ಮಸಣ ಕಾರ್ಮಿಕರ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮನವಿ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ.ಸೆ.10: ಮಸಣ ಕಾರ್ಮಿಕರನ್ನು ಪ್ರತಿ ಮಸಣಕ್ಕೆ ಒಬ್ಬರಂತೆ ಮಸಣ ಕಾವಲುಗಾರರು ಹಾಗೂ ವೇತನ ನೀಡುವಂತೆ ಒತ್ತಾಯಿಸಿ ಮಸಣ ಕಾರ್ಮಿಕ ಸಂಘದ ಪದಾಧಿಕಾರಿಗಳು ಶುಕ್ರವಾರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
 ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಮಸಣ ಕಾರ್ಮಿಕರ ಪರವಾಗಿ ಸಿಪಿಎಂ ಪಕ್ಷದ ಬಸವರಾಜು ಮಾತನಾಡಿ ಮಸಣ ಕಾರ್ಮಿಕರು ಬಹುತೇಕವಾಗಿ ಬಿಟ್ಟೀ ಚಾಕರಿ ಮಾಡುತ್ತಾ ಬಂದಿದ್ದಾರೆ. ಹಲವು ವರ್ಷಗಳಿಂದ ಇವರ ಅನ್ಯಾಯವನ್ನು ಸರಿಪಡಿಸಲು ಮನವಿ ಸಲ್ಲಿಸಿದ್ದೇವೆ. ಆದರೂ ಸರ್ಕಾರ ಇವರಿಗೆ ಸ್ಪಂದಿಸುತ್ತಿಲ್ಲ. ಸಾವಿರಾರು ಕುಟುಂಬಗಳು ಇದನ್ನೇ ನಂಬಿ ಬದುಕುತ್ತಿದ್ದಾರೆ. ಜನರು ಶವಗಳನ್ನು ಉಳಲು ಬರುವವರಿಗೆ ಆದಿ ನಿರ್ಮಿಸುವುದು ಕುಳಿತುಕೊಳ್ಳಲು ಬಲು ಸ್ಥಳ ಮಾಡಿಕೊಳ್ಳುವುದು ಮುಂತಾಗಿ ಎಲ್ಲ ಕೆಲಸಗಳು ಉಚಿತವಾಗಿ ನಡೆಯುತ್ತವೆ. ಜೊತೆಗೆ ಸ್ಥಳೀಯ ಸಮಸ್ಯೆಗಳು ಗ್ರಾಮಪಂಚಾಯಿತಿ ಮಸಣ ಗಳನ್ನು ಸಮರ್ಪಕವಾಗಿ ನಿರ್ವಹಿಸಲು ಕ್ರಮ ವಹಿಸುತ್ತಿಲ್ಲ. ಒತ್ತುವರಿಯಾಗಿರುವ ಮಸಣ ಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದರು.
 ಈ ಸಂದರ್ಭದಲ್ಲಿ ರಾಜ್ಯ ದೇವದಾಸಿ ಮಹಿಳಾ ಸಂಘದ ಬಿ. ಮಾಳಮ್ಮ, ಮಸಣ ಸಂಘದ  ಸಂಚಾಲಕ ಹುಲುಗಪ್ಪ, ಬಸವರಾಜ, ಸಣ್ಣ ಹನುಮಂತಪ್ಪ ಹಾಗೂ ಇತರರಿದ್ದರು.