ಮಶ್ರೂಮ್ ಪೇಪರ್ ಫ್ರೈ

ಬೇಕಾಗುವ ಸಾಮಗ್ರಿಗಳು
೨ ಚಮಚ ತೆಂಗಿನೆಣ್ಣೆ
೧ ಚಮಚ ಸಾಸಿವೆ
ಒಂದೂವರೆ ಚಮಚ ಚಿಕ್ಕದಾಗಿ ಕತ್ತರಿಸಿದ ಶುಂಠಿ
ಸ್ವಲ್ಪ ಕರಿಬೇವು
೨-೩ ಒಣ ಮೆಣಸು
೧ ಸಾಧಾರಣ ಗಾತ್ರದ ಈರುಳ್ಳಿ ೨ ಚಮಚ ಟೊಮೆಟೊ ಪೇಸ್ಟ್ ೧ ಚಮಚ ಕೊತ್ತಂಬರಿ ಪುಡಿ ಅರ್ಧ ಚಮಚ ಜೀರಿಗೆ ಪುಡಿ ಅರ್ಧ ಚಮಚ ಖಾರದ ಪುಡಿ ೧/೪ ಚಮಚ ಗರಂ ಮಸಾಲ ೩/೪ ಚಮಚ ಕಾಳು ಮೆಣಸಿನ ಪುಡಿ
೧ ಚಮಚ ಉಪ್ಪು
೫೦೦ಗ್ರಾಂ ಅಣಬೆ

ಮಾಡುವ ವಿಧಾನ

ಅಗಲ ಬಾಯಿಯ ದಪ್ಪ ತಳವಿರುವ ದೊಡ್ಡ ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದಾಗ ಸಾಸಿವೆ, ಶುಂಠಿ, ಬೆಳ್ಳುಳ್ಳಿ, ಕರಿಬೇವು, ಒಣ ಮೆಣಸು ಹಾಕಿ ೨ ನಿಮಿಷ ಸೌಟ್‌ನಿಂದ ಆಡಿಸಿ. ಆಗ ಪಾತ್ರೆಯಿಂದ ಮಸಾಲೆ ಸುವಾಸನೆ ಬೀರಲಾರಂಭಿಸುತ್ತದೆ.