ಮಸೀದಪುರು ಗ್ರಾಮವನ್ನು ಸ್ಥಳಾಂತರಿಸಲು ಒತ್ತಾಯ

ರಾಯಚೂರು,ಸೆ.೮- ದೇವದುರ್ಗ ತಾಲೂಕಿನ ಮಸೀದಪುರು ಗ್ರಾಮದಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ದಲಿತ ಕೇರಿ ಜಲಾವೃತ ವಾಗುತ್ತಿದ್ದು ಕೂಡಲೇ ಗ್ರಾಮವನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮುಖಂಡರು ಜಿಲ್ಲೆದಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಗ್ರಾಮವನ್ನು ಸ್ಥಳಾಂತರಿಸಿ ಸರ್ವೆ ನ ೩ ರಲ್ಲಿ ೨ ಎಕರೆ ಭೂಮಿ ನೀಡಿ ಮನೆ ಕಟ್ಟಿ ಕೊಡಬೇಕು.
ಮಸೀದಪುರು ಗ್ರಾಮದಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ದಲಿತ ಕೇರಿ ಜಾಲಾವೃತ ವಾಗುತ್ತಿದ್ದು,ಕೂಡಲೆ ಸ್ಥಳಾಂತರಿಸಿ ಶಾಸ್ವತ ಪರಿಹಾರ ನೀಡಬೇಕು.ಮಸೀದಪುರು ಸಿಮಾಂತರದಲ್ಲಿ ಸರ್ವೆ ನಂ ೩ ರ ೧೪ ಎಕರೆ ೨೪ ಗುಂಟೆ ಭೂಮಿಯಲ್ಲಿ ೨ ಎಕರೆ ದಲಿತ ಕೇರಿ ನಿವಾಸಕ್ಕೆಂದು ಭೂಮಿ ಮಂಜೂರಿ ಮಾಡಬೇಕು.ದಲಿತರಿಗೆ ಮನೆ ಮಂಜೂರಿ ಮಾಡಿ ನಿವೇಶನ ನೀಡಿ ಮನೆ ಕಟ್ಟಿ ಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬೂದೆಪ್ಪ,ರಾಜಪ್ಪ,ಮಾರೆಪ್ಪ,ಶಾಂತಕುಮಾರ,ಮುತ್ತುರಾಜ,ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.