ಮಸೀದಿಯ ಬಾಗಿಲು ಮುರಿದು ಪ್ರಾರ್ಥನೆ: ಐವರ ವಿರುದ್ಧ ಕೇಸ್‌

ಕಾಪು, ಸೆ.೧೬- ಮಸೀದಿವೊಂದರ ಬಾಗಿಲು ಒಡೆದು ಪ್ರಾರ್ಥನೆ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಐವರ ವಿರುದ್ದ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳನ್ನು ರಶೀದ್, ಜಲೀಲ್, ಬಶೀರ್ ಜನಪ್ರೀಯ, ಬಶೀರ್‌‌‌‌, ಅಶ್ರಫ್‌‌ ಎನ್ನಲಾಗಿದೆ. ಜಾಮೀಯ ಮಸೀದಿಯಲ್ಲಿ ಕೊರೊನಾ ಪ್ರಾರಂಭವಾದ ದಿನದಿಂದ ಕಾಪುವಿನ ಉಳಿಯಾರಗೋಳಿಯ ಅಮೀರ್ ಹಂಝ (49) ಅವರು ಹಾಗೂ ಆಡಳಿತ ಮಂಡಳಿಯ ಇತರರು ಸರಕಾರ ಮತ್ತು ವಕ್ಷ್ ಬೋರ್ಡ್ ಕಮಿಟಿಯಿಂದ ನೀಡಲಾದ ಎಲ್ಲಾ ಸೂಚನೆಗಳನ್ನು ಸರಿಯಾಗಿ ಪಾಲಿಸಿಕೊಂಡು ಬರುತ್ತಿದ್ದು, ರಶೀದ್, ಜಲೀಲ್, ಬಶೀರ್ ಜನಪ್ರೀಯ, ಬಶೀರ್ ಹಾಗೂ ಅಶ್ರಫ್ ಅವರು ಪೊಲಿಪು ಜಾಮೀಯ ಮಸೀದಿ ಕಮಿಟಿಯವರು ಪಾಲನೆ ಮಾಡುತ್ತಿದ್ದ ಸರಕಾರ ಮತ್ತು ವಕ್ಷ್ ಬೋರ್ಡ್‌ನ ಸೂಚನೆಗಳಿಗೆ ಆಕ್ಷೇಪ ವ್ಯಕ್ತಪಡಿಸುತ್ತಾ ಬಂದಿದ್ದು, ಸೆ.11ರ ಶುಕ್ರವಾರದಂದು ಈ ಐವರು ಆರೋಪಿಗಳು ನಿಮ್ಮ ಕೊರೊನಾಗೆ ಸಂಬಂದಪಟ್ಟ ಸೂಚನೆಗಳನ್ನು ಇನ್ನು ಪಾಲಿಸಲು ಸಾಧ್ಯವಿಲ್ಲ ನಾವು ಅದಕ್ಕೆ ವಿರುದ್ದವಾಗಿ ನಮಾಜ್ ಮಾಡುತ್ತೇವೆ ತಾಕತ್ತಿದ್ದರೇ ನಿಲ್ಲಿಸಿ ಎಂದು ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೇ, ಸೆ.14ರ ಸೋಮವಾರದಂದು ಸಂಜೆಯ ವೇಳೆಗೆ ಆರೋಪಿಗಳು ಮಸೀದಿಗೆ ಬಳಿ ಇರುವ ದರ್ಗಾದ ಬಾಗಿಲಿನ ಬೀಗವನ್ನು ಮುರಿದು ಅಕ್ರಮವಾಗಿ ಬಳಗೆ ಹೋಗಿ ಕೊರೊನಾ ಸೂಚನೆಯನ್ನು ಪಾಲಿಸದೇ ಪ್ರಾರ್ಥನೆ ಮಾಡಿದ್ದು ಅಲ್ಲದೇ ದರ್ಗಾದ ಒಳಗೆ ಕೊರೊನಾ ಸೂಚನೆಯನ್ನು ಪಾಲಿಸದಂತೆ ಅಮೀರ್ ಹಂಝ ಅವರಿಗೆ ಹಾಗೂ ಪೊಲಿಪು ಜಾಮೀಯ ಮಸೀದಿ ಕಮಿಟಿಯವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಐವರು ಆರೋಪಿಗಳ ವಿರುದ್ದ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.