ಮಶ್ರೂಮ್ ಪೇಪರ್ ಫ್ರೈ

ಬೇಕಾಗುವ ಸಾಮಗ್ರಿಗಳು
2 ಚಮಚ ತೆಂಗಿನೆಣ್ಣೆ
1 ಚಮಚ ಸಾಸಿವೆ
ಒಂದೂವರೆ ಚಮಚ ಚಿಕ್ಕದಾಗಿ ಕತ್ತರಿಸಿದ ಶುಂಠಿ
ಸ್ವಲ್ಪ ಕರಿಬೇವು
2-3 ಒಣ ಮೆಣಸು
1 ಸಾಧಾರಣ ಗಾತ್ರದ ಈರುಳ್ಳಿ 2 ಚಮಚ ಟೊಮೆಟೊ ಪೇಸ್ಟ್ 1 ಚಮಚ ಕೊತ್ತಂಬರಿ ಪುಡಿ ಅರ್ಧ ಚಮಚ ಜೀರಿಗೆ ಪುಡಿ ಅರ್ಧ ಚಮಚ ಖಾರದ ಪುಡಿ 1/4 ಚಮಚ ಗರಂ ಮಸಾಲ 3/4 ಚಮಚ ಕಾಳು ಮೆಣಸಿನ ಪುಡಿ
1 ಚಮಚ ಉಪ್ಪು
500ಗ್ರಾಂ ಅಣಬೆ

ಮಾಡುವ ವಿಧಾನ

ಅಗಲ ಬಾಯಿಯ ದಪ್ಪ ತಳವಿರುವ ದೊಡ್ಡ ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದಾಗ ಸಾಸಿವೆ, ಶುಂಠಿ, ಬೆಳ್ಳುಳ್ಳಿ, ಕರಿಬೇವು, ಒಣ ಮೆಣಸು ಹಾಕಿ 2 ನಿಮಿಷ ಸೌಟ್‌ನಿಂದ ಆಡಿಸಿ. ಆಗ ಪಾತ್ರೆಯಿಂದ ಮಸಾಲೆ ಸುವಾಸನೆ ಬೀರಲಾರಂಭಿಸುತ್ತದೆ.

ಈಗ ಈರುಳ್ಳಿ ಹಾಕಿ ಅದು ಮೆತ್ತಗಾಗುವವರೆಗೆ ಫ್ರೈ ಮಾಡಿ. ನಂತರ ಟೊಮೆಟೊ ಪೇಸ್ಟ್, ಕೊತ್ತಂಬರಿ ಪುಡಿ, ಗರಂ ಮಸಾಲ ಹಾಕಿ 2-3 ನಿಮಿಷ ಬೇಯಿಸಿ.
*ಈಗ ಅಣಬೆ ಹಾಕಿ 2 ನಿಮಿಷ ಫ್ರೈ ಮಾಡಿ. ನಂತರ ಕಾಳು ಮೆಣಸಿನ ಪುಡಿ, ಉಪ್ಪು ಸೇರಿಸಿ ಅಧಿಕ ಉರಿಯಲ್ಲಿ ಫ್ರೈ ಮಾಡಿ.

ಸೌಟ್‌ನಲ್ಲಿ ಆಗಾಗ ಆಡಿಸುತ್ತಲೇ ಇರಬೇಕು. ಅಣಬೆ ಚೆನ್ನಾಗಿ ಬೆಂದ ಮೇಲೆ ಉರಿಯಿಂದ ಇಳಿಸಿ ಸರ್ವ್ ಮಾಡಿ.