ಮಳೆ ಹಾನಿ ಪ್ರದೇಶಕ್ಕೆ ಸಿದ್ದರಾಮಯ್ಯ ಭೇಟಿ

ಬಾದಾಮಿ,ಸೆ11 : ಮತಕ್ಷೇತ್ರದ ಮಲಪ್ರಭಾ ನದಿ ಪಾತ್ರದ ಗೋವನಕೊಪ್ಪ, ಹೆಬ್ಬಳ್ಳಿ, ಸುಳ್ಳ ಸೇರಿದಂತೆ ವಿವಿಧ ಗ್ರಾಮ ಮತ್ತು ಬೆಳೆ ಹಾನಿಯಾದ ಜಮೀನುಗಳಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭೇಟಿ ನೀಡಿದರು.
ಹಾನಿಯಾದ ಬೆಳೆಗಳಿಗೆ, ಬಿದ್ದ ಮನೆಗಳಿಗೆ ಕೂಡಲೆ ಪರಿಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಾದಾಮಿ ಪಟ್ಟಣದ ಆಶ್ರಯ ಕಾಲೋನಿಯಲ್ಲಿ ಮೂರು ಹಳ್ಳಗಳಿಂದ ಹಾಗೂ ಕಾಲುವೆ ನೀರು ಒಂದೆಡೆ ಸೇರಿ ಉಂಟಾದ ಭಾರೀ ನೀರು ನುಗ್ಗಿದ ಮನೆಗಳಿಗೆ ಭೇಟಿ ನೀಡಿ ಪರಿಹಾರ ನೀಡುವ ಕುರಿತು ತಹಸೀಲ್ದಾರ್ ಅವರಿಗೆ ಸಿದ್ದರಾಮಯ್ಯ ಸೂಚಿಸಿದರು.
ಕಾಲೋನಿಯ ಸರಕಾರಿ ಶಾಲೆ ಅಭಿವೃದ್ಧಿಗೆ ಸೂಕ್ತ ಅನುದಾನ ಒದಗಿಸಿ ಶಾಲೆಗೆ ಅವಶ್ಯ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಸಿದ್ದರಾಮಯ್ಯ ಅವರು ಶಾಲಾ ಸುಧಾರಣಾ ಸಮಿತಿ ನೀಡಿದ ಮನವಿ ಸ್ವೀಕರಿಸಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಮಹೇಶ ಹೊಸಗೌಡ್ರ, ಡಾ. ಎಂ.ಎಚ್.ಚಲವಾದಿ, ಸಂಜು ಬರಗುಂಡಿ, ಡಾ. ಎಂ.ಜಿ.ಕಿತ್ತಲಿ, ಪುರಸಭೆ ಸದಸ್ಯ ಮಂಜುನಾಥ ಹೊಸಮನಿ, ನಾಗರಾಜ ಕಾಚೆಟ್ಟಿ, ಪರಸು ರೋಣದ, ಮಾಂತೇಶ ತಳವಾರ, ಮಹಾಂತೇಶ ಹಟ್ಟಿ, ಎಸ್.ವೈ.ಕುಳಗೇರಿ, ಎಸಿ, ತಹಸೀಲ್ದಾರ್ ಜೆ.ಬಿ.ಮಜ್ಜಗಿ, ಸಿಪಿಐ ಕರಿಯಪ್ಪ ಬನ್ನೆ, ಪಿಎಸೈ ನೇತ್ರಾವತಿ ಪಾಟೀಲ, ಲೋಕೋಪಯೋಗಿ, ಜಿಪಂ, ತಾಪಂ ಅಧಿಕಾರಿಗಳು ಇದ್ದರು.