿಂಗಸುಗೂರು ತಾಲ್ಲೂಕಿನ ಜೆಡಿಎಸ್ ಮುಖಂಡ ಸಿದ್ಧು ಬಂಡಿ ಹಾಗೂ ಜೆಡಿಎಸ್ ತಾಲೂಕು ಅಧ್ಯಕ್ಷ ನಾಗಭೂಷಣ
ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಪುರಸಭೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಪುರಸಭೆ ಅಧ್ಯಕ್ಷರಾದ ಗದ್ಧೆಮ್ಮ ಯಮನುರ ಬೋವಿ ಜೆಡಿಎಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ ಇಲ್ಲಿ ನಡೆಯುವ ಪ್ರತಿಯೊಂದು ನಗರ ಪ್ರದೇಶದಲ್ಲಿ ನಡೆಯುವ ಕಾರ್ಯಕ್ರಮದ ವಿವರ ಪುರಸಭೆ ಅಧಿಕಾರಿಗಳು ತಿಳಿಸುತ್ತಾರೆ.
ಇಲ್ಲವೊ ಗೊತ್ತಿಲ್ಲ ಆದರೆ ಪುರಸಭೆ ಅಧ್ಯಕ್ಷ ಅನಕ್ಷರಸ್ಥೆ ಎಂದು ಪುರಸಭೆ ಮುಖ್ಯಾಧಿಕಾರಿಗಳು ಅವರಿಗೆ ಮಾಹಿತಿ ನಿಡುತ್ತಾರೆ. ಇಲ್ಲ ಎಂಬುದು ಗೊತ್ತಿಲ್ಲ ಇದರಿಂದ ಅಧ್ಯಕ್ಷೆ ಗಧ್ಯಮ್ಮ ಅಸಾಹಾಯಕರಾಗಿದ್ಧಾರೆ ಎಂದು ತಿಳಿದುಬಂದಿದೆ.
ಎಲ್ಲರಿಗೂ ಒಂದೇ ರೀತಿಯ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪುರಸಭೆ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷ ಉಪಾಧ್ಯಕ್ಷರು ಸೇರಿ ಕ್ರಮ ಕೈಗೊಳ್ಳಲಾಗುವುದು ಇಲ್ಲವೊ ಕಾದು ನೋಡಬೇಕಾಗಿದೆ.