ಮಸ್ಕಿ:ಶಾಸಕ ಬಸನಗೌಡ ತುರ್ವಿಹಾಳ ಪ್ರಮಾಣ ವಚನ ಸ್ವೀಕಾರ

ಲಿಂಗಸೂಗೂರು.ಜೂ.೦೮-ಡಿ. ಎಸ್. ಹೂಲಗೇರಿ ಮಾನ್ಯ ಶಾಸಕರು ಲಿಂಗಸುಗೂರು ವಿಧಾನಸಭಾ ಕ್ಷೇತ್ರ ಇವರು ಇಂದು ಬೆಂಗಳೂರಿನ ವಿಧಾನಸೌಧದ ಕಾನ್ಫರೆನ್ಸ್ ಹಾಲ ನಲ್ಲಿ ಜರುಗಿದ ಮಸ್ಕಿ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಬಸನಗೌಡ. ಆರ್. ತುರವಿಹಾಳ ಇವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಎನ್. ಎಸ್. ಬೋಸರಾಜು ರವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರು , ಬಿ.ವಿ. ನಾಯಕ ರವರು ಮಾಜಿ ಲೋಕಸಭಾ ಸದಸ್ಯರು ರಾಯಚೂರು, ಬಸನಗೌಡ ದದ್ದಲ್ ಶಾಸಕರು ರಾಯಚೂರು ಗ್ರಾಮೀಣ, ಹಂಪನಗೌಡ ಬಾದರ್ಲಿ ರವರು ಮಾಜಿ ಶಾಸಕರು ಸಿಂಧನೂರು, ಅಮರೇಗೌಡ ಪಾಟೀಲ ಬಯ್ಯಾಪುರ ರವರು ಶಾಸಕರು ಕುಷ್ಟಗಿ ವಿಧಾನಸಭಾ ಕ್ಷೇತ್ರ, ಶರಣಪ್ಪ ಮಟ್ಟೂರು ಮಾಜಿ ವಿಧಾನ ಪರಿಷತ್ ಸದಸ್ಯರು, ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ್, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ಬಸನಗೌಡ ಬಾದರ್ಲಿ, ಕಾಂಗ್ರೆಸ್ ಮುಖಂಡರಾದ ಕರಿಯಪ್ಪ ಸಿಂಧನೂರ, ಹಾಗೂ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.