ಮಸ್ಕಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ – ನಾಯಕ

ಸಿಂಧನೂರು.ನ.22- ಮಸ್ಕಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸನಗೌಡ ತುರವಿಹಾಳ ಗೆಲುವು ಸಾಧಿಸಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಎಸ್.ಟಿ ಘಟಕದ ರಾಜ್ಯ ಅಧ್ಯಕ್ಷರಾದ ಪಾಲಯ್ಯ ನಾಯಕ ಹೇಳಿದರು.
ನಗರದಲ್ಲಿ ಕರೆದ‌ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಮಸ್ಕಿ ಚುನಾವಣೆಯನ್ನು ಸವಾಲಾಗಿ ತೆಗೆದುಕೊಂಡು ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಮಸ್ಕಿಯಲ್ಲಿ ಕಾಂಗ್ರೆಸ್ ಪಕ್ಷದ ಬಾವುಟ ಹಾರಿಸಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಪಾಟೀಲನ್ನು ಸೋಲಿಸಿ ಮನೆಗೆ ಹೋಗಲಿದ್ದಾರೆ ಎಂದು ಆತ್ಮವಿಶ್ವಾಸ ವ್ಯಕ್ತ ಪಡಿಸಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಎಸ್.ಸಿ ,ಎಸ್.ಟಿ ,ಒಬಿಸಿ ಜನರಿಗೆ ಸಾಕಷ್ಟು ಅನುದಾನ ನೀಡಿ ಅಭಿವೃದ್ಧಿ ಪಡಿಸಿದ್ದು ಈಗಿನ ಬಿಜೆಪಿ ಸರ್ಕಾರ ಕಾಂಗ್ರೆಸ್ ಪಕ್ಷದ ಸರ್ಕಾರ ನೀಡಿದ ಅನುದಾನವನ್ನು ಖಡಿತ ಮಾಡಿ ಜನರಿಗೆ ಅನ್ಯಾಯ ಮಾಡಿದೆ ಇದರಿಂದ ಬಿಜೆಪಿ ಪಕ್ಷದ‌ ಬಗ್ಗೆ ಈ ಸಮುದಾಯದ ಜನ ಬೇಸರ ಗೊಂಡು ಮಸ್ಕಿ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಸರಿಯಾದ ಪಾಠ ಕಲಿಸಲಿದ್ದಾರೆಂದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ ಅಧಿಕಾರದ ಅವಧಿಯಲ್ಲಿ ಸರ್ಕಾರಿ ಗೋಮಾಳಿ ಹಾಗೂ ಅರಣ್ಯ ಪ್ರದೇಶದಲ್ಲಿ ಸುಮಾರು ‌ವರ್ಷಗಳಿಂದ ಉಳುಮೆ ಮಾಡಿ ಜೀವನ‌ ಸಾಗಿಸುತ್ತಿದ್ದ ಬುಡಕಟ್ಟು ,ಎಸ್.ಸಿ, ಎಸ್.ಟಿ‌, ಒಬಿಸಿ, ಜನರಿಗೆ ಭೂಮಿ‌ ಪಟ್ಟಾ ಮಾಡಿದ್ದರಿಂದ ಜನರು‌ ಭೂಮಿ ಉಳುಮೆ ಮಾಡುತ್ತಾ ಸುಖ ಜೀವನ ನಡೆಸುತ್ತಾ ಕಾಂಗ್ರೆಸ್ ಪಕ್ಷವನ್ನು ಇಂದಿಗೂ‌ ಸಹ ಸ್ಮರಿಸುತ್ತಿದ್ದಾರೆ.
