ಮಸಾಬಾ ಗುಪ್ತಾ ಅವರ ಹೊಸ ವಿನ್ಯಾಸದ ’ಬಿಸ್ಕೆಟ್ ಬ್ರಾ’

ಬಾಲಿವುಡ್ ನ ಖ್ಯಾತ ಫ್ಯಾಶನ್ ಡಿಸೈನರ್ ಮಸಾಬಾ ಗುಪ್ತಾ ತುಂಬಾ ಫೇಮಸ್. ಆಕೆ ತನ್ನ ವಿನ್ಯಾಸದ ಬಟ್ಟೆಗಳ ಫೋಟೋಶೂಟ್‌ಗಳನ್ನು ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಾಕುತ್ತಾ ಇರುತ್ತಾರೆ. ಕೆಲವು ತಿಂಗಳ ಹಿಂದೆ ಕರೀನಾ ಕಪೂರ್ ಖಾನ್ ಇವರ ಬ್ರ್ಯಾಂಡ್ ಧರಿಸಿ ಫೋಟೋಶೂಟ್ ಮಾಡಿದ್ದಾರೆ. ಇದು ತುಂಬಾ ವೈರಲ್ ಆಗಿತ್ತು.


ಜನರು ಕೂಡ ಇವರ ವಧುವಿನ ಡ್ರೆಸ್ ಸಂಗ್ರಹವನ್ನು ತುಂಬಾ ಇಷ್ಟಪಟ್ಟಿದ್ದಾರೆ. ಮಸಾಬಾ ಬಳಸಿದ ಬಣ್ಣಗಳು ಮತ್ತು ವಿನ್ಯಾಸಗಳು ಅದ್ಭುತವಾಗಿವೆ. ಮಸಾಬಾ ಗುಪ್ತಾ ಅವರು ತಮ್ಮ ವಿನ್ಯಾಸದ ಬಟ್ಟೆಗಳೊಂದಿಗೆ ಇದೀಗ ಮತ್ತೊಮ್ಮೆ ಕಾಣಿಸಿಕೊಂಡಿದ್ದಾರೆ.
ಆದರೆ ಈ ಬಾರಿ ಅವರು ಬಟ್ಟೆಗಳ ಮೇಲೆ ಕೆಲಸ ಮಾಡಿಲ್ಲ, ಆದರೆ ಒಳ ಉಡುಪುಗಳ ಮೇಲೆ ಕೆಲಸ ಮಾಡಿದ್ದಾರೆ. ಮತ್ತು ಇದಕ್ಕೆ ಆಸಕ್ತಿದಾಯಕ ಹೆಸರನ್ನು ಸಹ ನೀಡಲಾಗಿದೆ. ನಾನೇ ಸ್ಟೈಲ್ ಮಾಡಿ ಧರಿಸಿ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದೇನೆ ಎಂದಿದ್ದಾರೆ.
ಮಸಾಬಾ ನಿಜವಾಗಿಯೂ ಮನಮೋಹಕವಾಗಿ ಕಾಣುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಅವರ ಒಳ ಉಡುಪುಗಳ ಸಂಗ್ರಹದ ಬಗ್ಗೆ ನೋಡೋಣ.


