ಮಳೆ ಹಾನಿ: ಸಂತ್ರಸ್ತರಿಗೆ, ರೈತರಿಗೆ ಸೂಕ್ತ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಶಾಸಕ ರಾಜಶೇಖರ ಪಾಟೀಲ ಸೂಚನೆ

ಬಸವಕಲ್ಯಾಣ,ಜು.17-ಹುಮನಾಬಾದ ಮತ ಕ್ಷೇತ್ರದ ಯರಬಾಗ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಶಾಸಕ ರಾಜಶೇಖರ ಬಿ.ಪಾಟೀಲ್ ಉದ್ಘಾಟಿಸಿದರು.
ಇದೇ ವೇಳೆ ಅವರು ವಸತಿ ಯೋಜನೆಯಲ್ಲಿ ಅರ್ಹ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ, ಸ್ಥಳದಲ್ಲಿಯೇ ಆಹಾರ ಪಡಿತರ ಚೀಟಿಯನ್ನು ವಿತರಿಸಿದ್ದರು. ಮಳೆಯಿಂದ ಹಾನಿಗೊಳಗಾದ ಸಂತ್ರಸ್ಥರಿಗೆ, ರೈತರಿಗೆ ಸರಕಾರದ ಕಾನೂನು ಚೌಕಟ್ಟಿನÀ ಅಡಿಯಲ್ಲಿ ಸೂಕ್ತ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದರು.
ರೈತರಿಗೆ ವಿದ್ಯುತ್ ತೊಂದರೆಯಾಗದಂತೆ ಸಮರ್ಪಕವಾಗಿ ವಿತರಿಸಲು ಸೂಚಿಸಿದರು. ಜನರು ಈ ಕಾರ್ಯಕ್ರಮದ ಸದುಪಯೊಗ ಪಡೆದುಕೊಳ್ಳಬೇಕು ಎಂದ ಅವರು ಅಧಿಕಾರಿಗಳು ಜನರ ಸಮಸ್ಸೆಯನ್ನು ಪ್ರಮಾಣಿಕವಾಗಿ ಆಲಿಸಿ ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಸೂಚಿಸಿದರು.
ಇದೇ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಸಮಿತಿ ಅಧ್ಯಕ್ಷÀ ಅಫ್ಸರ್‍ಮಿಯ್ಯಾ, ಗ್ರಾ.ಪಂ ನೂತನ ಅಧ್ಯಕ್ಷ ಬಸವರಾಜ ರಟಕಲ್, ಗ್ರಾ.ಪಂ ಉಪಾಧ್ಯಕ್ಷರಾದ ಲಕ್ಷ್ಮೀಬಾಯಿ ಡೊಂಗೆ, ತಾಲೂಕು ದಂಡಾಧಿಕಾರಿ ಸಾವೀತ್ರಿ ಸಲಗರ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕೀರಣ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಹಳ್ಳದ, ಹಾಗೂ ಎಲ್ಲಾ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾ.ಪಂ ಸರ್ವ ಸದಸ್ಯರುಗಳು ಹಾಗೂ ಸ್ಥಳಿಯ ಮುಖಂಡರಾದ ಬಸವರಾಜ ಗೌಣಿ, ಸಿದ್ದು ಚಿಕ್ಕನಗಾಂವ, ಬಾಬು ಬುಕ್ಕಾ, ಉಮೇಶ ಲಕ್ಕನಗಾಂವ, ಪ್ರಕಾಶ ಪೋಶೆಟ್ಟಿ, ಸಂಗಪ್ಪ ಮಾನಕರ, ಶಿವಪೂಜಿ ರಟಕಲ್, ವಿಶ್ವನಾಥ ವಾಡೇಕರ್, ಖಾಜಾ ಮಿಯ್ಯಾ, ಬಸವರಾಜ ಬಾವಗಿ, ನಾಗಪ್ಪ ಮೇತ್ರಿ, ಬಸವರಾಜ ಬಾಜಿಗರ, ರಮೇಶ ಲಾಲಪ್ಪ, ರವಿ ನಂದಿ, ಅರುಣ ಪೂಜಾರಿ, ಭೀಮಣ್ಣಾ ಪಾಟೀಲ್, ಹನೀಫ್ ಮುಲ್ಲಾ, ರಾಘವೇಂದ್ರ ಬಿರಾದಾರ, ಬಾಲಾಜಿ ರೆಡ್ಡಿ ಹಾಗೂ ಮುಂತಾದ ಪ್ರಮುಖರು ಉಪಸ್ಥಿತರಿದ್ದರು. ಹಣಮಂತ ಗೌಣಿ ಸ್ವಾಗತಿಸಿದರು. ಶಿವಕುಮಾರ ಕಾರ್ಯಕ್ರಮ ನಿರೂಪಿಸಿದರು.