ಮಸಾಲ ರೋಲ್

ಬೇಕಾಗುವ ಸಾಮಗ್ರಿಗಳು
*ಮೈದಾ ಹಿಟ್ಟು – ೨೫೦ ಗ್ರಾಂ
*ಧನಿಯಾ ಪುಡಿ – ೧ ಚಮಚ
*ವನಸ್ಪತಿ -೧೦೦ ಗ್ರಾಂ
*ಅಚ್ಚಖಾರದ ಪುಡಿ – ೧ ಚಮಚ
*ಗರಂ ಮಸಾಲ – ೧ ಚಮಚ
*ಜೀರಿಗೆ ಪುಡಿ – ೧ ಚಮಚ
*ಓಂ ಕಾಳು -೧/೨ ಚಮಚ
*ಉಪ್ಪು – ೧/೨ ಚಮಚ
*ನೀರು
*ಎಣ್ಣೆ

ಮಾಡುವ ವಿಧಾನ :

ಬೌಲಿಗೆ ಮೈದಾಹಿಟ್ಟು, ಕರಗಿಸಿದ ವನಸ್ಪತಿ, ಅಗತ್ಯಕ್ಕೆ ತಕ್ಕಷ್ಟು ನೀರು, ಓಂ ಕಾಳು, ರುಚಿಗೆ ತಕಷ್ಟು ಉಪ್ಪು ಹಾಕಿ ಗಂಟುಗಳಾಗದಂತೆ ಗಟ್ಟಿಯಾಗಿ ಕಲಸಿಟ್ಟುಕೊಳ್ಳಿ.
ಇನ್ನೊಂದು ಬೌಲ್‌ನಲ್ಲಿ ಗರಂ ಮಸಾಲ, ಜೀರಿಗೆ ಪುಡಿ, ಧನಿಯಾ ಪುಡಿ, ಅಚ್ಚಖಾರದ ಪುಡಿ, ಉಪ್ಪು ಮತ್ತು ನೀರು ಹಾಕಿ ಚೆನ್ನಾಗಿ ಕಲಸಿಕೊಂಡು ಮಸಾಲಾ ತಯಾರಿಸಿಕೊಳ್ಳಿ. ಕಲಸಿಕೊಂಡ ಮೈದಾಹಿಟ್ಟನ್ನು ಚಿಕ್ಕಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಇದನ್ನು ಚಪಾತಿಯಂತೆ ಲಟ್ಟಿಸಿ ಇದರ ಮೇಲೆ ತಯಾರಿಸಿಕೊಂಡ ಮಸಾಲಾವನ್ನು ಹಾಕಿ. ನಂತರ ಚಪಾತಿಯನ್ನು ರೋಲ್ ಮಾಡಿಕೊಂಡು ಚಿಕ್ಕ ಚಿಕ್ಕದಾಗಿ ಕಟ್ ಮಾಡಿ ವಡೆಯಂತೆ ಒತ್ತಿ, ಕಾದ ಎಣ್ಣೆಯಲ್ಲಿ ಹದವಾಗಿ ಕರಿದರೆ ರುಚಿ ರುಚಿಯಾದ ಮಸಾಲ ರೋಲ್ ರೆಡಿ.