ಮಸ್ಕಿ ಯಲ್ಲಿ ಈ ಹಿಂದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗೆದ್ದ ಪ್ರತಾಪ್ ಪಾಟೀಲ ಸಾಕಷ್ಟು ಅಧಿಕಾರ ಅನುಭವಿಸಿ ಮತದಾರರಿಗೆ ಮೋಸ ಮಾಡಿ‌,ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಎಸಗಿ‌ ಮಂತ್ರಿ ಪದವಿ ಆಸೆ ಗಾಗಿ ಬಿಜೆಪಿ ಪಕ್ಷಕ್ಕೆ ಸೇರಿ ಈಗ ಮಸ್ಕಿ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲುವ ಮಾಜಿ‌ ಶಾಸಕ ಪ್ರತಾಪ್ ಪಾಟೀಲ್ ರಿಗೆ ‌ಮಸ್ಕಿ ಕ್ಷೇತ್ರದ ಪ್ರಜ್ಙಾವಂತ ಮತದಾರರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಬಸನಗೌಡ ತುರವಿಹಾಳ ನ್ನು ಗೆಲ್ಲಿಸಿ‌ ಪ್ರತಾಪ ‌ಪಾಟೀಲರನ್ನು ಸೋಲಿಸುವ ಮೂಲಕ ಅವರನ್ನು ಮನೆಗೆ ಕಳುಹಿಸಲಿದ್ದಾರೆ ಎಂದ ಅವರು ಮಸ್ಕಿ‌ ಉಪ ಚುನಾವಣೆಯಲ್ಲಿ ‌ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಪಕ್ಷದ ಎಸ್.ಟಿ ಘಟಕದ ಕಾರ್ಯಕರ್ತರ ಸಭೆಯನ್ನು ‌ಮಸ್ಕಿಯಲ್ಲಿ‌ ಕರೆದು ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಹಗಲಿರುಳು ಶ್ರಮಿಸುವಂತೆ ಕಾರ್ಯಕರ್ತರ ಲ್ಲಿ‌ ಹುಮ್ಮಸ್ಸು ಮೂಡಿಸಲಾಗುತ್ತದೆಂದು ಕಾಂಗ್ರೆಸ್ ಪಕ್ಷದ ಎಸ್.ಟಿ‌ ಘಟಕದ ರಾಜ್ಯ ಅದ್ಯಕ್ಷ ರಾದ ಪಾಲಯ್ಯ ನಾಯಕ‌ ತಿಳಿಸಿದರು.
ಪ ಪಂ ಕ್ಕೆ 7.5 ಮಿಸಲಾತಿ ನೀಡುವಂತೆ ಹಿಂದಿನ ಸಮ್ಮಿಶ್ರ ಸರ್ಕಾರಕ್ಕೆ ಬಿಜೆಪಿ ಪಕ್ಷದ ಮುಖಂಡರುಗಳು‌ ಗಡವು ನೀಡಿದ್ದು ಸಮ್ಮಿಶ್ರ ಸರ್ಕಾರ‌ ಮಿಸಲಾತಿ ಹೆಚ್ಚಳ ಕ್ಕಾಗಿ ಪ್ರಯತ್ನ ಪಡುತ್ತಿರುವಾಗಲೆ ಸರ್ಕಾರ ಬಿದ್ದು ಹೋಯಿತು ಎಂದ ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆ ಒಳಗೆ 7.5 ಮಿಸಲಾತಿ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದ್ದ ಬಿಜೆಪಿ ಪಕ್ಷ ಹಾಗೂ ಮಂತ್ರಿ ಶ್ರೀರಾಮುಲು ,ಶಾಸಕ ರಾಜುಗೌಡ ಸೇರಿದಂತೆ ಯಾವೊಬ್ಬ ನಾಯಕರು 7.5 ಮಿಸಲಾತಿ ಬಗ್ಗೆ ಧ್ವನಿ ಎತ್ತದಿರುವದರಿಂದ ಬಿಜೆಪಿ ಪಕ್ಷ ಪ.