ಮಸಾಬಾ ಅವರು ’ಬಿಸ್ಕೆಟ್ ಬ್ರಾ’ ವನ್ನು ವಿನ್ಯಾಸಗೊಳಿಸಿದ್ದಾರೆ :
ತಿಳಿ ಕಂದು ಬಣ್ಣದ ಬ್ರಾ ಮತ್ತು ಒಳಉಡುಪುಗಳ ಮೇಲೆ ಚಿನ್ನದ ಬಣ್ಣದ ಬಿಸ್ಕತ್ತುಗಳಿದ್ದು, ಇವುಗಳನ್ನು ಕೈ, ಕಾಲು, ಕಿವಿ, ಮೂಗು, ಟೋಫಿ ಮತ್ತು ಹೂವುಗಳ ಆಕಾರದಲ್ಲಿ ತಯಾರಿಸಲಾಗಿದೆ.
ಇದರೊಂದಿಗೆ ಫೋಟೋಶೂಟ್‌ನಲ್ಲಿ ಮಸಾಬಾ ನೀಡಿರುವ ಪೋಸ್‌ಗಳು ಅದ್ಭುತ.
ಅದೇ ರೀತಿ ಮಸಾಬಾ ಅವರು ’ಬಾಸ್ಟಿಕ್ ಬ್ರಾ’ ಜೊತೆಗೂ ಕಪ್ಪು ಹೊರ ಉಡುಪನ್ನು ಧರಿಸಿದ್ದಾರೆ. ಅವರು ತನ್ನ ಎರಡೂ ಕೈಗಳಲ್ಲಿ ದೊಡ್ಡ ಬಳೆಗಳನ್ನು ಧರಿಸಿದ್ದಾರೆ. ಕಿವಿಗಳಲ್ಲಿ ಗೋಲ್ಡನ್ ಹೂಪ್ಸ್ ಮತ್ತು ತೆರೆದ ಕೂದಲಿನೊಂದಿಗೆ ಮೇಕ್‌ಅಪ್ ಮಾಡಿದ್ದಾರೆ.ಮಸಾಬಾ ಅವರು ಕೆಲವು ಮ್ಯಾಗಜೀನ್‌ಗಾಗಿ ಈ ಫೋಟೋಶೂಟ್ ಮಾಡಿದ್ದಾರೆ. ಅವರ ಸಂಗ್ರಹವನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಎಲ್ಲರೂ ಇವುಗಳನ್ನು ತುಂಬಾ ಇಷ್ಟ ಪಡುತ್ತಿದ್ದಾರೆ.

ಅಮಿತಾಬ್ ಬಚ್ಚನ್ ತಮ್ಮ ಪುತ್ರ ಅಭಿಷೇಕ್ ಗೆ ೩೦೦೦ ಕೋಟಿ ಪೂರ್ತಿ ಆಸ್ತಿ ನೀಡುವುದಿಲ್ಲವಂತೆ!

ಬಾಲಿವುಡ್ ನ ಶಾಹೆನ್ ಶಾ ಅಂದರೆ ಅಮಿತಾಬ್ ಬಚ್ಚನ್ ಬಳಿ ಕೋಟಿಗಟ್ಟಲೆ ಆಸ್ತಿ ಇದೆ. ಪುತ್ರ ಅಭಿಷೇಕ್ ಬಚ್ಚನ್ ಜೊತೆಗೆ ಬಿಗ್ ಬಿ ಆಸ್ತಿ ಯಾರಿಗೆ ಸೇರುತ್ತೆ ಗೊತ್ತಾ.
ಬಿಗ್ ಬಿ ಅವರ ಕೋಟಿಗಟ್ಟಲೆ ಆಸ್ತಿಯ ಬಗ್ಗೆ ಒಂದು ದೊಡ್ಡ ಸಂಗತಿ ಬಹಿರಂಗವಾಗಿದೆ. ತಮ್ಮ ರಿಯಾಲಿಟಿ ಶೋ ಕೆಬಿಸಿಯಲ್ಲಿ ಅಮಿತಾಬ್ ಬಚ್ಚನ್ ಅವರು ಅಭಿಷೇಕ್ ಬಚ್ಚನ್ ತಮ್ಮ ಸಂಪೂರ್ಣ ಆಸ್ತಿಯನ್ನು ಪಡೆಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.


ಅಮಿತಾಬ್ ಬಚ್ಚನ್ ತಮ್ಮ ಆಸ್ತಿಯ ಬಗ್ಗೆ ಎಲ್ಲಾ ಊಹಾಪೋಹಗಳನ್ನು ಬಹಳ ಹಿಂದೆಯೇ ಹೊರಹಾಕಿದ್ದರು. ಅವರು ಮಾರ್ಚ್ ೨೪, ೨೦೨೨ ರಂದೇ ಟ್ವೀಟ್ ಮಾಡುವ ಮೂಲಕ ಬಹಳ ಹಿಂದೆಯೇ ಈ ಮಾಹಿತಿಯನ್ನು ನೀಡಿದ್ದರು. ಕಾರ್ಯಕ್ರಮವೊಂದರಲ್ಲಿ ಅಮಿತಾಭ್, ’ನಾವು ಇನ್ನಿಲ್ಲದಿರುವಾಗ, ನಮ್ಮಲ್ಲಿ ಏನಿದೆಯೋ ಅದು ನಮ್ಮ ಮಕ್ಕಳಿಗೆ ಸೇರುತ್ತದೆ. ನಮಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಅದನ್ನು ಇಬ್ಬರ ನಡುವೆ ಸಮಾನವಾಗಿ ಹಂಚಲಾಗುತ್ತದೆ’ ಎಂದಿದ್ದರು.


