ಮಸಣ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಆಗ್ರಹ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.01: ಮಸಣ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಮಸಣ ಕಾರ್ಮಿಕರ ಸಂಘದ ಮುಖಂಡ ಯು.ಬಸವರಾಜ್ ಆಗ್ರಹಿಸಿದರು.
ಅವರಿಂದು ಮಸಣ ಕಾರ್ಮಿಕರಿಗೆ ಗುರುತಿನ ಕಾರ್ಡ್ ಗಳನ್ನು ವಿತರಿಸಿ ಮಾತನಾಡುತ್ತಾ, ಸುಮಾರು ವರ್ಷಗಳಿಂದ ಮಸಣ ಕಾರ್ಮಿಕರು ಬಿಟ್ಟೀಚಾಕ್ರಿ ಮಾಡುತ್ತಾ ಬಂದಿದ್ದು ಇವರಿಗೆ  ಸರ್ಕಾರದ ಅನುದಾನ ಸಿಗುತ್ತಿಲ್ಲ
ಹೀಗಾಗಿ ಇವರುಗಳು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ಇವರ ಪ್ರಮುಖ ಬೇಡಿಕೆಗಳು ಈಡೇರಿಸಲು ಸರ್ಕಾರವನ್ನು ಒತ್ತಾಯಿಸಿದರು.
ಬೇಡಿಕೆಗಳು
ಎಲ್ಲಾ ಮಸಣ ಕಾರ್ಮಿಕರ ಸರ್ವೆ ಮಾಡಬೇಕು, ಸ್ಥಳೀಯ ಸಂಸ್ಥೆಗಳ ಮೂಲಕ ಚಲಿಕೆ ಗುದ್ದಿ ಹಾರಿ ನೀಡಬೇಕು, .ಮಸಣ ಕಾರ್ಮಿಕರಿಗೆ ನಿವೇಶನ, ಭೂಮಿ ನೀಡಬೇಕು, ಮಸಣ ಕಾರ್ಮಿಕರ ಮಕ್ಕಳಿಗೆ ಉದ್ಯೋಗ ನೀಡಬೇಕು ಹಾಗೂ ಮಸಣ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸ ವೆಚ್ಚವನ್ನು ಸರಕಾರವೇ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.