ಜಾ ಜನರಿಗೆ ಮೋಸ ಮಾಡಿದೆ ಹಾಗಾಗಿ ಮಸ್ಕಿ ಉಪ ಚುನಾವಣೆಯಲ್ಲಿ ಪ.ಪಂ‌ ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲಿದ್ದಾರೆಂದರು.ಡಿ ಕೆ ಶಿವು ಕುಮಾರ ಪಕ್ಷದ ರಾಜ್ಯ ಅದ್ಯಕ್ಷರಾದ ಮೇಲೆ‌ ಹಿರಿಯರು ಮತ್ತು ಯುವಕರನ್ನು ಜೊತೆ ಜೊತೆಯಲ್ಲಿ ಕರೆದುಕೊಂಡು ‌ಪಕ್ಷ ಸಂಘಟಿಸುತ್ತಿದ್ದಾರೆ.ಮಸ್ಕಿ ಉಪ ಚುನಾವಣೆಯನ್ನು ಯುವ ಕಾಂಗ್ರೆಸ್ ರಾಜ್ಯ ಅದ್ಯಕ್ಷರಾದ ಬಸನಗೌಡ ಬಾದರ್ಲಿ ಹಾಗೂ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ .ಕರಿಯಪ್ಪ ಚುನಾವಣೆಯನ್ನು ಸವಲಾಗಿ ಸ್ವಿಕರಿಸಿ ಪ್ರತಾಪ್ ಪಾಟೀಲ ರಿಗೆ ಚುನಾವಣೆಯಲ್ಲಿ ಮಸ್ಕಿ ಮಣ್ಣು ಮುಕ್ಕಿಸಲು‌ ಹೋರಾಡುತ್ತಿದ್ದು ಮಾಜಿ ಶಾಸಕರಾದ ಕೆ.ವಿರುಪಾಕ್ಷಪ್ಪ ,ಹಂಪನಗೌಡ ಬಾದರ್ಲಿ‌ ಚುನಾವಣೆಯಲ್ಲಿ ಹೆಚ್ಚು ಆಸಕ್ತಿ ತೋರಿಸದೆ ಇರುವದು ನೋಡಿದರೆ ಪ್ರತಾಪ್ ಪಾಟೀಲರ ಬಗ್ಗೆ ಒಲವು ಇದ್ದಂತೆ ಕಾಣುತ್ತದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪಾಲಯ್ಯ ನಾಯಕ‌ ನೀವು ಹೇಳುವ ಬಗ್ಗೆ ನನಗೇನು ಗೊತ್ತಿಲ್ಲ ಇದರ ಬಗ್ಗೆ ‌ಚರ್ಚಿಸಿ ರಾಜ್ಯ ಮಟ್ಟದ ನಾಯಕರ ಗಮನಕ್ಕೆ ತಂದು ಎಲ್ಲರೂ ಒಗ್ಗಟ್ಟಾಗಿ ಭಿನ್ನಮತ ಮಾಡದೆ ಪಕ್ಷದ ಅಭ್ಯರ್ಥಿ ಗೆಲುಸುತ್ತೆವೆ ಎಂದರು.
ಪಕ್ಷದ ಎಸ್.ಟಿ ಘಟಕದ ರಾಜ್ಯ ಕಾರ್ಯದರ್ಶಿಯಾದ ಎಂ .ಜಯಪ್ಪ ನಾಯಕ, ಜಿಲ್ಲಾದ್ಯಕ್ಷರಾದ ನರಸಿಂಹ ನಾಯಕ, ಉಪಾಧ್ಯಕ್ಷರಾದ ವೆಂಕಟೇಶ ನಾಯಕ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ,ಮಸ್ಕಿ ಎಸ್.ಟಿ ಘಟಕದ ಅದ್ಯಕ್ಷರಾದ ಶೇಖರಪ್ಪ ‌ಜಾಲಿ‌,‌ಸಿಂಧನೂರು ಎಸ್.ಟಿ ಘಟಕದ ಅದ್ಯಕ್ಷರಾದ ನಾಗರಾಜ ನಾಯಕ ,ನಗರ ಕಾಂಗ್ರೆಸ್ ಘಟಕದ ಅದ್ಯಕ್ಷರಾದ ಖಾಜಿ ಮಲ್ಲಿಖ್ ,ಕಾರ್ಯದರ್ಶಿ ಅನೀಲ ,ಮುಖಂಡರಾದ ಶ್ರೀನಿವಾಸ ನಾಯಕ ,ರಮೇಶ ನಾಯಕ ವಕೀಲರು,ಅರುಣ ಕುಮಾರ ನಾಯಕ ,ಆದಪ್ಪ ದಿದ್ದಗಿ, ಸೇರಿದಂತೆ ಇತರರು ಪತ್ರಿಕಾಗೊಷ್ಟಿಯಲ್ಲಿ ಉಪಸ್ಥಿತರಿದ್ದರು.