ಮಸ್ಕಿ ಉಪಚುನಾವಣೆ ಮತ ಎಣಿಕೆಗೆ ಸಕಲ ಸಿದ್ಧತೆ

ರಾಯಚೂರು.ಏ.೨೬- ಮಸ್ಕಿ ಉಪಚುನಾವಣೆ ಮತ ಎಣಿಕೆ ನಗರದ ಎಸ್‌ಆರ್‌ಪಿಯು ಕಾಲೇಜಿನಲ್ಲಿ ಮೇ ೨ ರಂದು ಬೆಳಿಗ್ಗೆ ೮ ಗಂಟೆಯಿಂದ ನಡೆಯಲಿದೆ ಎಂದು ಚುನಾವಣೆ ತರಬೇತಿಗಾರ ಸದಾಶಿವ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಚುನಾವಣಾ ಮತ ಏಣಿಕೆ ತರಬೇತಿ ಉದ್ದೇಶಿಸಿ ಮಾತನಾಡಿ ಚುನಾವಣಾಧಿಕಾರಿ ಮತ ಎಣಿಕೆ ಸಂದರ್ಭದಲ್ಲಿ ಹಾಜರಿ ಇರಲು ಪ್ರತಿಯೊಬ್ಬ ವಿಮೇದುವಾರ ಏಜೆಂಟ್‌ನ್ನು ನೇಮಕ ಮಾಡಬಹುದು. ಏಜೆಂಟ್ ವಿಮೇದುವಾರ ಇಬ್ಬರಲ್ಲಿ ಯಾರಾದರೂ ಮಾತ್ರ ಹಾಜರಿರಬೇಕು. ಚುನಾವಣಾ ಅಧಿಕಾರಿ ಎದುರಲ್ಲಿ ಘೋಷಣೆಗೆ ಸಹಿ ಮಾಡಬೇಕೆಂದರು.
ಮತ ಎಣಿಕೆ ಪ್ರಾರಭಕ್ಕಿಂತ ೧ ಗಂಟೆ ಮೊದಲೆ ಏಜೆಂಟ್‌ಗಳು ಹಾಜರಿರಬೇಕು. ಕನಿಷ್ಠ ೧ ವಾರ ಮೊದಲು ಮತ ಎಣಿಕೆ ಸ್ಥಳ ಮತ್ತು ಸಮಯವನ್ನು ವಿಮೇದುವಾರ ಹಾಗೂ ಏಜಂಟ್‌ಗಳಿಗೆ ತಿಳಿಸಬೇಕು.
ಏಜೆಂಟ್‌ಗಳು ಬ್ಯಾಡ್ಜ್ ಕಡ್ಡಾಯ ಬ್ಯಾಡ್ಜ್ ಇಲ್ಲದೆ ಏಜೆಂಟರಿಗೆ ಮತ ಏಣಿಕೆ ಕೇಂದ್ರಕ್ಕೆ ಪ್ರವೇಶ ನೀಡಬಾರದೆಂದರು.
ಅಧಿಕಾರಿಗಳು ಶಿಸ್ತು, ಸುವ್ಯವಸ್ಥೆ ಮತ್ತು ಶಾಂತತೆಯನ್ನು ಕಾಪಾಡಬೇಕು. ಮೊಬೆಲ್ ಪೋನ್ ಮತ ಕೇಂದ್ರದೊಳಗೆ ಪ್ರವೇಶ ನೀಡಬಾರದು. ಏಜೆಂಟ್‌ರು ವಿದ್ಯುನ್ಮಾನ ಮತಯಂತ್ರಗಳನ್ನು ಮುಟ್ಟಬಾರದು ಚುನಾವಣೆ ಅಧಿಕಾರಿಗಳ ನಿರ್ದೇಶನ ಹಾಗೂ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಪ್ರತಿ ಮೇಜಿಗೆ ಒಬ್ಬ ಮೇಲ್ವಾಚಕರು ಒಬ್ಬ ಸಹಾಯಕ ಹಾಗೂ ಮೈಕ್ರೋ ಅಬ್ಜರವರ್ ಇರುತ್ತಾರೆ. ಮತ ಏಣಿಕೆ ಏಜೆಂಟ್‌ರುಗಳ ಮತ್ತು ಮತ ಎಣಿಕೆ ಸಿಬ್ಬಂದಿಯವರ ಮಧ್ಯೆ ಬ್ಯಾರಿಕೇಡಿಂಗ್ ವ್ಯವಸ್ಥೆ ಮಾಡಬೇಕು.
ಮತ ಎಣಿಕೆ ಏಜೆಂಟ್‌ರುಗಳು ವಿವಿಎಂನ್ನು ಮುಟ್ಟುವುದಾಗಲಿ ಅಥವಾ ಅಕ್ರಮವಾಗಿ ಒಪ್ಪುವುದಕ್ಕಾಗಿ ಅವಕಾಶ ನೀಡದಂತೆ ಇರಬೇಕು. ಮತ ಎಣಿಕೆ ಮೇಜುಗಳ ಮೇಲೆ ಕ್ಷೇತ್ರದ ಹೆಸರು ಹಾಗೂ ಸಂಖ್ಯೆ ಹಾಗೂ ರೌಂಡ್ ವೈಸ್ ಎದ್ದು ಕಾಣುವಂತೆ ಚುನಾವಣೆ ವೀಕ್ಷಕರಿಗೆ ಪ್ರತ್ಯೇಕ ಕೋಣೆಯನ್ನು ವ್ಯವಸ್ಥೆ ಮಾಡಬೇಕು. ಆ ಕೋಣೆಯಲ್ಲಿ ದೂರವಾಣಿ ಫ್ಯಾಕ್ಸ್ ಹೊಂದಿರಬೇಕು.
ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಕೊಣೆಯನ್ನು ವ್ಯವಸ್ಥೆ ಮಾಡಬೇಕು. ಅಂಚೆ ಮತಪತ್ರಗಳನ್ನು ಚುನಾವಣಾಧಿಕಾರಿಗಳ ಹಂತದಲ್ಲಿ ಮತ ಎಣಿಸಬೇಕು. ಅವುಗಳನ್ನು ಏಜೆಂಟ್‌ರ ಎದುರಲ್ಲಿ ತೆರೆಯಬೇಕೆಂದರು. ಮೇಜಿಗೆ ಪೂರೈಸುವ ಮತಗಟ್ಟೆ ಸಂಖ್ಯೆ ಮತ ಯಂತ್ರಗಳನ್ನು ವಿಳಾಸ ಚೀಟಿಗಳನ್ನು ಅಧಿಕಾರಿಗಳು ಗಮನಿಸಬೇಕು ಮತಯಂತ್ರಗಳು ವಹಿಸಲಾದ ಮತಗಟ್ಟೆ ಹೆಸರು ಮತ ಕ್ಷೇತ್ರ ಇತ್ಯಾದಿಗಳನ್ನು ಖಾತ್ರಿ ಪಡಿಸಿಕೊಳ್ಳಬೇಕೆಂದರು.