ಮಸಬಹಂಚಿನಾಳ :ಪದವೀಧರನಿಗೆ ಒಲಿದು ಬಂದ ಗ್ರಾ. ಪಂ.ಅಧ್ಯಕ್ಷಗಿರಿ !  


ರುದ್ರಪ್ಪ ಭಂಡಾರಿ
ಕುಕನೂರು, ಜು,18- ಗ್ರಾಮೀಣ ಭಾಗದಲ್ಲಿ ಅನೇಕ ಯುವಕರು ಪದವಿ ತೇಗ೯ಡೆ ಯಾಗಿ  ಕೆಲವರು ಉದ್ಯೋಗ ಕ್ಕಾಗಿ ಊರೂರು ಅಲೆಯುತ್ತಾರೆ, ಮತ್ತೆ ಕೆಲವರು ಓದಿದ.  ಶಿಕ್ಷಣ ವನ್ನು ಸಾವ೯ಜನಿಕ ಸೇವೆಗೆ ವಿನಿಯೋಗಿಸಿ ತಮ್ಮ ವ್ಯಕ್ತಿತ್ವ ಯಶಸ್ವಿ ಗೊಳಿಸಿಕೊಂಡ ಪ್ರಸಂಗಕ್ಕೆ ತಾಲೂಕಿನ ಮಸಬ ಹಂಚಿನಾಳ ಗ್ರಾಮದ ಹನುಮಂತಪ್ಪ.    ಬನ್ನಿಕೊಪ್ಪ  ಸಾಕ್ಷಿ. ಹನುಮಂತಪ್ಪ ಎಂಬ  ಬಿ. ಎಡ್ ಪದವಿಧರ ನಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ,ಕಳೆದ ೧೦ ವರುಷ ಗಳಿಂದ  ಸಾಮಾಜಿಕ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ  ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಮಾಜಿ ಸಚಿವ ಹಾಲಪ್ಪ ಆಚಾರ ಅವರ ನಾಯಕತ್ವ ಮೆಚ್ಚಿ ಅವರ ತತ್ವ ಆದಶ೯ ಗಳಿಗೆ ಪ್ರೇರಿತ ಗೊಂಡು ಸಾವ೯ಜನಿಕ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದ ಪರಿಣಾಮ ಮೊಟ್ಟ ಮೊದಲಿಗೆ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿ ಎರಡೂವರಿ ವರುಷಗಳ ಕಾಲ ಸದಸ್ಯರಾಗಿ  ಜನ ಮನ್ನಣೆ ಗಳಿಸಿದ್ದಾರೆ. ನಂತರ ಪ್ರಸಕ್ತ ಎರಡನೇ ಅವಧಿಗೆ  ಜುಲೈ ೧೭ರಂದು ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ನೂತನ ಅದ್ಯಕ್ಷರಾಗಿ ಅವಿರೋಧ ಆಯ್ಕೆ ಯಾಗಿದ್ದಾರೆ. ಜೊತೆಗೆ ಲಿಂಗಮ್ಮ ಹೀರೆ ಅಂಗಡಿ ಅವರೂ ಉಪಾಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ.   ತಾಳಿದವನು ಬಾಳಿಯಾನು ಎಂಬ ತತ್ವ ಸಿದ್ಧಾಂತಗಳನ್ನು ಎಲ್ಲರೂ ಪಾಲಿಸಬೇಕು ಅಂದಾಗ ಅದಕ್ಕೆ ವಿಶೇಷ ಮೆರಗು ಬರಲು ಸಾಧ್ಯವಾಗುತ್ತದೆ ಎಂಬುದಕ್ಕೆ ಪ್ರಸ್ತುತ ಚುನಾವಣೆಯೇ ಸಾಕ್ಷಿ. ೨೦೧೦-೧೧ ನೆಯ ಸಾಲಿನಲ್ಲಿ ಯಲಬುರ್ಗಾ ದ ನಿಂಗೋಜಿ ಶಿಕ್ಷಣ ಸಂಸ್ಟೆಯಲ್ಲಿ ಬೀ ಎಡ್ ಮುಗಿಸಿದವರು, ಇವರ ಧಮ೯ಪತ್ನಿ ಯು  ಬಿ.