ಮಳೆ ಹಾನಿ ಸಮೀಕ್ಷೆ ನಡೆಸಿ ಶೀಘ್ರ ವರದಿ ಸಲ್ಲಿಸಿ : ಶಾಸಕ ಈಶ್ವರ ಖಂಡ್ರೆ

ಭಾಲ್ಕಿ:ಜು.25: ತಾಲೂಕಿನ ತಹಸೀಲ್ಧಾರ ಕಛೇರಿಯಲ್ಲಿ ಭಾನುವಾರ ಅಧಿಕಾರಿಗಳ ತುರ್ತು ಸಭೆ ಉದ್ದೇಶಿಸಿ ಮಾತನಾಡಿದರು.
ತಾಲೂಕಿನ ವ್ಯಾಪಕ ಮಳೆಯಿಂದಾಗಿ ಮುಂಗಾರು ಹಂಗಾಮಿಗೆ ಒಳಪಟ್ಟ ಬೆಳೆಗಳಾದ ಸೋಯಾ, ಉದ್ದು, ಹೆಸರು, ಅವರೆ, ತರಕಾರಿ, ರೈತರ ಹೊಲಗಳಿಗೆ ನೀರು ನುಗ್ಗಿ ಬೆಳೆಗಳು ನಾಶವಾಗಿರುವುದು, ಮಾಂಜರಾ ನದಿ ತಡೆದ ಬಹುತೇಕ ಬೆಳೆಗಳು ಮುಳುಗಡೆ ಗೊಂಡಿವೆ. ಮತು ಬಡವರ ಮನೆಗಳು ಕುಸಿದು ಹೋಗಿವೆ ಹಾಗೂ ರಸ್ತೆಗಳು ಬ್ರಿಜ್ ಗಳು ಹಾಳಾಗಿವೆ ಹಾಗೂ ತಾಲೂಕಿನಾದ್ಯಂತ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳನ್ನು ಪಟ್ಟಿ ಮಾಡಿ ವರದಿ ಸಲ್ಲಿಸಬೇಕು.

ಮತು ಶಾಲಾ ಮಕ್ಕಳಿಗೆ ಯಾವುದೇ ತರಹದ ತೊಂದರೆಯಾಗದ ರೀತಿಯಲ್ಲಿ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು..

ಹಾಗಾಗಿ ತಕ್ಷಣ ಸರ್ಕಾರಕ್ಕೆ ಸಮೀಕ್ಷೆ ವರದಿ ಸಲ್ಲಿಸಬೇಕಾಗಿ ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಪ್ರಕೃತಿ ವಿಕೋಪದಡಿ ರೈತರಿಗೆ ಬೆಳೆನಾಶದ ಬಗ್ಗೆ, ಬಡವರ ಮನೆಗಳಿಗೆ ತಕ್ಷಣವೇ ಪರಿಹಾರ ಒದಗಿಸಲು ಕ್ರಮಗೊಳ್ಳಬೇಕು,ಕೃಷಿ,ತೋಟಗಾರಿಕೆ, ಮತ್ತು ಕಂದಾಯ ಅಧಿಕಾರಿಗಳು ಸೇರಿ ಜಂಟಿ ಬೆಳೆ ಹಾನಿ ಸಮೀಕ್ಷೆ ನಡೆಸಿ ತಕ್ಷಣ ಮಾಹಿತಿ ನೀಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.