ಮಸ್ಕಿಯಲ್ಲಿ ಮದ್ಯ ಮಾರಾಟ ಬಲು ಜೋರು

ಮಸ್ಕಿ.ಏ.೨೯-ಕೋವಿಡ್ ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಯಲು ಸರಕಾರ ೧೪ ದಿನಗಳ ಕರ್ಫ್ಯೂ ಜಾರಿ ಗೊಳಿಸಿ ಬೆಳಗ್ಗೆ ೬ ರಿಂದ ೧೦ ಗಂಟೆ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿದೆ. ಪಟ್ಟಣದ ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಸಲು ಮನೆ ಗಳಿಂದ ಮಾರು ಕಟ್ಟೆಗೆ ಬಂದಿದ್ದರು.
ಇದಕ್ಕೆ ತದ್ವಿರುದ್ದವಾಗಿ ಮದ್ಯ ಪ್ರಿಯರು ತಮಗೆ ಅಗತ್ಯವಾದ ಮದ್ಯ ಖರೀದಿಸಲು ,ಬ್ರ್ಯಾಂಡಿ ಶಾಫ್,ಬಾರ್ ಗಳ ಮುಂದೆ ಬೆಳಗ್ಗೆ ಯಿಂದ ನೆರೆದಿದ್ದರು ತಮಗೆ ಪ್ರಿಯ ಬ್ರ್ಯಾಂಡ್ ಖರೀದಿಸಿ ಜೋಪಾನವಾಗಿ ಮನೆಗೆ ಕೊಂಡೂಯ್ಯುತ್ತಿರುವ ದೃಶ್ಯಗಳು ವಿನು ಬಾರ್ ಬಳಿ ಬೆಳಗ್ಗೆ ಕಂಡು ಬಂದವು. ಟೈಟ್ ಕರ್ಫ್ಯೂ ನಡುವೆ ದಿನ ಕಳೆದು ರಾತ್ರಿ ಹೊತ್ತು ಎಣ್ಣೆ ಹೊಡೆದು ಟೈಟ್ ಆಗುವ ಗಿರಾಕಿಗಳು ಮದ್ಯದ ಬಾಟಲ್‌ಗಳನ್ನು ಪಾರ್ಸೆಲ್ ತೆಗೆದು ಕೊಂಡು ಹೋಗುತ್ತಿರುವ ದೃಶ್ಯಗಳು ಪಟ್ಟಣದ ನಾನಾ ಬಾರ್, ಬ್ರ್ಯಾಂಡಿ ಶಾಫ್‌ಗಳ ಮುಂದೆ ಕಂಡು ಬಂದವು. ಕೊರೋನಾ ಕಾಟ ಹಿನ್ನೆಲೆಯಲ್ಲಿ ಗುಟ್ಕಾ, ತಂಬಾಕು ಬೆಲೆ ಹೆಚ್ಚಿಗೆ ಯಾಗುವ ಭಯ ದಲ್ಲಿ ಗುಟ್ಕಾ ಪ್ರಿಯರು ಡಜನ್ ಗಟ್ಟಲೆ ಗುಟ್ಕಾ ಚೀಟಿ ಖರೀದಿಸುತ್ತಿದ್ದಾರೆ. ಈ ಮೊದಲು ಬ್ರ್ಯಾಂಡಿ ಶಾಫ್‌ಗಳು ಬೆಳಗ್ಗೆ ೮ ಗಂಟೆ ನಂತರ ಓಪನ್ ಆಗುತ್ತಿದ್ದವು ಬೆಳಗ್ಗೆ ಎಣ್ಣೆ ಹಾಕುವ ಮದ್ಯ ವ್ಯಸನಿಗಳು ಮದ್ಯಕ್ಕಾಗಿ ಅಲೆದಾಡುತ್ತಿದ್ದರು ಕರ್ಫ್ಯೂ ಹಿನ್ನೆಲೆಯಲ್ಲಿ ಬ್ರ್ಯಾಂಡಿ ಶಾಫ್‌ಗಳು ಬೆಳಗ್ಗೆ ೬ ಗಂಟೆಗೆ ಓಪನ್ ಆಗುತ್ತಿರುವ ಕಾರಣ ಬೆಳಗ್ಗೆ ಎದ್ದು ೬೦/೯೦ ಎಣ್ಣೆ ಹಾಕುವ ಮದ್ಯ ವ್ಯಸನಿ ಗಳು ಖುಷ್ ಆಗಿದ್ದಾರೆ.