ಮಸೀ ಮೌದ್ ದಿನಾಚರಣೆ: ಹಾಲು, ಹಣ್ಣು ಹಂಪಲು ವಿತರಣೆ

ಯಾದಗಿರ, ಮಾ. 24- ರೋಗಿಗಳಿಗೆ ಆತ್ಮಸ್ಥೈರ್ಯವನ್ನು ತುಂಬುವುದು ಮತ್ತು ಪ್ರೀತಿಯಿಂದ ಮಾತನಾಡಿಸುವುದು ಕೂಡ ದೇವರ ಸೇವೆಯಾಗಿದೆ ಎಂದು ಅಹ್ಮದಿಯಾ ಮುಸ್ಲಿಮ್ ಮಿಷನರಿ ಸಮೀರ್ ಅಹ್ಮದ್ ಅವರು ಹೇಳಿದರು.
ಅಹ್ಮದಿಯಾ ಮುಸ್ಲಿಮ್ ಸಮಾಜದ ಸಂಸ್ಥಾಪಕ ಹಜರತ್ ಮಸೀ ಮೌದ್ ದಿನಾಚರಣೆಯ ಪ್ರಯುಕ್ತ ಅನ್ಸಾರುಲ್ಲಾ ವಿಭಾಗದಿಂದ ನಗರದ ಜಿಲ್ಲಾ ಸಕಾ9ರಿ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ಮತ್ತು ಹಾಲು ಬ್ರೇಡ್ ವಿತರಿಸಿ ಅವರು ಮಾತನಾಡುವದರು.
ಝಯೀಮ್ ಅನ್ಸಾರುಲ್ಲಾ ಜಾವೇದ್ ನದೀಮ ಮಾತನಾಡಿ, ನ್ಯಾಯ ತೀಮಾ9ನದ ದಿನದಂದು ಆ ದೇವನು ನಮ್ಮನ್ನು ಪ್ರಶ್ನಿಸುವನು ರೋಗಿಯಾಗಿದ್ದ ತನ್ನನ್ನು ಸಂದಿಸಿಲ್ಲ, ಹಸಿದಿದ್ದಾಗ ಊಟ ಬಡಿಸಲಿಲ್ಲವೇಕೆ? ಎಂಬ ಪ್ರಶ್ನೆಗಳಿಗೆ ಉತ್ತರಿಸುವುದು ನಮ್ಮ ಸತ್ಕಾರ್ಯಗಳಿಂದ ಮಾತ್ರ ಎಂದು ಅವರು ವಿವರಿಸಿದರು.
ಅಲ್ಲಾಹನು ತನ್ನ ಅನುಗ್ರಹದ ಮೂಲಕ ಇಲ್ಲಿನ ಎಲ್ಲರೋಗಿಗಳನ್ನು ಗುಣಪಡಿಸುವಂತೆ ಸಮೊಹಿಕವಾಗಿ ಪ್ರಾಥಿ9ಸಲಾಯಿತು.
ಈ ಸಂದರ್ಭದಲ್ಲಿ ಜಮಾತ್ ಅಹ್ಮದಿಯಾ ಸಮಾಜದ ಜಿಲ್ಲಾ ಉಪಾಧ್ಯಕ್ಷ ನಯೀಮ್ ಅಹ್ಮದ ಸಗರಿ, ಫರೀದ್ ಅಹ್ಮದ್ ಗುಲಬಗಿ9, ಕಲೀಮ್ ಅಹ್ಮದ್ ಸಗರಿ, ಶಾಕಿರ್ ಅಹ್ಮದ್ ಶಕ್ನಾ, ಜಾಫರ್ ಅಹ್ಮದ್ ಗುಲಬಗಿ9, ಖಾಲಿದ್ ಅಹ್ಮದ್ ಶಖನಾ, ಫಯೀಮ್ ಸದರಿ, ಇಫಾ9ನ್ ಅಹ್ಮದ್ ಗುಲಬಗಿ9, ಹಾದಿ ಅಹ್ಮದ್, ವಸೀಮ್, ತಾರಿಕೆರ್ ಅಹ್ಮದ್ ಅಳ್ಳೊಳ್ಳಿ, ತಯ್ಯಬ ಅಹ್ಮದ್ ಅಳ್ಳೊಳ್ಳಿ, ಬಿಲಾಲ್ ಅಹ್ಮದ್ ತಿರಗರ್ ಸೇರಿದಂತೆ ಹಲವರು ಭಾಗ ವಹಿಸಿದ್ದರು.