ಮಸಾಲೆ ಮಂಡಕ್ಕಿ ಉಪ್ಪೇರಿ

ಬೇಕಾಗುವ ಪದಾರ್ಥಗಳು:
ಕೊಬ್ಬರಿಎಣ್ಣೆ – ೨ ಟೀ ಚಮಚ
ಸಾಸಿವೆ – ೨ ಟೀ ಚಮಚ
ಶೇಂಗಾ – ೨ ಹಿಡಿ
ಬೆಳ್ಳುಳ್ಳಿ – ೧೫ – ೨೦ ಬಿಡಿಸಿದತುಂಡುಗಳು
ಅರಿಶಿನ – ಅರ್ಧ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಅಚ್ಚಖಾರದಪುಡಿ – ೧ ಚಮಚ
ಮಂಡಕ್ಕಿ – ೧ ಪಾವು
ಕರಿಬೇವು – ೧ ಹಿಡಿ
ವಿಧಾನ: ಎಣ್ಣೆಗೆ ಸಾಸಿವೆ ಹಾಕಿ ಸಿಡಿದ ಮೇಲೆ ಶೇಂಗಾ, ಸಿಪ್ಪೆ ಬಿಡಿಸಿದ ಬೆಳ್ಳುಳ್ಳಿ ತುಂಡುಗಳು, ಕರಿಬೇವು ಹಾಕಿ ಚೆನ್ನಾಗಿ ಬಾಡಿಸಿ, ಇಳಿಸಿ ಅರಿಶಿನ, ಉಪ್ಪು ಅಚ್ಚಖಾರದಪುಡಿ ಹಾಕಿಕಲೆಸಿ. ನಂತರ, ಮತ್ತೆ ಒಲೆಯ ಮೇಲಿಟ್ಟು ಮಂಡಕ್ಕಿ ಹಾಕಿ ೧ ನಿಮಿಷ ಬಾಡಿಸಿದರೆ, ಒಂದು ವಾರದವರೆಗೂ ಗರಿಗರಿಯಾಗಿ ಇರುತ್ತದೆ.