ಮಳ್ಳಿ ಉಗಾರ್ ಶುಗರ್ ಕಾರ್ಖಾನೆ ಮುಂದೆ ಪ್ರತಿಭಟನೆ ಕಬ್ಬು ಬೆಳೆಗಾರ ರೈತರಿಗೆ ಮಳ್ಳಿ ಕಾರ್ಖಾನೆಯಿಂದ ದರದಲ್ಲಿ ಅನ್ಯಾಯ

ಯಡ್ರಾಮಿ:ನ.12:ತಾಲೂಕಿನ ಮಳ್ಳಿ ಉಗಾರ್ ಶುಗರ್ ಕಾರ್ಖಾನೆ ಬಂದು ಮಾಡಿ ರೈತರು ಕಬ್ಬಿನ ದರ ಹೆಚ್ಚಳ ಕುರಿತು ಆಗ್ರಹಿಸಿ ಪ್ರತಿಭಟನೆ ಮಾಡಿದರು.

ಈ ಮಳ್ಳಿ ಕಾರ್ಖಾನೆಯಲ್ಲಿ ಕಬ್ಬು ಬೆಳಗಾರರ ರೈತರಿಗೆ ಬಹಳ ಅನ್ಯಾಯವಾಗುತ್ತಿದೆ, ವಿಜಯಪುರ, ಮುದ್ದೇಬಿಹಾಳ ಕಾರ್ಖಾನೆಯಲ್ಲಿ ಮಳ್ಳಿ ಕಾರ್ಖಾನೆಗಿಂತ ಕಡಿಮೆ 2020-2021ರಲ್ಲಿ ರಿಕ್ವಾರಿ 10.70 ಇದ್ದರು ಪ್ರತಿ ಟನ್ನಗೆ ಕಬ್ಬಿನ ದರ 3103 ರೂ. ಹೆಚ್ಚಾಳವಿದೆ ಆದರೆ ಮಳ್ಳಿ ಪ್ಯಾಕ್ಟ್ರಿರಿಯಲ್ಲಿ ರಿಕ್ವಾರಿ 10.72 ಆ ಕಾರ್ಖಾನೆಗಳಗಿಂತ ಹೆಚ್ಚು ಇದ್ದರು ದರ 2300 ರೂ.ಯಾಕೆ ಕಡಿಮೆ ತಗೋತಿದ್ದರೆ,ಕಟ್ಟವು ಖರ್ಚು ?325.ಸಾಗಣಿಕೆ ಖರ್ಚು ?220. ಕೊಟ್ಟಿದ್ದಾರೆ.ಇನ್ನುಳಿದ ?2534.ರೈತರಿಗೆ ಕೊಡಬೇಕು.ಆದರೆ ಕಾರ್ಖಾನೆಯವರು ?2300 ಕೊಡುತ್ತೇವೆ ಎಂದು ನೋಟಿಸ್ ಹಂಚಿದ್ದಾರೆ.ಅದಕ್ಕೆ ರೈತರು ಬುಗಿಲೆದ್ದು ಕಾರ್ಖಾನೆ ಬಂದ ಮಾಡಿ ಪ್ರತಿಭಟನೆ ಮಾಡಿ ಕಬ್ಬಿನ ದರ ಹೆಚ್ಚಳ ಮಾಡಬೇಕೆಂದು ಕಾರ್ಖಾನೆಯ ಚೀಫ್ ಆಫೀಸರಾದ ಅಮರ ನಾಯಕ ರವರಿಗೆ ಮನವಿ ಸಲ್ಲಿಸಿದ್ದರು.
ನಾನು ಇದರ ಬಗ್ಗೆ ನಮ್ಮ ಕಾರ್ಖಾನೆಯ ಮಾಲೀಕರಿಗೆ ಸದ್ಯದಲ್ಲೇ ಲೆಟರ್ ಹಾಕಿ ದರದ ಬಗ್ಗೆ ಕ್ರಮ ಕೈತೆಗೆದು ಕೊಳ್ಳಲು ಹೇಳ್ತೇನೆ ಅವರು ಏನು ಸ್ಪಂದನೆ ನೀಡುತ್ತಾರೆ ನಾನು ಅದು ಹೇಳಬಲ್ಲೆ ಎಂದು ಕಾರ್ಖಾನೆಯ ಚೀಫ್ ಆಫೀಸ್ ರಾದ ಅಮರ ನಾಯಕ ರವರು ಹೇಳಿದ್ದರು.
ಈ ಪ್ರತಿಭಟನೆಯಲ್ಲಿ ರೇವಣ್ಣಸಿದ್ದ, ಮಲ್ಲಿಕಾರ್ಜುನ ಪಾಟೀಲ, ಅಪ್ಪು ಪಾಟೀಲ, ಕಲ್ಯಾಣಿ,ಭೀಮಣ್ಣ ಗೌಡ ಮಗಣಗೇರಿ,ರಾಮಣ್ಣಗೌಡ ದೊಡ್ಡಮನಿ,ನಿಂಗಣ್ಣ ಗೌಡ ಪಾಟೀಲ, ಸಂತೋಷ ನಾಗನೂರ,ಚಂದ್ರಕಾಂತ ಮಗಣಗೇರ.ಸಿದ್ದಣ್ಣಗೌಡ ಮತಿತರರು ರೈತರು ಪಾಳಗೊಂಡಿದ್ದರು.