ಅಮಿತಾಬ್ ಬಚ್ಚನ್ ಆಸ್ತಿ ಎಷ್ಟು ಗೊತ್ತಾ?:
ಇತ್ತೀಚೆಗೆ ಅವರು ತಮ್ಮ ಮಗಳು ಶ್ವೇತಾಗೆ ತಮ್ಮ ಜುಹು ಪ್ರತೀಕ್ಷಾ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ಬಂಗಲೆಯ ಬೆಲೆ ಪ್ರಸ್ತುತ ೫೩ ಕೋಟಿ ಎಂದು ಹೇಳಲಾಗಿದ್ದು, ಇದನ್ನು ೧೫೬೪ ಚದರ ಮೀಟರ್ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಆದರೆ ಅಮಿತಾಭ್ ಬಚ್ಚನ್ ಹೊಂದಿರುವ ಆಸ್ತಿ ಎಷ್ಟು ಗೊತ್ತೇ?
ಅಮಿತಾಬ್ ಖಾಸಗಿ ಜೆಟ್ ಕೂಡ ಹೊಂದಿದ್ದಾರೆ: ವರದಿ ಪ್ರಕಾರ ಅಮಿತಾಬ್ ಬಚ್ಚನ್ ೩,೧೯೦ ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಅವರ ಐಷಾರಾಮಿ ಬಂಗಲೆ ’ಜಲ್ಸಾ’ ಬೆಲೆ ೧೧೨ ಕೋಟಿ ರೂ. ಇದಲ್ಲದೇ ಅವರಿಗೆ ‘ಜನಕ’, ‘ವತ್ಸ’ದಂಥ ಬಂಗಲೆಗಳೂ ಇವೆ. ಬೆಂಟ್ಲಿ ಕಾಂಟಿನೆಂಟಲ್ ಜಿಟಿ, ರೇಂಜ್ ರೋವರ್ ಆಟೋಬಯೋಗ್ರಫಿ, ರೋಲ್ಸ್ ರಾಯ್ಸ್ ಫ್ಯಾಂಟಮ್, ಲೆಕ್ಸಸ್ ಎಲ್ ಎಕ್ಸ್ ೫೭೦ ಇಂತಹ ಐಷಾರಾಮಿ ವಾಹನಗಳ ಹೊರತಾಗಿ, ಬಿಗ್ ಬಿ ಖಾಸಗಿ ಜೆಟ್ ನ್ನು ಸಹ ಹೊಂದಿದ್ದಾರೆ. ಇವರ ವೆಚ್ಚ ಅಂದಾಜು ೨೬೦ ಕೋಟಿ ರೂ.
ಅಮಿತಾಬ್ ಬಚ್ಚನ್ ಅವರ ಬಳಿ ಎಷ್ಟು ಆಸ್ತಿ ಇದೆಯೆಂದರೆ ಅದನ್ನು ಎರಡು ಭಾಗಗಳಾಗಿ ವಿಂಗಡಿಸಲಾಗುವುದು, ಇದನ್ನು ಸ್ವತಃ ಅಮಿತಾಬ್ ಬಚ್ಚನ್ ಖಚಿತಪಡಿಸಿದ್ದಾರೆ. ಆಸ್ತಿಯನ್ನು ಮಗಳು ಶ್ವೇತಾ ಬಚ್ಚನ್ ಮತ್ತು ಮಗ ಅಭಿಷೇಕ್ ಬಚ್ಚನ್ ನಡುವೆ ೫೦-೫೦ ರ ರೀತಿಯಲ್ಲಿ ಹಂಚಿಕೆ ಮಾಡಲಾಗುತ್ತದೆ. ಮಾರ್ಚ್ ೨೪, ೨೦೨೨ ರಂದು ಅಮಿತಾಬ್ ಅವರು ಟ್ವೀಟ್ ಮಾಡಿದ್ದು, “ನನ್ನ ಮಗ, ನನ್ನ ಉತ್ತರಾಧಿಕಾರಿಯಾಗುವುದಿಲ್ಲ, ನನ್ನ ಉತ್ತರಾಧಿಕಾರಿಯಾಗುವವರು ನನ್ನ ಮಕ್ಕಳಾಗುತ್ತಾರೆ!” ಎಂದು ಹೇಳಿದ್ದರು.