ಮಳೆ ಹಾನಿ 43 ಸಂತ್ರಸ್ತರಿಗೆ ತಲಾ 50 ಸಾ. ರೂ.ಚೆಕ್ ನೀಡಿದ ಶಾಸಕ ಕಂದಕೂರ

ಗುರುಮಠಕಲ್:ಆ.29: ಕ್ಷೇತ್ರದಲ್ಲಿ ಮಳೆಯಿಂದ ಮನೆಗಳು ಹಾನಿಯಾಗಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ಹಾಗೂ ಅವರ ತಂಡವರು ತ್ವರಿತವಾಗಿ ಸರ್ವೇ ಮಾಡಿರುವ ಹಿನ್ನೆಲೆಯಲ್ಲಿ ಸಂತ್ರಸ್ತರನ್ನು ಗುರುತಿಸಿ ಶಾಸಕರ ಜನಸಂಪರ್ಕ ಕಚೇರಿ ಗುರುಮಠಕಲ್ ನಲ್ಲಿ 43 ಜನ ಫಲಾನುಭವಿಗಳಿಗೆ ಪ್ರತಿ ಯೋಬ್ಬರಿಗು 50 ಸಾವಿರ ರೂಪಾಯಿ ಚೆಕ್ ವಿತರಣೆಯನ್ನು ತಾಲೂಕು ದಂಡಾಧಿಕಾರಿಗಳು ಹಾಗೂ ತಹಸೀಲ್ದಾರರು ಮೊಹಮ್ಮದ್ ಮೋಸಿನ್ ಆಹ್ಮದ್ ಅವರ ನೇತೃತ್ವದಲ್ಲಿ ಸನ್ಮಾನ್ಯೆ ಶಾಸಕ ಶರಣಗೌಡ ಕಂದಕೂರ ರವರು ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಿದರು ಈ ವೇಳೆ ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ತಮ್ಮ ಮನೆಗಳು ಮಳೆಯಿಂದ ಬಿದ್ದಿರುವ ಹಿನ್ನೆಲೆಯಲ್ಲಿ ಸರಕಾರ ನಿಮಗೆ ಸಹಾಯ ಧನ ಕಲ್ಪಿಸಿದೆ ಆದಕಾರಣ ಯಾವುದೇ ನಿಮ್ಮ ಸ್ವಂತ ಖರ್ಚಿಗಾಗಲ್ಲಿ ನಿಮ್ಮ ಮನೆಯ ಸಂಸಾರಕ್ಕೆ ಆಗಲಿ ಬಳಸಿಕೊಳ್ಳದೆ ಮಳೆಯಿಂದ ಸಣ್ಣ ಪುಟ್ಟ ರಿಪೇರಿ ಇದ್ದರೆ ಮಾಡಿಸಿ ಕೊಳ್ಳಬೇಕು ಯಾಕೆಂದರೆ ಹಗಲು ರಾತ್ರಿ ಎನ್ನದೆ ಹೊಲದಲ್ಲಿ ದುಡಿಯುವ ರೈತರು ಬಹಳ ಜನರು ಇದ್ದೀರಿ ನಿಮ್ಮ ಮನೆಗಳು ಬೆಚ್ಚಗೆ ಯಿದ್ದಾಗ ಮಾತ್ರ ನಿವು ನಿಮ್ಮ ಕುಟುಂಬ ಸರಿಯಾಗಿ ಇರಲಿಕ್ಕೆ ಸಾಧ್ಯ ಸರಕಾರ ತಮಗೆ ನೀಡಿರುವ ಸಹಾಯಧನವನ್ನು ಚೆನ್ನಾಗಿ ಬಳಸಿಕೊಳ್ಳಬೇಕೆಂದು ತಿಳಿಸಿದರು ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಶ್ರೀ ಮತಿ ಭಾರತಿ ಎಸ್ ದಂಡೋತಿ. ಜಿ ತಮ್ಮಣ್ಣ. ಶರಣು ಆವುಂಟಿ. ಪ್ರಕಾಶ ನಿರೇಟಿ. ಹಾಗೂ ಇತರರು ಉಪಸ್ಥಿತರಿದ್ದರು .