ಎಡ್ ಪದವೀಧರೆ ಅವರ ಪ್ರೋತ್ಸಾಹವು ಸೇರಿ ಸ್ಥಳೀಯ.                  ಮುಖಂಡರಾದ  ಇವರ ರಾಜಕೀಯ ಗುರು ಹಾಲಪ್ಪ ಆಚಾರ್,ಅನಿಲ್ ಆಚಾರ, ಪ್ರಭು ಆಚಾರ,ಕಪ್ಪತಪ್ಪ ಮುಂತಾದವರ ಪ್ರೇರಣೆ ಪ್ರೋತ್ಸಾಹ ದಿಂದ ಊರಿನ ಧಾಮಿ೯ಕ , ಸಾಮಾಜಿಕ ಕೆಲ್ಸ ಕಾಯ೯ಗಳಲ್ಲಿ  ಕೈ ಬಾಯಿ ಶುದ್ಧವಾಗಿ ಪ್ರಾಮಾಣಿಕ ಶ್ರದ್ಧೆ ಯನ್ನು ಅಳವಡಿಸಿಕೊಂಡ ಪರಿಣಾಮ ಮೊದಲ ಬಾರಿ ಸದಸ್ಯ ರಾಗಿ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಅವಕಾಶಕ್ಕೆ ಭಾಜನ್ ರಾಗಿದ್ದಾರೆ.  ಮಸಬ ಹಂಚಿನಾಳ, ಗಾವರಳ ಹಾಗೂ   ನಿಟ್ಟಾಲೀ ಗ್ರಾಮಗಳ ಜನತೆ ಮನ ಗೆದ್ದು ಗ್ರಾಮೀಣ ವಿಕಾಸಕ್ಕೆ ಅಡಿಪಾಯ ಹಾಕಲು ಉತ್ಸುಕ ರಾಗಿದ್ದಾರೆ. ಪದವೀಧರ ಯುವ ಅಧ್ಯಕ್ಷ ನ ಸೇವೆಯ ಸದುಪಯೋಗ ಪಡಿಸಿಕೊಳ್ಳಲೂ ಜನರ ಪ್ರೋತ್ಸಾಹ ಅಗತ್ಯವಿದೆ.

ಮಸಬಂಚಿನಾಳ ಗ್ರಾಪಂ ಅಧ್ಯಕ್ಷ ಹನುಮಂತಪ್ಪ ಬನ್ನಿಕೊಪ್ಪ ಉಪಾಧ್ಯಕ್ಷೆ ಲಿಂಗಮ್ಮ ಹಿರೆಅಂಗಡಿ ಆಯ್ಕೆ
ಕುಕನೂರು: ತಾಲೂಕಿನ   ಮಸಬಂಚಿನಾಳ ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಸೋಮವಾರ ದಿವಸ ಯಶಸ್ವಿಯಾಗಿ ಜರುಗಿತು.
ಮಸಬಹಂಚಿನಾಳ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಹನುಮಂತಪ್ಪ ಬನ್ನಿಕೊಪ್ಪ ಹಾಗೂ ಉಪಾಧ್ಯಕ್ಷೆಯಾಗಿ ಲಿಂಗಮ್ಮ ಹಿರೇ ಅಂಗಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲೂಕು ಪಂಚಾಯಿತಿ ಕಾರ್ಯಾಲಯದ ಸಹಾಯಕ ನಿರ್ದೇಶಕ ವೆಂಕಟೇಶ್ ವಂದಾಲಿ ಚುನಾವಣೆಯ ಅಧಿಕಾರಿಯಾಗಿದ್ದರು.
ಚುನಾವಣೆ ಪ್ರಕ್ರಿಯೆ ಮುಗಿದನಂತರ ನಂತರ ವಿಜಯೋತ್ಸವದಲ್ಲಿ ಮುಖಂಡರಾದ ಅನಿಲ್ ಆಚಾರ್, ಕಪ್ಪಾತಪ್ಪ ಅಂಗಡಿ,ಪ್ರಭಾಕರ್ ಆಚಾರ್, ಈಶಪ್ಪ ಅಂಗಡಿ, ಯಂಕಣ್ಣ ಇಳಿಗೆರ್, ನಾಗರಾಜ್ ಗಿರಡ್ಡಿ, ಹಾಗೂ ಗ್ರಾಮ ಪಂಚಾಯತಿಯ ಸದಸ್ಯರು ಗ್ರಾಮಸ್ಥರು ಇತರರು ಉಪಸ್ಥಿತರಿದ್ದರು..