ಮಸ್ಕಿ:ಕಾಂಗ್ರೆಸ್ ಅಭ್ಯರ್ಥಿ ಕೈ ಹಿಡಿದ ಮತದಾರ ರೆಲ್ಲರಿಗೂ ಧನ್ಯವಾದಗಳು

ಸಿರವಾರ.ಮೇ.೪-ಜಿಲ್ಲೆಯ ಮಸ್ಕಿ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿಯಾದ ಬಸವನಗೌಡ ತುರ್ವಿಹಾಳ ಗೆಲುವಗೆ ಶ್ರಮಿಸಿದ ಮತದಾರರಿಗೆ ಅದರಲೂ ಅತಿ ಹೆಚ್ಚು ಮಹಿಳಾ ಮತದಾರರು ಇದ್ದಾರೆ.
ಮಹಿಳಾ ಕಾಂಗ್ರೆಸ್ ವತಿಯಿಂದ ನಡೆಸಿದ ಪ್ರಚಾರ ನಮ್ಮನ್ನು ಕೈ ಹಿಡಿದಿದೆ ಎಂದು ಕವಿತಾಳ ತಾ.ಪಂ ಮಾಜಿ ಸದಸ್ಯೆ ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಮಂಜುಳಾ ಅಮರೇಶ್ ಅವರು ಹೇಳಿದರು. ಸಂಜೆವಾಣಿಗೆ ದೂರವಾಣಿಯಲ್ಲಿ ಮತನಾಡಿ ಮಸ್ಕಿ ಉಪಚುನಾವಣೆಯಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ಹದಿನೈದು ದಿನ ಪ್ರಚಾರ ಮಾಡಲಾಗಿತ್ತು.
ನಾವೆಲ್ಲರೂ ತಾಯಂದಿರು, ಅಣ್ಣ ತಮ್ಮಂದಿರು, ಹಿರಿಯರು ಎಲ್ಲರಲ್ಲೂ ಕೈ ಜೋಡಿಸಿ ಕೇಳಿಕೊಂಡೆವು. ಬಿಜೆಪಿ ಸರ್ಕಾರದ ಬೆಲೆ ಏರಿಕೆ ವಿರುದ್ಧ ಮಹಿಳೆಯರಲ್ಲಿ ಜಾಗ್ರತಿ ಮೂಡಿಸಿದ್ದೇವೆ ಇಡೀ ಬಿಜೆಪಿ ಸರ್ಕಾರವೇ ಮಸ್ಕಿಯಲ್ಲಿ ಬೀಡು ಬಿಟ್ಟಿದ್ದರು ಆದರೆ ನಮ್ಮ ಸ್ವಾಭಿಮಾನಿ ಮತದಾರರು ಇವತ್ತು ಹಾಗೂ ಮಸ್ಕಿ ಕಾಂಗ್ರೆಸ್ ಮಹಿಳೆಯರು ಸ್ವಾಭಿಮಾನದಿಂದ ಅರ್.ಬಸನಗೌಡ ಅವರು ೩೦೦೦೦ ಅತ್ಯಾಧಿಕ ಮತಗಳ ಅಂತರದಿಂದ ಗೆಲ್ಲಿಸಿ ರೈತರ ಮಗನನ್ನೂ ವಿಧಾನ ಸೌಧ ಮೆಟ್ಟಿಲು ಹತ್ತಿಸಿದ್ದಾರೆ.
ಇದು ರಾಜ್ಯದಲ್ಲಿ ಮುಂದಿನ ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಗದ್ದುಗೆ ಹಿಡಿಯುವದರಲಿ ಸಂದೇಹ ಇರುವುದಿಲ್ಲ ಎಂದು ನಮ್ಮ ಮಸ್ಕಿ ಮತದಾರ ದೇವರು ಗಳು ತೋರಿಸಿ ಕೊಟ್ಟಿದ್ದಾರೆ ಇಲ್ಲಿಂದ ರಾಜ್ಯದಲ್ಲಿ ಕಾಂಗ್ರೆಸ್ ಪರ್ವ ಆರಂಭವಾಗಿದೆ. ಕೇವಲ ಪುರುಷ ಮತದಾರ ರಲ್ಲದೆ ಮಹಿಳಾ ಮತದಾರರು ಕೂಡ ಜಾಗೃತ ರಾಗಿದ್ದಾರೆ ಮತ್ತು ಆಲೋಚನೆ, ಯೋಚನಾ ಶಕ್ತಿ ಕೂಡ ವೃದ್ಧಿ ಆಗಿರುತ್ತದೆ. ಉತ್ತಮರನ್ನು ಜಯದ ದವಡೆಗೆ ತರಬೇಕು ಎನ್ನುವ ಜಾಗೃತೆ ಬಂದಿದೆ ಎನ್ನುವದಕ್ಕೆ ಮಸ್ಕಿ ಕ್ಷೇತ್ರದ ಪಲಿತಾಂಶವೆ ಸಾಕ್ಷಿ.
ಸೋಲು ಅರಗಿಸಿಕೊಳಲಾಗದೆ ಕಾಂಗ್ರೇಸ್ ಕಾರ್ಯಕರ್ತರ ಮೇಲೆ ಬಿಜೆಪಿಯವರು ಮುಖ್ಯವಾಗಿ ಪ್ರತಾಪ್ ಗೌಡ ಕಡೆಯವರು ಹಲ್ಲೆ ಮಾಡುವ ಮೂಲಕ ಕ್ಷೇತ್ರವನ್ನು ಬಿಹಾರ ಮಾಡಲು ಹೊರಟಿದ್ದಾರೆಂದು ಆರೋಪಿಸಿ, ಹಲ್ಲೆ ಮಾಡಿದವರ ಮೇಲೆ ಸೂಕ್ತ ಕ್ರಮಕೈಗೊಳಬೇಕು ಎಂದು ಒತ್ತಾಯಿಸಿದರು.