ಮಳೆ ಹಿನ್ನೆಲೆ:೧೮ ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್

ನವದೆಹಲಿ,ಜು.೩- ಒಡಿಶಾದಲ್ಲಿ ಭಾರೀ ಮಳೆಯಾಗುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇಂದಿನಿಂದ ಜು. ೭ ವರೆಗೆ ೧೮ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ “ಯಲ್ಲೋ ಅಲರ್ಟ್ ” ಘೋಷಿಸಿದೆ.
ಇದರ ಜೊತೆಗೆ ದೇಶ ಹಲವು ರಾಜ್ಯಗಳಾದ ತಮಿಳುನಾಡು, ದೆಹಲಿ, ಪುದುಚೆರಿ ಸೇರಿದಂತೆ ಮತ್ತಿರರ ಭಾಗದಲ್ಲಿ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆ ಕೆಲವು ಭಾಗಗಳಲ್ಲಿ ಮಳೆ ಬೀಳುವ ಸಾದ್ಯತೆ ಸಾದ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಒಡಿಶಾದ ಕೇಂದ್ರಪಾರ, ಕಟಕ್, ಜಗತ್‌ಸಿಂಗ್‌ಪುರ, ಪುರಿ, ಖುರ್ದಾ, ಮಯೂರ್‌ಭಂಜ್, ಕಿಯೋಂಜರ್, ಧೆಂಕನಲ್, ಗಜಪತಿ, ಗಂಜಾಂ, ರಾಯಗಡ, ಕೊರಾಪುಟ್, ಮಲ್ಕಂಗಿರಿ, ನಯಾಗರ್, ಅಂಗುಲ್.”ಬಾಲಾಸೋರ್, ಭದ್ರಕ್, ಜಾಜ್ಪುರ್, ಕೇಂದ್ರಪಾರ, ಕಟಕ್ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಗುಡುಗು ಸಹಿತ ಮಿಂಚು ಸಂಭವಿಸುವ ಸಾಧ್ಯತೆಯಿದೆ.
ಜುಲೈ ೪ ಮತ್ತು ೫ ರಂದು ಸುಂದರ್‌ಗಢ್, ಜರ್ಸುಗುಡ, ಬರ್ಗಢ್, ಸಂಬಲ್‌ಪುರ್, ದಿಯೋಗರ್, ಅಂಗುಲ್ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಮಿಂಚು ಸಹಿತ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ,
ಧೆಂಕನಾಲ್, ಕಿಯೋಂಜರ್, ಮಯೂರ್‌ಭಂಜ್, ಸೋನೆಪುರ್, ಬೌಧ್, ಬೋಲಂಗಿರ್. ನುವಾಪಾದ, ನವರಂಗಪುರ, ಕಲಹಂಡಿ, ಕಂಧಮಾಲ್, ಗಂಜಾಂ, ಗಜಪತಿ, ಮಲ್ಕನ್‌ಗಿರಿ, ಕೊರಾಪುಟ್, ರಾಯಗಡ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.
ಜುಲೈ ೬ ಮತ್ತು ೭ ರಂದು ಬೆಳಿಗ್ಗೆ “ಕೋರಾಪುಟ್, ರಾಯಗಡ, ನವರಂಗಪುರ, ಕಲಹಂಡಿ, ನುವಾಪಾದ, ಬೋಲಂಗಿರ್ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಮುಂದಿನ ೪ ದಿನಗಳಲ್ಲಿ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮುಂದಿನ ಎರಡು-ಮೂರು ದಿನಗಳಲ್ಲಿ ದೆಹಲಿ-ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಲಘು ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ, ನಂತರ ಮುಂದಿನ ಮೂರು ದಿನಗಳವರೆಗೆ ಲಘುವಾಗಿ ಸಾಧಾರಣ ಮಳೆಯಾಗಲಿದೆ ಎನ್ನಲಾಗಿದೆ