ಮಸೀದಿಯಲ್ಲಿ ಕರ್ಕಶ ಧ್ವನಿವರ್ಧಕ: ಸ್ಥಳೀಯರಿಂದ ಪೊಲೀಸರಿಗೆ ದೂರು

ಕಡಬ, ನ.೭- ಕುಟ್ರುಪಾಡಿ ಗ್ರಾಮದ ಕೇಪು ಅಮೈ ಎಂಬಲ್ಲಿರುವ ಮಸೀದಿಯಲ್ಲಿ ಕರ್ಕಶವಾಗಿ ಧ್ವನಿವರ್ಧಕ ಬಳಸಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಕಡಬ ಠಾಣೆಗೆ ದೂರು ನೀಡಿದ್ದಾರೆ. 

ಹಿಂದೂ ಜಾಗರಣೆ ವೇದಿಕೆಯ ಜಿಲ್ಲಾ ಮುಖಂಡ ರವಿರಾಜ್ ಶೆಟ್ಟಿಯವರ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ಮನವಿಯನ್ನು ಕಡಬ ಠಾಣಾ ಸಬ್‌ಇನ್ಸ್‌ಪೆಕ್ಟರ್ ರುಕ್ಮ ನಾಯ್ಕ್ ಅವರಿಗೆ ಸಲ್ಲಿಸಿದ್ದಾರೆ. ಮಸೀದಿಯಲ್ಲಿ ಕರ್ಕಶವಾಗಿ ಧ್ವನಿವರ್ಧಕ ಬಳಸಲಾಗುತ್ತಿದ್ದು ಇದರಿಂದ ಇಲ್ಲಿಯ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ, ಈ ಹಿನ್ನೆಲೆಯಲ್ಲಿ ಕೂಡಲೇ ಧ್ವನಿವರ್ಧಕವನ್ನು ತೆರವುಗೊಳಿಸಬೇಕೆಂದು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ ಸದಸ್ಯೆ ಪುಲಸ್ತ ರೈ, ಶಿವರಾಮ ಶೆಟ್ಟಿ ಕೇಪು, ಜಯಚಂದ್ರ ರೈ ಕುಂಟೋಡಿ, ಗಂಗಾಧರ ಗೌಡ ಹಳ್ಳಿ, ಪದ್ಮನಾಭ ರೈ, ಮಾಧವ ರೈ, ಶಿವಪ್ರಸಾದ್ ರೈ ಮೈಲೇರಿ, ಹರೀಶ್ ರೈ, ದೀಕ್ಷಿತ್ ಗೌಡ, ಶ್ರೀಧರ ಶೆಟ್ಟಿ, ವಿದ್ಯಾಧರ, ಮನಮೋಹನ್ ರೈ,ಪ್ರಮೋದ್ ರೈ, ಸತೀಶ್, ಹರೀಶ್, ಉಮೇಶ್, ಗಣೇಶ್ ಕೆ.ಎಂ. ಮೊದಲಾದವರು ಉಪಸ್ಥಿತರಿದ್ದರು.