ಮಸ್ಕಿ ಉಪಚುನಾವಣೆ:ಬಹಿರಂಗವಾಗಿ ಹಣ ಹಂಚಿಕೆ

*ಬಿಜೆಪಿ ಅಭ್ಯರ್ಥಿಯನ್ನು ಅನರ್ಹ ಗೊಳಿಸಲು ರಾಝಾಕ್ ಒತ್ತಾಯ
ರಾಯಚೂರು. ಏ.೧೦.ಮಸ್ಕಿ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದವರು ಮತದಾರರಿಗೆ ಆಮೀಶ ಒಡ್ಡಿ ಹಣ ಹಂಚುತ್ತಿರುವ ಪ್ರಕರಣದಲ್ಲಿ ಸಹಾಯಕ ಆಯುಕ್ತ,ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಶಾಮೀಲಾಗಿದ್ದು ಕೊಡಲೇ ಇವರನ್ನು ವರ್ಗಾವಣೆ ಮಾಡಿ ಬಿಜೆಪಿ ಅಭ್ಯರ್ಥಿಯನ್ನು ಚುನಾವಣಾ ಕಣದಿಂದ ಅನರ್ಹ ಗೊಳಿಸಬೇಕು ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ರಾಝಾಕ್ ಉಸ್ತಾದ್ ಅವರು ಆಗ್ರಹಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ರಾಜ್ಯದಲ್ಲಿ ಎರಡು ವಿಧಾನಸಭೆ ಮತ್ತು ಒಂದು ಲೋಕಸಭೆ ಚುನಾವಣೆ ನಾಡಿಯುತ್ತಿದ್ದು ಮಸ್ಕಿ ವಿಧಾನಸಭೆಯ ಚುನಾವಣೆಯನ್ನು ಪ್ರತಿಷ್ಟೆಯಾಗಿ ಪರಿಗಣಿಸಿದ ಬಿಜೆಪಿ ಪಕ್ಷವು ಚುನಾವಣೆಯಲ್ಲಿ ಗೆಲವು ಸಾಧಿಸಲು ಅಕ್ರಮ ಮಾರ್ಗವನ್ನು ಅನುಸರಿಸಿ ಚುನಾವಣಾ ಇತಿಹಾಸದ ಎಲ್ಲ ಮಜಲುಗಳನ್ನು ಮೀರಿ ವ್ಯಾಪಕವಾಗಿ ಭ್ರಷ್ಟಾಚಾರವೆಸುಗುತ್ತಿದ್ದರೆ.
ದಿನನಿತ್ಯ ಹಗಲು ಹೊತ್ತಿನಲ್ಲಿ ಗುಂಪಾಗಿ ಹತ್ತು ಹಲವು ಗ್ರಾಮಗಳಲ್ಲಿ ವಿಶೇಷವಾಗಿ ಮಹಿಳೆಯರಿಗೆ ಹಣ ಹಂಚುವ ಪ್ರಕ್ರಿಯೆ ನಡೆಯುತ್ತಿದ್ದು ಇದು ವೈಷಮ್ಯಕ್ಕೆ ದಾರಿ ಮಾಡಿ ಕೊಟ್ಟಿದೆ ಇದಕೆಲ್ಲ ಅಲ್ಲಿನ ಸಹಾಯಕ ಆಯುಕ್ತ ರಾಜಶೇಖರ ಡಂಬಳ್,ತಸೀಲ್ದಾರ್, ಮತ್ತು ಪೊಲೀಸ್ ಇಲಾಖೆ ಶಮಿಲಾಗಿದ್ದರೆ,ಮಸ್ಕಿ ವಿಧಾನ ಸಭೆ ಕ್ಷೇತ್ರದಲ್ಲಿ ಸುಮಾರು ೩೩ ಗ್ರಾಮ ಪಂಚಾಯಿತಿಗಳು ಒಳಪಡುತ್ತಿದ್ದು ಪ್ರತಿ ಗ್ರಾ.ಪಂ.ಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಒಂದು ಗ್ರಾ. ಪಂ. ಒಬ್ಬ ಸಬ್ ಇನ್ಸ್ಪೆಕ್ಟರ್ ರನ್ನು ನೇಮಕ ಮಾಡಬೇಕು ಅವಾಗ ಮಾತ್ರ ಪಾರದರ್ಶಕ ಚುನಾವಣೆ ನಡೆಸಲು ಸಾಧ್ಯವಾಗುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ಕಂಡು ಬರುವ ಮಹಿಳಾ ಮತದಾರರಿಗೆ ಬಹಿರಂಗವಾಗಿ ಹಣ ಹಂಚುವ ದೃಶ್ಯಗಳನ್ನು ಚುನಾವಣಾ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮಕ್ಕೆ ಮುಂದಾಗಬೇಕು ಹಾಗೂ ಮತದಾರಿರಿಗೆ ಅಮೀಶ ಒಡ್ಡಿ ಹಣ ಹಂಚುತ್ತಿರುವ ಹಲವು ಪ್ರಕರಣಗಳ ಕಂಡುಬಂದಿರುವ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಚುನಾವಣಾ ಕಡದಿಂದ ಅನಾರ್ಹಗೊಳಿಸಿ ಅಲ್ಲಿನ ಸಹಾಯಕ ಆಯುಕ್ತ,ತಹಸೀಲ್ದಾರ್ ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಿವಕುಮಾರ ಯಾದವ್,ಮೊಹಮ್ಮದ್ ರಫಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.