ಮಶ್ರೂಮ್ ಪಲಾವ್

ಬೇಕಾಗುವ ಸಾಮಾಗ್ರಿಗಳು

  • ೧ ಕಪ್ ಅಕ್ಕಿ
  • ೧ ಕಪ್ ಅಣಬೆ
  • ೪ ಈರುಳ್ಳಿ ಹೂವು (ಸಾಂಬಾರು ಈರುಳ್ಳಿ)
  • ೨ ಲವಂಗ
  • ೧/೨ ಇಂಚಿನ ಚೆಕ್ಕೆ
  • ೨ ಏಲಕ್ಕಿ
  • ೧ ಪಲಾವ್ ಎಲೆ
  • ೧ ಚಮಚ ಗರಂ ಮಸಾಲ
  • ೧ ಚಮಚ ಜೀರಿಗೆ ಪುಡಿ
  • ಎಣ್ಣೆ, ಉಪ್ಪು

ಮಾಡುವ ವಿಧಾನ:

  • ಅಕ್ಕಿಯನ್ನು ಶುದ್ಧಗೊಳಿಸಿ ತೊಳೆಯಬೇಕು. ಬಿಸಿ ನೀರಿನಲ್ಲಿ ೧೦ ನಿಮಿಷ ನೆನೆಸಬೇಕು.
  • ಸಾಂಬಾರು ಈರುಳ್ಳಿ (ಬಿಳಿ ಹೂವನ್ನು ಮತ್ತು ಹಸಿರು ಕಡ್ಡಿಯನ್ನು ಪ್ರತ್ಯೇಕವಾಗಿ ಕತ್ತರಿಸಿ) ಒಂದೆಡೆ ಇಟ್ಟುಕೊಳ್ಳಬೇಕು.
  • ಎಣ್ಣೆ ಕಾಯಿಸಿ ಅದರಲ್ಲಿ ಈರುಳ್ಳಿಯ ಬಿಳಿ ಹೂವು, ಲವಂಗ, ಚೆಕ್ಕೆ, ಏಲಕ್ಕಿ ಮತ್ತು ಪಲಾವ್ ಎಲೆಯನ್ನು ಹುರಿದುಕೊಂಡು ಮಶ್ರೂಮ್ ಹಾಕಬೇಕು. ಈಗ ಜೀರಿಗೆ ಪುಡಿ ಮತ್ತು ಗರಂ ಮಸಾಲಾ ಪುಡಿಯನ್ನು ಬೆರೆಸಬೇಕು.
  • ಅಕ್ಕಿಯನ್ನು ಹಾಕಿ ಚೆನ್ನಾಗಿ ತಿರುಗಿಸಬೇಕು.
  • ಎರಡು ಕಪ್ ಬಿಸಿ ನೀರನ್ನು ಅಕ್ಕಿ ಮಿಶ್ರಣಕ್ಕೆ ಹಾಕಿ ಈರುಳ್ಳಿಯ ಹಸಿರು ಭಾಗ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ತಿರುಗಿಸಬೇಕು. ಮುಚ್ಚುಳ ಮುಚ್ಚಿ ಬೇಯಿಸಿದರೆ ಮಶ್ರೂಮ್ ಪಲಾವ್ ತಿನ್ನಲು ರೆಡಿಯಾಗಿರುತ್ತೆ.